More

    ಯುವಕನ ತಲೆ ಬೋಳಿಸಿ, ಹಣ ದೋಚಿ ಆತನ ಮೇಲೆ ಮೂತ್ರ ವಿಸರ್ಜಿಸಿದ ತೃತಿಯಲಿಂಗಿಗಳು..

    ಕಾಸ್‌ಗಂಜ್‌: ತೃತೀಯಲಿಂಗಿಗಳ ಗುಂಪೊಂದು ವ್ಯಕ್ತಿಯೊಬ್ಬನನ್ನು ಥಳಿಸಿ, ತಲೆ ಬೋಳಿಸಿ ಮೂತ್ರ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್​​ನಲ್ಲಿ ನಡೆದಿದೆ.

    ಇದನ್ನೂ ಓದಿ: ಹಾಸ್ಟೆಲ್‌, ಪಿಜಿಗಳಿಗೆ ಶಾಕ್​​: ಶೇ.12 ಜಿಎಸ್​ಟಿ ಅನ್ವಯ ಎಂದ ಎಎಆರ್

    ಯುವಕನ್ನು ರಫಿಕುಲ್​ ಎಂದು ಗುರುತಿಸಲಾಗಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಾಲ್ಕು ದಿನಗಳ ಹಿಂದೆ ತೃತೀಯಲಿಂಗಿಗಳ ಗುಂಪೊಂದು ಯುವಕನೊಂದಿಗೆ ಅಮಾನವೀಯವಾಗಿ ವರ್ತಿಸಿದ್ದು, ಯುವಕನ ಮೇಲೆ ಹಲ್ಲೆ ನಡೆಸಿ ಮೂತ್ರ ವಿಸರ್ಜನೆ ಮಾಡಿ ಈತನಿಂದ 1 ಸಾವಿರ ಲೂಟಿ ಮಾಡಿದ್ದಾರೆ.

    ಯುವಕನ ದೂರಿನ ಪ್ರಕಾರ, ಗುರುವಾರದಂದು ಸಂಜೆ ಕಾಸ್‌ಗಂಜ್‌ನಿಂದ ಹಿಂತಿರುಗುತ್ತಿದ್ದಾಗ ಜೊಹ್ರಿ ಇಟ್ಟಿಗೆ ಗೂಡು ಬಳಿ ತೃತೀಯಲಿಂಗಿಗಳ ಗುಂಪು ತನ್ನನ್ನು ಸುತ್ತುವರಿದು ಹಲ್ಲೆ ನಡೆಸಿತು. ಅವರು ತನ್ನ ತಲೆಯನ್ನು ಬೋಳಿಸಿ, ಗದರಿಸಿದ್ದಾರೆ. ಇದಾದ ನಂತರ ತಾನು ಅಳುತ್ತಿದ್ದಾಗ ಮತ್ತೊಬ್ಬ ತನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಅಲ್ಲದೇ, ತನ್ನಿಂದ ಒಂದು ಸಾವಿರ ರೂಪಾಯಿ ನಗದನ್ನು ದೋಚಿದ್ದಾರೆ ಎಂದು ಹೇಳಿದ್ದಾನೆ.

    ಗಲಾಟೆ ಕೇಳಿ ಬಂದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದವರು ರಕ್ಷಣೆ ಮಾಡಿದ್ದಾರೆ. ಸಂತ್ರಸ್ತೆ ಸಹಾವರ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಯುಪಿ ಪೊಲೀಸರು ಅಮಾನವೀಯ ಕೃತ್ಯಕ್ಕೆ ಸಂಬಂಧಿಸಿದಂತೆ ತೃತೀಯಲಿಂಗಿಗಳನ್ನು ಬಂಧಿಸಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts