More

    ಹೊಸ ನೇಮಕಾತಿಗೆ ಆತ್ಮನಿರ್ಭರ ಭಾರತ್ ರೋಜ್​ಗಾರ್ ಯೋಜನೆ ನೆರವು: 23,000 ಕೋಟಿ ರೂಪಾಯಿ ಮೀಸಲು

    ನವದೆಹಲಿ: ಕರೊನಾ ಸಂಕಷ್ಟದ ನಡುವೆಯೂ ಹೊಸ ನೇಮಕಾತಿ ನಡೆಸುವುದಕ್ಕೆ ಉದ್ಯಮಗಳಿಗೆ ನೆರವಾಗುವ ದೃಷ್ಟಿಯಿಂದ ಆತ್ಮನಿರ್ಭರ ಭಾರತ್ ರೋಜ್​ಗಾರ್ ಯೋಜನೆಗೆ 22,810 ಕೋಟಿ ರೂಪಾಯಿ ಒದಗಿಸುವ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ. ಆತ್ಮನಿರ್ಭರ ಭಾರತ ಪ್ಯಾಕೇಜ್ 3.0ರಲ್ಲಿ ಈ ಯೋಜನೆ ಜಾರಿಗೆ ಬರಲಿದೆ.

    ಔಪಚಾರಿಕ ಕ್ಷೇತ್ರದಲ್ಲಿ ಉದ್ಯೋಗ ಸೃಜನೆ ಮತ್ತು ಹೊಸ ಉದ್ಯೋಗ ಸೃಷ್ಟಿಗೆ ಇನ್​ಸೆಂಟಿವ್ಸ್ ಒದಗಿಸುವ ಪ್ರಸ್ತಾವನೆ ಇದಾಗಿದೆ. ಪ್ರಸಕ್ತ ಹಣಕಾಸು ವರ್ಷ 1,584 ಕೋಟಿ ರೂಪಾಯಿ ವ್ಯಯಿಸುವುದಕ್ಕೆ ಮತ್ತು 2020-2023 ಅವಧಿಯ ಒಟ್ಟು ಯೋಜನೆಗೆ 22,810 ಕೋಟಿ ರೂಪಾಯಿ ಮೀಸಲಿಡಲು ಸರ್ಕಾರ ತೀರ್ಮಾನಿಸಿದೆ.

    ಇದನ್ನೂ ಓದಿ:  ಗೋಹತ್ಯೆ ನಿಷೇಧ ವಿಧೇಯಕದಲ್ಲಿವೆ ಈ 25 ಕಠಿಣಾತಿಕಠಿಣ ನಿಯಮಗಳು!

    ಈ ಯೋಜನೆಯಲ್ಲಿ 2020ರ ಅಕ್ಟೋಬರ್ 1ರಂದು ಅಥವಾ ನಂತರದಿಂದ 2021ರ ಜೂನ್​ 30 ಒಳಗೆ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿದರೆ ಎರಡು ವರ್ಷ ಕಾಲ ಅವರ ಮತ್ತು ಕಂಪನಿಯ ಇಪಿಎಫ್ ಪಾಲು ಶೇಕಡ 24 (ಉದ್ಯೋಗಿಯ ಶೇಕಡ 12 ಮತ್ತು ಉದ್ಯೋಗದಾತರ ಶೇಕಡ 12) ಪಾಲನ್ನು ಸರ್ಕಾರವೇ ಪಾವತಿಸಲಿದೆ. ಗರಿಷ್ಠ 1,000 ಉದ್ಯೋಗಿಗಳಿರುವ ಕಂಪನಿಗಳು ಇದರ ಪ್ರಯೋಜನ ಪಡೆಯಬಹುದು. 1,000 ಮೇಲ್ಪಟ್ಟ ಉದ್ಯೋಗದಾತ ಕಂಪನಿಗಳ ಉದ್ಯೋಗಿಗಳ ಪಾಲಿನ ಇಪಿಎಫ್​​ ಅನ್ನು ಈ ಹಿಂದಿನಂತೆಯೇ ಎರಡು ವರ್ಷದ ಅವಧಿಗೆ ಸರ್ಕಾರವೇ ಭರಿಸಲಿದೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಲಾಕ್​ಡೌನ್ ಪರಿಣಾಮ ದುಪ್ಪಟ್ಟಾಯಿತು ಯುವಜನರ ವ್ಯಾಕುಲತೆ ಎನ್ನುತ್ತಿದೆ ಅಧ್ಯಯನ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts