More

    ಮದುಮಗಳನ್ನು ಬಿಟ್ಟು ಪ್ರೇಯಸಿಗೆ ತಾಳಿ ಕಟ್ಟಿದ ಭೂಪ! ಮುಹೂರ್ತಕ್ಕೆ 2 ದಿನ ಬಾಕಿ ಇರುವಾಗ ಕೈಕೊಟ್ಟ ವರ

    ಮೈಸೂರು: ಮದುವೆಗೆ ಎರಡು ದಿನವಷ್ಟೇ ಬಾಕಿ ಇರುವಾಗ ಮದುಮಗ ತನ್ನ ಪ್ರೇಯಸಿಯನ್ನು ಮದುವೆಯಾಗಿ ಮದುಮಗಳು ಹಾಗೂ ಅವರ ಕುಟುಂಬದವರಿಗೆ ಶಾಕ್ ನೀಡಿದ್ದಾನೆ. ನಗರದ ಕೆ.ಆರ್.ಮೊಹಲ್ಲಾ ಸುಣ್ಣದಕೇರಿಯ 4ನೇ ಕ್ರಾಸ್ ನಿವಾಸಿಗಳಾದ ತಾಂಡೇಶ್-ಮೀನಾ ದಂಪತಿಯ ಪುತ್ರ ಟಿ. ಉಮೇಶ್, ತನ್ನ ಪ್ರೇಯಸಿ ಬನ್ನೂರಿನ ಶ್ರುತಿ ಎಂಬಾಕೆಯನ್ನು ಮದುವೆಯಾಗುವ ಮೂಲಕ ಅತ್ತ ಹೊಸ ಜೀವನಕ್ಕೆ ಕಾಲಿಟ್ಟಿದ್ದರೆ, ಇತ್ತ ದಿಕ್ಕು ಕಾಣದ ಮದುಮಗಳು ಈಗ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

    ಇದನ್ನೂ ಓದಿ: ಯಾವೆಲ್ಲ ಉದ್ಯೋಗಿಗಳ ಇಪಿಎಫ್ ಅನ್ನು ಕೇಂದ್ರ ಸರ್ಕಾರ ಭರಿಸಲಿದೆ?

    ಮದುವೆಗೆ ಸಿಂಗಾರಗೊಂಡು ಬುಧವಾರ ಹಸೆಮಣೆ ಏರಬೇಕಿದ್ದ ಮದುಮಗಳು ಈಗ ಉಮೇಶ್ ಮಾಡಿದ ಎಡವಟ್ಟಿನಿಂದ ನೊಂದು ಪೊಲೀಸ್ ಕಮೀಷನರ್ ಕಚೇರಿ ಮುಂದೆ ಕಣ್ಣೀರಿಡುವಂತಾಗಿದೆ. ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಉಮೇಶ್ ಹಾಗೂ ನಗರದ ನಾಲಾ ಬೀದಿಯ ಈಶ್ವರ-ವರಲಕ್ಷ್ಮೀ ದಂಪತಿಯ ಪುತ್ರಿ ಸಿಂಚನಾ ಅವರ ಮದುವೆ ನಿಶ್ಚಿತಾರ್ಥ ಲಾಕ್‌ಡೌನ್ ಸಮಯದಲ್ಲಿ ನಡೆದಿತ್ತು. ಡಿ.8 ಮತ್ತು 9ರಂದು ಮದುವೆ ದಿನಾಂಕ ನಿಗದಿಪಡಿಸಿದ್ದರು. ಆದರೆ, ಡಿ.5ರಂದು ಇದ್ದಕ್ಕಿದ್ದಂತೆ ಉಮೇಶ್ ಮನೆಯಿಂದ ನಾಪತ್ತೆಯಾಗಿದ್ದ. ಎರಡೂ ಕುಟುಂಬಗಳು ಆತನಿಗಾಗಿ ಹುಡುಕಾಟ ನಡೆಸಿದರೂ ಸುಳಿವು ಸಿಕ್ಕಿರಲಿಲ್ಲ. ಇದರಿಂದ ಆತಂಕಗೊಂಡ ಮದುಮಗಳ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಡಿ. 7ರಂದು ಪ್ರೇಯಸಿ ಶ್ರುತಿ ಜತೆ ಪೊಲೀಸ್ ಠಾಣೆಗೆ ಹಾಜರಾದ ಉಮೇಶ್, ಆರು ವರ್ಷದಿಂದ ನಾವಿಬ್ಬರೂ ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ಹೇಳಿಕೆ ನೀಡಿದ್ದಾನೆ. ಇಬ್ಬರೂ ವಯಸ್ಕರಾಗಿದ್ದರಿಂದ ಪೊಲೀಸರು ಬುದ್ದಿ ಹೇಳಿ ಕಳುಹಿಸಿದ್ದಾರೆ. ಹೊರಗೆ ಬರುತ್ತಿದ್ದಂತೆಯೇ ಠಾಣೆಯ ಮುಂದೆ ಇರುವ ಗಣಪತಿ ದೇವಸ್ಥಾನದಲ್ಲಿ ಉಮೇಶ್, ಶ್ರುತಿ ಕೊರಳಿಗೆ ತಾಳಿ ಕಟ್ಟಿದ್ದಾನೆ.

    ಇತ್ತ ಮದುವೆ ಸಿದ್ಧತೆ ಮಾಡಿಕೊಂಡು ಛತ್ರ ಗೊತ್ತುಪಡಿಸಿದ್ದಲ್ಲದೆ, ಸಾಮಾನು-ಸರಂಜಾಮು ಖರೀದಿಸಿ ತಂದಿದ್ದ ವಧು ಸಿಂಚನಾ ಕುಟುಂಬದವರು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪ್ರೀತಿ ವಿಚಾರವನ್ನು ಆತನ ಕುಟುಂಬದವರು ಮುಚ್ಚಿಟ್ಟಿದ್ದಾರೆ. ಇದರಿಂದ ನಮಗೆ ಅವಮಾನವಾಗಿದೆ. ಆತ ಯಾರೊಂದಿಗಾದರೂ ಮದುವೆಯಾಗಲಿ, ನಮಗೆ ಅಗಿರುವ ನಷ್ಟವನ್ನು ಕಟ್ಟಿಕೊಡಬೇಕು, ತಪ್ಪಿಗೆ ಶಿಕ್ಷೆಯಾಗಬೇಕು, ಮದುವೆ ಸಿದ್ಧತೆಗಾಗಿ ಮಾಡಿರುವ ಖರ್ಚನ್ನು ವಾಪಸ್ ಕೊಡಿಸಬೇಕು ಎಂದು ಮಧುವಿನ ಪಾಲಕರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆಯಾದ ನೂತನ ದಂಪತಿ ಸದ್ಯ ನಾಪತ್ತೆಯಾಗಿದ್ದಾರೆ.

    ಇದನ್ನೂ ಓದಿ: ಹೊಸ ನೇಮಕಾತಿಗೆ ಆತ್ಮನಿರ್ಭರ ಭಾರತ್ ರೋಜ್​ಗಾರ್ ಯೋಜನೆ ನೆರವು: 23,000 ಕೋಟಿ ರೂಪಾಯಿ ಮೀಸಲು

    ಮೊಬೈಲ್‌ಗೆ ಬಂದಿತ್ತು ಸಂದೇಶ: ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಉಮೇಶ್ ಶ್ರುತಿ ಜತೆಗಿನ ತನ್ನ ಪ್ರೀತಿಯ ವಿಚಾರವನ್ನು ಮುಚ್ಚಿಟ್ಟಿದ್ದ. ಆದರೆ ಕೆಲ ದಿನಗಳ ಹಿಂದೆ ಸಿಂಚನಾ ಅವರ ಮೊಬೈಲ್‌ಗೆ ಶ್ರುತಿ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ, ‘ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾಗಿನಿಂದ ನಾನು ಮತ್ತು ಉಮೇಶ್ ಪ್ರೀತಿಸುತ್ತಿದ್ದು, ಮದುವೆ ಅಗಲು ನಿರ್ಧರಿಸಿದ್ದೆವು. ಆದರೆ ಆತ ಮನೆಯವರ ಬಲವಂತದಿಂದ ನಿನ್ನನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಆದ್ದರಿಂದ ಆತನನ್ನು ಮರೆತುಬಿಡು ಎಂದು ಶ್ರುತಿ ಸಂದೇಶದಲ್ಲಿ ತಿಳಿಸಿದ್ದಳು. ಈ ವಿಷಯ ತಿಳಿದ ಸಿಂಚನಾ ಕುಟುಂಬದವರು ಉಮೇಶ್‌ನನ್ನು ಪ್ರಶ್ನಿಸಿದಾಗ, 10 ಲಕ್ಷ ರೂ. ಕೊಡುವಂತೆ ಶ್ರುತಿ ನನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ. ಹುಡುಗರನ್ನು ಬ್ಲಾಕ್‌ಮೇಲ್ ಮಾಡುವುದೇ ಆಕೆಯ ಕೆಲಸ ಎಂದು ಸಬೂಬು ಹೇಳಿ ನಂಬಿಸಿದ್ದನು ಎನ್ನಲಾಗಿದೆ.

    ಸಾಯುವ ಮುನ್ನ ಅಪ್ಪನಿಗೆ ಊಟ ಬಡಿಸಿದರು, ಆ ನಂತರ ಅಕ್ಕ-ತಂಗಿ ಇಬ್ಬರೂ ನೇಣಿಗೆ ಶರಣಾದರು!

    ನಟಿ ದಿವ್ಯಾ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಿಂದ ಬಯಲಾಯ್ತು ಪತಿಯ ನಿಜ ಬಣ್ಣ! ಅಪ್ತ ಸ್ನೇಹಿತೆ ಬಿಚ್ಚಿಟ್ಟ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts