ಸುಂದರವಾಗಿದ್ದ ಈಕೆಯ ಮುಖ ಹೀಗೇಕಾಯಿತು? ಹುಡುಗಿಯ ಮಾತು ಕೇಳಿದ್ರೆ ಶಾಕ್​ ಆಗ್ತೀರಾ..!

Face
Published on

ಮನಿಲಾ: ಮುಖದಲ್ಲಿ ಸಣ್ಣ ಮೊಡವೆ ರೀತಿಯಲ್ಲಿ ಆರಂಭವಾದ ನಿಗೂಢ ಕಾಯಿಲೆಯೊಂದು ಇಂದು ಫಿಲಿಫೈನ್ಸ್​ ದೇಶದ ಅಪ್ರಾಪ್ತೆಯ ಇಡೀ ಮುಖವನ್ನೇ ಆವರಿಸಿಕೊಳ್ಳುತ್ತಿದ್ದು ದಿನದಿಂದ ದಿನಕ್ಕೆ ಬಲೂನ್​ ರೀತಿಯಲ್ಲಿ ಉಬ್ಬುತ್ತಿದೆ.

ಮೇರಿ ಅನ್​ ರೆಗಾಚೋ (17) ವಿಚಿತ್ರ ಕಾಯಿಲೆಗೆ ತುತ್ತಾದ ಹುಡುಗಿ. ಈಕೆ ಫಿಲಿಫೈನ್ಸ್​ನ ನುವಾ ಎಸಿಜಾ ಪಟ್ಟಣದ ನಿವಾಸಿ. ಕಳೆದ ವರ್ಷ ಮನೆಯಲ್ಲಿರುವಾಗ ಮೂಗಿನ ಪಕ್ಕದಲ್ಲಿ ಸಣ್ಣ ಗುಳ್ಳೆಯೊಂದು ಕಾಣಿಸಿಕೊಂಡಿತು. ರೆಗಾಚೋ ಆರಂಭದಲ್ಲಿ ಮೊಡವೆ ಇರಬಹುದು ಸರಿಹೋಗುತ್ತದೆ ಅಂದುಕೊಂಡಿದ್ದಳು. ಆದರೆ, ನೋವು ಆರಂಭವಾಗಿ ದಿನ ಕಳೆದಂತೆ ಗುಳ್ಳೆ ಬಲೂನ್​ ಥರ ಊದಿಕೊಳ್ಳುತ್ತಾ ಇಡೀ ಮುಖವನ್ನೇ ಆವರಿಸಿಕೊಂಡಿದೆ.

ಹದಿಹರೆಯದಲ್ಲಿ ಮದುವೆಯಾಗಿರುವ ರೆಗಾಚೋಗೆ ಒಂದು ವರ್ಷದ ಮಗನು ಸಹ ಇದ್ದಾನೆ. ಇನ್ನು ಪ್ರೌಢಾವಸ್ಥೆಯಲ್ಲಿ ಮತ್ತು ಗರ್ಭಧಾರಣೆ ಸಮಯದಲ್ಲಿ ಉಂಟಾಗುವ ಚರ್ಮ ಸಮಸ್ಯೆಗಳು ಹೊಸದೇನಲ್ಲ. ಅದರಿಂದ ಅಂತಹ ಪರಿಣಾಮಗಳೇನು ಬೀರುವುದಿಲ್ಲ. ಇನ್ನು ಗುಳ್ಳೆ ಆರಂಭವಾದ ಕೆಲ ದಿನಗಳವರೆಗೆ ಸುಮ್ಮನಿದ್ದ ರೆಚಾಗೋ ಕೊನೆಗೆ ತನ್ನ ತಾಳ್ಮೆ ಕಳೆದುಕೊಂಡು ಗುಳ್ಳೆಯನ್ನು ಹೊಡೆದು ಹಾಕಲು ಯತ್ನಿಸಿದಳು. ಅದಾದ ಕೆಲವೇ ದಿನಗಳಲ್ಲಿ ಆ ಜಾಗದಲ್ಲಿ ನೋವು ಮತ್ತು ಊದಿಕೊಳ್ಳಲು ಆರಂಭಿಸಿತು.

ಮುಖ ಸುತ್ತ ಬಲೂನ್​ ಥರ ಊದಿಕೊಂಡಿದ್ದು, ನೋವಿನ ಜತೆ ಉರಿಯ ಅನುಭವವೂ ಆಗುತ್ತದೆ ಎಂದು ರೆಚಾಗೋ ಹೇಳಿಕೊಂಡಿದ್ದಾಳೆ. ಇದೀಗ ಊದುತ್ತಿರುವ ಭಾಗ ಕಣ್ಣಗಳ ಮೂಲೆಗೂ ಹರಡುತ್ತಿದ್ದು, ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಆತಂಕದಲ್ಲಿದ್ದಾಳೆ. ಆರಂಭದಲ್ಲಿ ಅದೊಂದು ಸಾಮಾನ್ಯ ಮೊಡವೆ ಅಂದುಕೊಂಡಿದ್ದೆ. ಆದರೆ, ನನಗೆ ತುಂಬಾ ಘಾಸಿ ಮಾಡಿದೆ. ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರಿಸಲು ಆಗುತ್ತಿಲ್ಲ. ವಾಸಿ ಮಾಡಿಕೊಳ್ಳಲು ಎಲ್ಲ ಪ್ರಯತ್ನ ಮಾಡಿದೆ. ಆದರೆ, ಯಾವುದೂ ಫಲ ನೀಡಲಿಲ್ಲ. ಇನ್ನೆಂದು ನನ್ನ ಮುಖ ಮೊದಲಿನಂತಾಗುವುದಿಲ್ಲ ಎಂಬ ನೋವು ನನಗೆ ಕಾಡುತ್ತಿದೆ ಎಂದು ರೆಚಾಗೋ ಅಳಲು ತೋಡಿಕೊಂಡಿದ್ದಾಳೆ.

ಇನ್ನು ರೆಚಾಗೋ ಪತಿ ಅಲ್ಬರ್ಟ್​ ಸಲ್ಸ್​ ಸ್ಥಳೀಯ ತೋಟದಲ್ಲಿ ಪಾರ್ಟ್​ ಟೈ ಕೆಲಸ ಮಾಡುತ್ತಾರೆ. ಸದೃಢವಾದ ಆದಾಯವಿಲ್ಲದಿರುವುದರಿಂದ ವೈದ್ಯಕೀಯ ನೆರವು ಪಡೆದುಕೊಳ್ಳಲು ದಂಪತಿಗೆ ಸಾಧ್ಯವಾಗುತ್ತಿಲ್ಲ. ಸುಮಾರು ಒಂದು ವರ್ಷಗಳ ಕಾಲ ಸಾಕಷ್ಟು ಹೋರಾಟ ನಡೆಸಿರುವ ರೆಚಾಗೋ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಅವರಿರುವ ಏರಿಯಾದಲ್ಲಿ ಆಧುನಿಕ ಸೌಲಭ್ಯವಿರುವ ರೆಚಾಗೋ ಕಾಯಿಲೆಯನ್ನು ಕಂಡುಹಿಡಿಯುವಂತಹ ಸಾಧನಗಳಿಲ್ಲ. ಇದೀಗ ಚಿಕಿತ್ಸೆ ಕೊಡಿಸಲು ಸುಸಜ್ಜಿತ ಆಸ್ಪತ್ರೆ ಮೊರೆ ಹೋಗಬೇಕಾಗಿರುವುದರಿಂದ ಸಹಾಯಕ್ಕಾಗಿ ರೆಚಾಗೋ ಪತಿ ಮನವಿ ಮಾಡಿಕೊಂಡಿದ್ದಾರೆ.

ಯಾರಾದರೂ ಹಣದ ನೆರವು ನೀಡಿ ಎಂದು ವಿಡಿಯೋವೊಂದರಲ್ಲಿ ದಂಪತಿ ಮನವಿ ಮಾಡಿಕೊಂಡಿದ್ದಾರೆ. ನಾವು ದುಡಿಯುವುದು ನಮ್ಮ ಜೀವನಕ್ಕೆ ಮತ್ತು ಮಗು ಸಾಕುವುದಕ್ಕೆ ಸಾಕಾಗುತ್ತದೆ. ನಮ್ಮಿಂದ ವೈದ್ಯಕೀಯ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಯಾರಾದರೂ ಕರುಣೆ ತೋರಿ ಎಂದು ದಂಪತಿ ಬೇಡಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net