ಸೆಲ್ಫಿ ವ್ಯಾಮೋಹಕ್ಕೆ ಕ್ಷಣಾರ್ಧದಲ್ಲೇ ಹೋಯ್ತು ಯುವಕನ ಪ್ರಾಣ: ಸ್ನೇಹಿತರ ಮುಂದೆಯೇ ನಡೆದ ಘಟನೆ

railway bridge
ಸಾಂದರ್ಭಿಕ ಚಿತ್ರ
Published on

ಮಥುರಾ: ಯುವಕನೊಬ್ಬ ಸ್ನೇಹಿತರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.

ಇದನ್ನೂ ಓದಿ: ನವಜಾತ ಶಿಶುವಿನ ಪ್ರಾಣ ತೆಗೆದು ಹೂತಿಟ್ಟ ಮಹಿಳೆ: ಮೃತದೇಹವನ್ನು ಮೇಲೆತ್ತಿ ಎಳೆದಾಡಿದ ಬೀದಿ ನಾಯಿಗಳು

ಮೃತನನ್ನು ವಂಶ್ ಎಂದು ಗುರುತಿಸಲಾಗಿದ್ದು, ಬೆಳಿಗ್ಗೆ ತನ್ನ ಮೂವರು ಸ್ನೇಹಿತರೊಂದಿಗೆ ದ್ವಾರಕಾ ಧೀಶ್ ದೇವಸ್ಥಾನಕ್ಕೆ ಭೇಟಿ ನೀಡಲು ಹೋಗಿದ್ದರು. ಈ ವೇಳೆ ಹೋಳಿ ಗೇಟ್‌ನಲ್ಲಿ ವಾಹನ ದಟ್ಟಣೆಯಿಂದಾಗಿ ಮೂವರು ಜಮುನಾ ಪರ್ ಪ್ರದೇಶದ ತಿವಾರಿಪುರಂ ಕಡೆಗೆ ತೆರಳಿ ಅಲ್ಲಿ ಸ್ಕೂಟರ್ ನಿಲ್ಲಿಸಿ ಸೇತುವೆಯ ಮೇಲೆ ಸೆಲ್ಫಿ ತೆಗೆದುಕೊಳ್ಳಲಾರಂಭಿಸಿದರು.

ಈ ವೇಳೆ ರೈಲು ಬಂದಿದ್ದು, ಎಲ್ಲರೂ ಸೇತುವೆಯ ಒಂದು ಬದಿಗೆ ತೆರಳಲು ಯತ್ನಿಸಿದ್ದಾರೆ, ಈ ಪ್ರಯತ್ನದಲ್ಲಿ ಉಳಿದವರು ಪಾರಾಗಿದ್ದು, ವಂಶ್​​ಗೆ ರೈಲು ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕುರಿತು ಪ್ರತಿಕ್ರಿಯಿಸಿದ ಎಸ್‌ಎಸ್‌ಪಿ ಶೈಲೇಶ್‌ ಕುಮಾರ್‌ ಪಾಂಡೆ, ನದಿ ದಡಗಳು ಮತ್ತು ರೈಲ್ವೆ ಹಳಿಗಳಂತಹ ಅಪಾಯಕಾರಿ ಸ್ಥಳಗಳ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಜಾಗರೂಕರಾಗಿರಿ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net