

Grandma Driving Rolls Royce : 72 ವರ್ಷದ ಭಾರತೀಯ ಮಹಿಳೆ ಮಣಿ ಅಮ್ಮ ದುಬೈನಲ್ಲಿ ರೋಲ್ಸ್ ರಾಯ್ಸ್ ಚಾಲನೆ ಮಾಡುತ್ತಿರುವ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ವೃದ್ಧ ಮಹಿಳೆಯ ಧೈರ್ಯವನ್ನು ನೆಟಿಜನ್‌ಗಳು ಹೊಗಳುತ್ತಿದ್ದಾರೆ.
72 ವರ್ಷದ ಮಣಿ ಸೀರೆ ಧರಿಸಿ ಸಂಪೂರ್ಣ ಆತ್ಮವಿಶ್ವಾಸದಿಂದ ಬಿಳಿ ರೋಲ್ಸ್ ರಾಯ್ಸ್ ಕಾರನ್ನು ಓಡಿಸುತ್ತಿರುವುದು ಕಂಡುಬರುತ್ತದೆ. ಮಣಿ ಅಮ್ಮ ಅವರನ್ನು ನೆಟಿಜನ್‌ಗಳು 'ದಿ ಡ್ರೈವರ್ ಅಮ್ಮ', ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಬಣ್ಣಿಸುತ್ತಿದ್ದಾರೆ.
ಕೇರಳದಲ್ಲಿ ಚಾಲನಾ ಶಾಲೆಯನ್ನು ( driving school ) ನಡೆಸುತ್ತಿದ್ದಾರೆ. 11 ರೀತಿಯ ವಾಹನಗಳನ್ನು ಓಡಿಸಲು ಪರವಾನಗಿ ಹೊಂದಿದ್ದಾರೆ. ಅವರು ಐಷಾರಾಮಿ ಕಾರುಗಳನ್ನು ಮಾತ್ರವಲ್ಲದೆ ರೋಡ್ ರೋಲರ್‌ಗಳು, ಕ್ರೇನ್‌ಗಳು, ಬಸ್‌ಗಳು ಮತ್ತು ಜೆಸಿಬಿಯಂತಹ ಅಗೆಯುವ ಯಂತ್ರಗಳನ್ನು ಸಹ ಸುಲಭವಾಗಿ ಓಡಿಸುತ್ತಾರೆ. ಮಣಿ ಅವರ ಪತಿ 1978ರಲ್ಲಿ ಚಾಲನಾ ಶಾಲೆಯನ್ನು ತೆರೆಯಲು ಪ್ರೋತ್ಸಾಹಿಸಿದರು. 2004ರಲ್ಲಿ ಪತಿಯ ಮರಣದ ನಂತರ ಮನೆಯನ್ನು ನಡೆಸಲು ಶಾಲೆಯ ಜವಾಬ್ದಾರಿಯನ್ನು ಅವರು ವಹಿಸಿಕೊಂಡರು.
ಕಳೆದ ವರ್ಷ, ಮಹೀಂದ್ರಾ ಮತ್ತು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಕೂಡ ಈ ಮಹಿಳೆ ಸ್ಟೋರಿಯನ್ನು ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಹಂಚಿಕೊಂಡಿದ್ದರು.