ನಗ್ನಳಾಗಿ ಸನ್​ಬಾತ್​ ಮಾಡುವಾಗ ಹೆಲಿಕಾಪ್ಟರ್​​ನಿಂದ ವಿಡಿಯೋ ಚಿತ್ರೀಕರಿಸಿದ! ಪೊಲೀಸ್​ ಅಧಿಕಾರಿ ಮೇಲೆ ಮಾಜಿ ಮಾಡೆಲ್​ ದೂರು

ಪೊಲಿಚಷೆ
Published on

ಲಂಡನ್​: ಇಂಗ್ಲೆಂಡ್​ನ ಮಾಜಿ ಮಾಡೆಲ್​ ಟ್ರೇಸಿ ಡಿಕ್ಸನ್ (54), ಪೊಲೀಸ್​ ಪೇದೆಯೊಬ್ಬರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಆಕೆ ತನ್ನ ತೋಟದಲ್ಲಿ ಬೆತ್ತಲೆಯಾಗಿ ಸನ್​ ಬಾತ್​ ಮಾಡುವಾಗ, ಪೊಲೀಸ್​ ಪೇದೆಯೊಬ್ಬ ಪೊಲೀಸ್​ ಹೆಲಿಕಾಪ್ಟರ್​ ಬಳಸಿಕೊಂಡು ಅವಳ ಬೆತ್ತಲೆ ವಿಡಿಯೋ ಚಿತ್ರೀಕರಿಸಿರುವುದಾಗಿ ಟ್ರೇಸಿ ಆರೋಪಿಸಿದ್ದಾರೆ.

ಇಂಗ್ಲೆಂಡ್​ನ ಯಾರ್ಕ್‌ಷೈರ್‌ ವಾಸಿ ಟ್ರೇಸಿ ಇತ್ತೀಚೆಗೆ ತಮ್ಮ ತೋಟದಲ್ಲಿ ಪೂರ್ತಿ ನಗ್ನರಾಗಿ ಸನ್​ ಬಾತ್​ ಮಾಡುತ್ತಿದ್ದರಂತೆ. ಈ ಸಮಯದಲ್ಲಿ ಅಲ್ಲಿ ಪೊಲೀಸ್​ ಹೆಲಿಕಾಪ್ಟರ್​ ಹಾರಾಡಿದೆ. ಅತ್ಯಂತ ಹೆಚ್ಚಿನ ಎಂಪಿ ಕ್ಯಾಮೆರಾಗಳನ್ನು ಹೊಂದಿರುವ ಹೆಲಿಕಾಪ್ಟರ್​ನಲ್ಲಿ (ಲಂಡನ್​ನಲ್ಲಿ ಇಂತಹ ಹೆಲಿಕಾಪ್ಟರ್​ಗಳ ಮೂಲಕ ಗಾಡಿಯ ನಂಬರ್​ ಪ್ಲೇಟ್​ನ್ನೂ ಗುರುತಿಸಲಾಗುವುದು) ಈಕೆಯ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಲಾಗಿದೆ. ಈಕೆಯ ಜತೆಗೆ ವಿದ್ಯಾಭ್ಯಾಸ ಮಾಡಿದ್ದ ಪೊಲೀಸ್​ ಪೇದೆ ಆಡ್ರಿಯನ್ ಪೊಗ್ಮೋರ್ ಈ ಕೆಲಸ ಮಾಡಿರುವುದಾಗಿ ಆರೋಪಿಸಲಾಗಿದೆ. ಈ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದ ಟ್ರೇಸಿ 2 ಕೋಟಿ ರೂಪಾಯಿ ಪರಿಹಾರ ಕೋರಿದ್ದಾಳೆ ಎನ್ನಲಾಗಿದೆ.

ಈ ಘಟನೆಯಾದ ಮೇಲೆ ನನಗೆ ಪೊಲೀಸರ ಮೇಲೆ ನಂಬಿಕೆಯೇ ಹೋಗಿದೆ. ಈತ ನನ್ನ ಸಹಪಾಠಿಯಾಗಿದ್ದರಿಂದ, ಎಷ್ಟು ವರ್ಷಗಳಿಂದ ನನ್ನನ್ನು ಹೀಗೆ ಫಾಲೋ ಮಾಡಿದ್ದಾನೆ ನನಗೆ ಗೊತ್ತಿಲ್ಲ. ಕಳ್ಳರನ್ನು ಹಿಡಿಯಲು ಕೊಟ್ಟಿರುವ ಹೆಲಿಕಾಪ್ಟರ್​ನ್ನು ಮೋಜಿಗಾಗಿ ಬಳಸುತ್ತಿದ್ದಾನೆ. ಈ ಹಿಂದೆ ಒಂದು ಸೆಕ್ಸ್​ ವಿಡಿಯೋವನ್ನೂ ಇದೇ ರೀತಿಯಲ್ಲಿ ಆತ ಶೂಟ್​ ಮಾಡಿದ್ದಾನೆ ಎಂದು ಟ್ರೇಸಿ ಆರೋಪಿಸಿದ್ದಾರೆ.

ತಾನು ಟ್ರೇಸಿಯ ನಗ್ನ ಚಿತ್ರ ತೆಗೆದಿರುವುದಾಗಿ ಆಡ್ರಿಯನ್ ತಪ್ಪೊಪ್ಪಿಕೊಂಡಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net