More

    ಲಾಕ್​ಡೌನ್ ಪರಿಣಾಮ ದುಪ್ಪಟ್ಟಾಯಿತು ಯುವಜನರ ವ್ಯಾಕುಲತೆ ಎನ್ನುತ್ತಿದೆ ಅಧ್ಯಯನ ವರದಿ

    ಲಂಡನ್​: ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್​ 19 ಲಾಕ್​ಡೌನ್ ಅವಧಿಯಲ್ಲಿ ಯುವಜನರ ವ್ಯಾಕುಲತೆಯ ಮಟ್ಟವು ದುಪ್ಪಟ್ಟಾಗಿದೆ ಎಂಬುದಕ್ಕೆ ಹೊಸ ಸಂಶೋಧನೆ ಮತ್ತಷ್ಟು ಪುಷ್ಟಿ ನೀಡಿದೆ. ಕೋವಿಡ್ 19 ಸಂಕಷ್ಟ ಮತ್ತು ಲಾಕ್​ಡೌನ್​ನ ಆರಂಭಿಕ ಅವಧಿಯಲ್ಲಿ ಯುವಜನರ ಮಾನಸಿಕ ತಳಮಳವು ಶೇಕಡ 13ರಿಂದ ಶೇಕಡ 24ಕ್ಕೆ ಹೆಚ್ಚಾಗಿದೆ ಎಂದು ಬ್ರಿಟಿಷ್‌ ಜರ್ನಲ್‌ ಆಫ್‌ ಸೈಕ್ಯಾಟ್ರಿಯಲ್ಲಿ ಪ್ರಕಟವಾದ ಅಧ್ಯಯನ ವರದಿ ಬಹಿರಂಗಪಡಿಸಿದೆ.

    ಚಿಲ್ಡ್ರನ್ ಆಫ್ ದ ನೈಂಟೀಸ್(Children of the 90s) ಎಂದೇ ಪ್ರಸಿದ್ಧವಾಗಿರುವ ಅವೋನ್ ಲಾಂಜಿಟ್ಯೂಡಿನಲ್ ಸ್ಟಡಿ ಆಫ್ ಪೇರೆಂಟ್ಸ್ ಆ್ಯಂಡ್ ಚಿಲ್ಡ್ರನ್ ತಯಾರಿಸಿದ ಪ್ರಶ್ನಾವಳಿಯನ್ನು ಬಳಸಿ ಸಂಗ್ರಹಿಸಿದ ದತ್ತಾಂಶ ಆಧರಿಸಿ ಈ ಅಧ್ಯಯನ ವರದಿ ಸಿದ್ಧಪಡಿಸಲಾಗಿದೆ. ಈ ದತ್ತಾಂಶ ಪ್ರಕಾರ, ಯುವಜನರು ವಿಶೇಷವಾಗಿ 27 ರಿಂದ 29 ವರ್ಷ ವಯೋಮಾನದವರು ರಾಷ್ಟ್ರಮಟ್ಟದ ಮೊದಲ ಲಾಕ್​ಡೌನ್ ಅವಧಿಯಲ್ಲಿ ಗರಿಷ್ಠ ಮಟ್ಟದ ಮಾನಸಿಕ ತಳಮಳ ಅನುಭವಿಸಿದ್ದು ಕಂಡುಬಂದಿದೆ. ಇದು ಅವರ ಪಾಲಕರಿಗಿಂತಲೂ ಅಧಿಕ ಪ್ರಮಾಣದಲ್ಲಿತ್ತು.

    ಇದನ್ನೂ ಓದಿ: ‘ಹೆಂಡ್ತಿ ಹೆದರಿಸ್ತಿದಾಳೆ, ರಜೆ ಕೊಡಿ’ ವಿಚಿತ್ರವಾಗಿ ಈ ಪೇದೆಯ ಲೀವ್​ ಲೆಟರ್​

    ಈ ಅವಧಿಯಲ್ಲಿ ಮಾನಸಿಕ ಆರೋಗ್ಯ (ವಿಶೇಷವಾಗಿ ವ್ಯಾಕುಲತೆ ನಿರ್ವಹಣೆ) ರಕ್ಷಿಸುವುದು ಮತ್ತು ಮಾನಸಿಕ ಆರೋಗ್ಯ ಸೇವೆಗಳ ಬೆಂಬಲ ಒದಗಿಸುವುದು ಅತೀ ಅಗತ್ಯ ಎಂಬುದನ್ನು ಅಧ್ಯಯನ ವರದಿ ಒತ್ತಿ ಹೇಳಿದೆ.
    ರೆಬೆಕಾ ಪಿಯರ್​ಸನ್​, ಅಧ್ಯಯನ ವರದಿಯ ಲೇಖಕಿ, ಯೂನಿವರ್ಸಿಟಿ ಆಫ್ ಬ್ರಿಸ್ಟನ್​, ಯುಕೆ

    ಬಹಳ ವಿವರಪೂರ್ಣವಾಗಿರುವ ಚಿಲ್ರನ್‌ ಆಫ್‌ ದ ನೈನ್ಟೀಸ್‌ ಪ್ರಶ್ನಾವಳಿ ಮಾಹಿತಿಗಳು ಯುವಜನರಲ್ಲಿ ಮಾನಸಿಕ ಆತಂಕದ ಚಿಂತಾಜನಕ ಹೆಚ್ಚಳವನ್ನು ಸೂಚಿಸುತ್ತದೆ. ಕರೋನಾ ವ್ಯಾಧಿಯ ಕಾರಣದಿಂದಾಗಿ ಮತ್ತು ಕರೋನಾ ಹಬ್ಬುವುದನ್ನು ನಿಯಂತ್ರಿಸಲು ಬಳಸಲಾದ ಲಾಕ್​ಡೌನ್‌ ವಿಧಾನಗಳ ಸಾಮಾಜಿಕ ಹಾಗೂ ಆರ್ಥಿಕ ಅಡ್ಡ ಪರಿಣಾಮಗಳಿಂದಾಗಿ ಈ ಹೆಚ್ಚಳವಾಗಿದೆ ಎಂದು ಭಾಸವಾಗುತ್ತದೆ.
    ಅಲೆಕ್ಸ್‌ ಕ್ವಾಂಗ್‌ ಸಂಶೋಧಕ

    ವ್ಯಾಕುಲತೆಯ ಮಟ್ಟ ತದನಂತರ ಲಾಕ್​ಡೌನ್​ ನಿಬಂಧನೆಗಳನ್ನು ಜೂನ್‌ ತಿಂಗಳಲ್ಲಿ ಸರಳೀಕರಿಸಿದಾಗಲೂ ಹೆಚ್ಚಾಗಿಯೇ ಮುಂದುವರಿದವು ಹಾಗೂ ಈ ಚಳಿಗಾಲದಲ್ಲಿ ಅದೇ ರೀತಿಯ ಸನ್ನಿವೇಶವನ್ನು ಅಪೇಕ್ಷಿಸಬಹುದಾಗಿದೆ ಎಂದೂ ಸಹ ಸಂಶೋಧಕರು ಕಂಡುಕೊಂಡಿದ್ದಾರೆ. ಈ ಪರಿಸ್ಥಿತಿಯು ಮಾನಸಿಕ ಆರೋಗ್ಯ ಸಮಸ್ಯೆಗಳ ಇತಿಹಾಸ ಹೊಂದಿದ ವ್ಯಕ್ತಿಗಳಲ್ಲಿ, ಮಹಿಳೆಯರಲ್ಲಿ ಮತ್ತು ಕರೋನಾ ಮುಂಚಿನ ಕಾಲದಲ್ಲಿ ಆರ್ಥಿಕ ಸಮಸ್ಯೆಗಳನ್ನೆದುರಿಸಿದ್ದ ಜನರಲ್ಲಿ ಇನ್ನೂ ಹದಗೆಡಬಹುದು ಎಂದೂ ಹೇಳಲಾಗಿದೆ.
    ಮಾನಸಿಕ ಆರೋಗ್ಯದ ಮೇಲೆ ಕೋವಿಡ್​ 19 ಪರಿಣಾಮದ ಬಗೆಗಿನ ಸರ್ಕಾರದ ತಿಳಿವಳಿಕೆ ಮತ್ತು ಅದು ತಯಾರಿಸುವ ನೀತಿಯ ಮೇಲೆ ಪ್ರಭಾವ ಬೀರುವುದಕ್ಕಾಗಿ ʼಪಬ್ಲಿಕ್‌ ಹೆಲ್ತ್‌ ಇಂಗ್ಲೆಂಡ್‌ ʼಈ ಅಧ್ಯಯನದ ಫಲಿತಾಂಶಕ್ಕೆ ಹೆಚ್ಚಿನ ಒತ್ತು ನೀಡಿದೆ. ಮಾನಸಿಕ ಖಿನ್ನತೆಯು ಒಟ್ಟಾರೆಯಾಗಿ ಹೆಚ್ಚಾಗಿತ್ತೆಂಬುವುದಕ್ಕೆ ಯಾವುದೇ ಆಧಾರಗಳಿಲ್ಲದಿದ್ದರೂ, ಕೆಲವು ನಿರ್ದಿಷ್ಟ ಜನರ ಗುಂಪುಗಳು ಕರೋನಾ ಸಂದರ್ಭದಲ್ಲಿ ಖಿನ್ನತೆ ಮತ್ತು ಆತಂಕವನ್ನು ಹೆಚ್ಚಿನ ಮಟ್ಟಗಳಲ್ಲಿ ಅನುಭವಿಸುವುದಾಗಿ ಕಂಡುಬಂದಿದೆ.

    ಇದನ್ನೂ ಓದಿ: ಪ್ರಿಯತಮೆಯನ್ನೇ ಕೊಚ್ಚಿ ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ; ಏಳು ವರ್ಷ ಹಿಂದಿನ ಪ್ರಕರಣ ಅಂತ್ಯ

    ಬ್ರಿಸ್ಟಲ್‌ ನ ʻಚಿಲ್ರನ್‌ ಆಫ್‌ ದ ನೈನ್ಟೀಸ್‌ʼ ಆರೋಗ್ಯ ಅಧ್ಯಯನವು 1991-92ರಲ್ಲಿ 14,500 ಗರ್ಭಿಣಿ ತಾಯಂದಿರನ್ನು ದಾಖಲು ಮಾಡಿಕೊಂಡಿದ್ದು, ತಾಯಂದಿರ ಮತ್ತು ಸದ್ಯದಲ್ಲೇ 30 ವರ್ಷ ಪೂರೈಸಲಿರುವ ಅವರ ಶಿಶುಗಳ ಬಗ್ಗೆ ಮೂರು ದಶಕಗಳಷ್ಟರ ಸವಿವರವಾದ ಆರೋಗ್ಯ ಮತ್ತು ಜೀವನಶೈಲಿಯ ಮಾಹಿತಿಯನ್ನು ಸಂಗ್ರಹ ಮಾಡಿದೆ. ಪ್ರಸ್ತುತ ಅಧ್ಯಯನಕ್ಕಾಗಿ ಸಂಶೋಧಕರು, ಭಾಗವಹಿಸಿರುವ ಜನರ ಈ ಹಿಂದಿನ ವರ್ಷಗಳ ಮಾಹಿತಿಯನ್ನು 2020ರಲ್ಲಿ ಕೋವಿಡ್‌ -19ರ ಎರಡು ಪ್ರಶ್ನಾವಳಿಗಳ ಫಲಿತಾಂಶಗಳೊಂದಿಗೆ ಹೋಲಿಸಿ ಮಾನಸಿಕ ಆರೋಗ್ಯದ ಮೇಲೆ ಕರೋನಾದ ಪರಿಣಾಮವನ್ನು ಅರ್ಥೈಸಿಕೊಂಡಿದ್ದಾರೆ. ಅಧ್ಯಯನಕ್ಕೊಳಗಾದವರಲ್ಲಿ ಕೆಲವು ಗುಂಪುಗಳು, ಅವರ ಖಿನ್ನತೆ ಮತ್ತು ಆತಂಕದ ಇತಿಹಾಸವನ್ನು ಲೆಕ್ಕಕ್ಕೆ ತೆಗೆದುಕೊಂಡಾಗ್ಯೂ, ಅಧಿಕ ಆತಂಕ ಅಥವಾ ಖಿನ್ನತೆ ಅಥವಾ ಎರಡೂ ಸಮಸ್ಯೆಗಳ ಹೆಚ್ಚಿನ ಅಪಾಯಕ್ಕೆ ಒಳಗಾಗಿದ್ದು ಕಂಡುಬಂದಿದೆ.

    ಇದನ್ನೂ ಓದಿ: 2ಎ ಮೀಸಲು ಮುಂದುವರಿಸುವಂತೆ ಬಲಿಜ ಸಮುದಾಯದ ಮುಖಂಡರ ಒತ್ತಾಯ

    ಅಗತ್ಯ ಸೇವೆಗಳಲ್ಲಿ ಅಥವಾ ಆರೋಗ್ಯ ಸೇವಾ ಕಾರ್ಯಕರ್ತರಲ್ಲಿ ಮಾನಸಿಕ ಆತಂಕದ ಅಪಾಯದಲ್ಲಿ ಹೆಚ್ಚಳವಾದುದಕ್ಕೆ ಯಾವುದೇ ಪುರಾವೆ ಸಂಶೋಧಕರಿಗೆ ಲಭಿಸಿಲ್ಲ. ಈ ಫಲಿತಾಂಶಗಳನ್ನು ಯುವಪೀಳಿಗೆ ಮತ್ತು ಹಿರಿಯ ಪೀಳಿಗೆಗಳೆರಡರಲ್ಲೂ ಗಮನಿಸಲಾಗಿದ್ದು, ಇದೇ ತೆರನಾದ ಮಾಹಿತಿಯು ಸ್ಕಾಟ್ಲಾಂಡಿನ 4000 ವ್ಯಕ್ತಿಗಳ ಮತ್ತೊಂದು ಗುಂಪಿನಲ್ಲಿ ಕೂಡ ಯಥಾರೂಪವಾಗಿ ಕಂಡುಬಂದಿದೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಪ್ರಿಯತಮೆಯನ್ನೇ ಕೊಚ್ಚಿ ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ; ಏಳು ವರ್ಷ ಹಿಂದಿನ ಪ್ರಕರಣ ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts