More

    2ಎ ಮೀಸಲು ಮುಂದುವರಿಸುವಂತೆ ಬಲಿಜ ಸಮುದಾಯದ ಮುಖಂಡರ ಒತ್ತಾಯ

    ಹೊಸಪೇಟೆ: ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆಯುಳ್ಳ ಬಲಿಜ ಜನಾಂಗವನ್ನು ಮೊದಲಿನಂತೆ 2ಎ ಮೀಸಲಿನಲ್ಲೇ ಮುಂದುವರಿಸಬೇಕು ಎಂದು ಆಗ್ರಹಿಸಿ ಬಲಿಜ ಸಮುದಾಯದ ಮುಖಂಡರು ತಹಸೀಲ್ದಾರ್ ಎಚ್.ವಿಶ್ವನಾಥರಿಗೆ ಬುಧವಾರ ಮನವಿ ಸಲ್ಲಿಸಿದರು.

    ಸಮುದಾಯದ ಅಧ್ಯಕ್ಷ ಎನ್.ಟಿ.ರಾಜು ಮಾತನಾಡಿ, 1994ರಲ್ಲಿ ವೀರಪ್ಪ ಮೋಯ್ಲಿ ಸರ್ಕಾರ 2ಎ ಮೀಸಲಿನಲ್ಲಿದ್ದ ಜನಾಂಗವನ್ನು ಏಕಾಏಕಿ 3ಎ ಗೆ ವರ್ಗಾಯಿಸಿರುವುದು ಖಂಡನೀಯ. ಬಲಿಜ ಜನಾಂಗಕ್ಕೆ ಸಾಮಾಜಿಕ ಉದ್ಯೋಗ, ಆರ್ಥಿಕ, ರಾಜಕೀಯ, ಶೈಕ್ವಣಿಕವಾಗಿ ಅಭಿವೃದ್ಧಿ ಹೊಂದಲು 1994ರ ಮುಂಚಿನಂತೆ ಇದ್ದ 2ಎ ಮೀಸಲನ್ನು ಮುಂದುವರಿಸಬೇಕು. ಬಲಿಜ ಸಮಾಜ ಕೇವಲ ಕೂಲಿ, ಬಳೆ, ಹೂ-ಹಣ್ಣು, ಕುಂಕುಮ ಮತ್ತಿತರ ಸಣ್ಣ ವ್ಯಾಪಾರಗಳನ್ನೇ ಅವಲಂಬಿಸಿ ಜೀವನ ನಡೆಸುತ್ತಿದೆ. ಸಮಾಜದ ಯುವಕರು ಉನ್ನತ ಶಿಕ್ಷಣ, ಹುದ್ದೆಗಳಿಂದ ವಂಚಿತರಾಗಿದ್ದಾರೆ. ಈ ಹಿಂದೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಬಡ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

    ಸಮುದಾಯದ ಗೌರವಾಧ್ಯಕ್ಷ ರವಿಕುಮಾರ್, ಕಾರ್ಯಾಧ್ಯಕ್ಷ ಕೆ.ಶಿವಾನಂದ, ಕಾರ್ಯದರ್ಶಿ ಮಧುಸೂದನ, ಖಜಾಂಚಿ ಪಾಂಡುರಂಗ, ಜಂಟಿ ಕಾರ್ಯದರ್ಶಿ ಜಿ.ರಾಜೇಂದ್ರ (ಭೋಜ), ಬಲಿಜ ಯುವ ಸೇನೆ ಅಧ್ಯಕ್ಷ ಕೆ.ವೀರಣ್ಣ, ಸಂಘಟನಾ ಕಾರ್ಯದರ್ಶಿ ಕೆ.ದುರ್ಗಾಪ್ರಸಾದ್, ಪದಾಧಿಕಾರಿಗಳಾದ ಗೀತಾ ಶಂಕರ್, ಎಂ.ಶ್ರೀನಿವಾಸ್, ವೇಣುಗೋಪಾಲ್, ಎಚ್.ಶ್ರೀನಿವಾಸ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts