ಆಲಿಯಾ, ಸುಶಾಂತ್​ ಇಬ್ಬರಲ್ಲಿ ಯಾರು ಕ್ಯೂಟ್​; ಕಂಗನಾ ಮುಂದಿಟ್ಟಿದ್ದಾರೆ ಹೀಗೊಂದು ಪ್ರಶ್ನೆ...

Kangana
Published on

ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡ ಬಳಿಕ ನೆಪೋಟಿಸಂ ವಿಚಾರ ಬಾಲಿವುಡ್​ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಕಂಗನಾ ರಣಾವತ್​ ಯಾರನ್ನೂ ಬಿಡದೆ, ಸಿಕ್ಕಸಿಕ್ಕವರನ್ನು ಟಾರ್ಗೆಟ್​ ಮಾಡಿ ಹಲವಾರು ವಿಚಾರಗಳನ್ನು ಕೆದಕಿ ಎಲ್ಲರನ್ನೂ ಹೈರಾಣು ಮಾಡುತ್ತಿದ್ದಾರೆ. ಇದೀಗ ಮತ್ತೆ ಆಲಿಯಾ ಭಟ್​ ಸುದ್ದಿಗೆ ಬಂದಿದ್ದಾರೆ.

ತಾಪ್ಸೀ ಪನ್ನು, ಕರಣ್​ ಜೋಹರ್​, ಹೃತಿಕ್​ ರೋಷನ್​, ಹಲವು ನಿರ್ದೇಶಕರು, ನಿರ್ಮಾಪಕರ ವಿರುದ್ಧ ಹರಿಹಾಯ್ದಿದ್ದ ಕಂಗನಾ ಇದೀಗ ಆಲಿಯಾ ಬಗ್ಗೆ ಮಾತನಾಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಆಲಿಯಾ ಬಾಲ್ಯದ ಫೋಟೋ ಹಂಚಿಕೊಂಡಿದ್ದೇ ತಡ, ಅದನ್ನೇ ಗುರಿಯಾಗಿಸಿಕೊಂಡು ಕಮೆಂಟ್​ ಮಾಡಿದ್ದಾರೆ.

ಆಲಿಯಾ ಫೋಟೋದ ಜತೆಗೆ ಸುಶಾಂತ್​ ಸಿಂಗ್​ ಫೋಟೋ ಸೇರಿಸಿ, ‘ಇಬ್ಬರಲ್ಲಿ ಯಾರು ಕ್ಯೂಟ್​’ ಎಂದಿದ್ದಾರೆ. ಅಷ್ಟೇ ಅಲ್ಲ ‘ಮೂಗಿ, ಹತ್ತನೇ ತರಗತಿಯನ್ನೂ ಪಾಸ್​ ಆಗದ, ನಟನೆ ಬಾರದ ಆಲಿಯಾನಾ ಅಥವಾ ಭೌತಶಾಸ್ತ್ರ ಒಲಿಂಪಿಯಾಡ್ ವಿಜೇತ, ಅದ್ಬುತ ನಟ ಸುಶಾಂತ್​.. ಇಬ್ಬರಲ್ಲಿ ಯಾರು ಕ್ಯೂಟ್​’ ಎಂದಿದ್ದಾರೆ.

ಅಷ್ಟೇ ಅಲ್ಲ ಈಗಾಗಲೇ ಎ ಲಿಸ್ಟ್ ನಲ್ಲಿರರುವ ನಟಿಯರೊಂದಿಗೂ ಸಾಮ್ಯತೆ ಮಾಡುವಂತೆ ಹೇಳಿದ್ದಾರೆ. ಕಂಗನಾ ಮಾಡಿದ ಈ ಕೆಲಸಕ್ಕೆ ಒಂದಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದರೆ. ಮತ್ತೆ ಕೆಲವರು ಕಂಗನಾ ನಿಮ್ಮ ಸಣ್ಣತನ ಸಾಕಿನ್ನು ಎಂದು ತೆಗಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net