44ನೇ ವಯಸ್ಸಿನಲ್ಲಿ 4ನೇ ಮಗುವಿಗೆ ತಾಯಿ ಆಗ್ತಿದ್ದಾರೆ ಮಾಜಿ ಟೆನಿಸ್ ಆಟಗಾರ್ತಿ ಅನ್ನಾ ಕುರ್ನಿಕೋವಾ...anna kournikova

anna kournikova
Published on

anna kournikova : ಅನ್ನಾ ಕುರ್ನಿಕೋವಾ ಸಂಗಾತಿ, ಜನಪ್ರಿಯ ಸ್ಪ್ಯಾನಿಷ್ ಗಾಯಕ ಎನ್ರಿಕ್ ಇಗ್ಲೇಷಿಯಸ್ (50) ಈಗಾಗಲೇ ಮೂರು ಮಕ್ಕಳನ್ನು ಹೊಂದಿದ್ದು, ಇದೀಗ 44 ನೇ ವಯಸ್ಸಿನಲ್ಲಿ ನಾಲ್ಕನೇ ಬಾರಿಗೆ ತಾಯಿಯಾಗಲಿದ್ದಾರೆ ಎಂದು ಘೋಷಿಸುವ ಮೂಲಕ ತಮ್ಮ ಅಭಿಮಾನಿಗಳನ್ನು ಅಚ್ಚರಿಗೊಳಿಸಿದರು.

2001 ರಲ್ಲಿ ಎನ್ರಿಕ್ ಅವರ ಹಿಟ್ ವೀಡಿಯೊ ಚಿತ್ರೀಕರಣ ಮಾಡುವಾಗ ಇಬ್ಬರೂ ಭೇಟಿಯಾದರು. ಅಲ್ಲಿಂದ ಅವರ ಸಂಬಂಧ ಪ್ರಾರಂಭವಾಯಿತು. ಅಂದಿನಿಂದ ಅವರು ಒಟ್ಟಿಗೆ ಇದ್ದಾರೆ. ಈ ಜೋಡಿ ಕಳೆದ ಎರಡು ದಶಕಗಳಿಂದ ಮಿಯಾಮಿಯಲ್ಲಿ ವಾಸಿಸುತ್ತಿದೆ. ಇತ್ತೀಚೆಗೆ, ಇಬ್ಬರೂ ಬೇ ಪಾಯಿಂಟ್ ಪ್ರದೇಶದಲ್ಲಿ $6.5 ಮಿಲಿಯನ್ ಮೌಲ್ಯದ ಹೊಸ ಮನೆಯನ್ನು ಖರೀದಿಸಿದರು. ಇದು ಐದು ಮಲಗುವ ಕೋಣೆಗಳು ಮತ್ತು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಅನ್ನಾ ಮತ್ತು ಎನ್ರಿಕ್ ಮದುವೆಯಾಗಿದ್ದಾರೋ ಇಲ್ಲವೋ ಎಂಬುದು ಇನ್ನೂ ನಿಗೂಢವಾಗಿದೆ. ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆಂದು ತೋರುತ್ತದೆ. ಅವರು ಈಗಾಗಲೇ ಮದುವೆಯಾಗದೆ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ ಮತ್ತು ಶೀಘ್ರದಲ್ಲೇ ತಮ್ಮ ನಾಲ್ಕನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ.

ಕೆಲವು ತಿಂಗಳ ಹಿಂದೆ, ಅನ್ನಾ ವೀಲ್‌ಚೇರ್ ಮತ್ತು ರಕ್ಷಣಾತ್ಮಕ ಬೂಟುಗಳಲ್ಲಿ ಕಾಣಿಸಿಕೊಂಡ ನಂತರ ಅವರು ಗರ್ಭಿಣಿ ಎಂದು ತಿಳಿಯಿತ್ತು. ಅನ್ನಾ ಮತ್ತು ಎನ್ರಿಕ್‌ಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ. ಅವಳಿ ಮಕ್ಕಳಾದ ಲೂಸಿ ಮತ್ತು ನಿಕೋಲಸ್ 7 ವರ್ಷ ವಯಸ್ಸಿನವರಾಗಿದ್ದರೆ, ಕಿರಿಯ ಮಗಳು ಮೇರಿಗೆ 5 ವರ್ಷ.

14 ನೇ ವಯಸ್ಸಿನಲ್ಲಿ ಟೆನಿಸ್‌ನಲ್ಲಿ ವೃತ್ತಿಪರವಾಗಿ ಪಾದಾರ್ಪಣೆ ಮಾಡಿದರು. ಸಿಂಗಲ್ಸ್‌ನಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಟ್ರೋಫಿಯನ್ನು ಗೆಲ್ಲಲು ವಿಫಲವಾದರೂ, 1999 ಮತ್ತು 2002 ರಲ್ಲಿ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು. 1997 ಮತ್ತು 2001 ರ ನಡುವೆ, ಅವರು ಹಲವಾರು ಒತ್ತಡ ಮತ್ತು ಗಂಭೀರ ಗಾಯಗಳನ್ನು ಅನುಭವಿಸಿದರು. ಅಂತಿಮವಾಗಿ, 2003 ರಲ್ಲಿ, ಕೇವಲ 21 ನೇ ವಯಸ್ಸಿನಲ್ಲಿ, ಅವರು ವೃತ್ತಿಪರ ಟೆನಿಸ್‌ಗೆ ವಿದಾಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net