ತೆಲಂಗಾಣ ಗವರ್ನರ್​ ತಮಿಳಿಸೈ ಸೌಂದರರಾಜನ್ ರಾಜೀನಾಮೆ! ಚುನಾವಣೆಯಲ್ಲಿ ಸ್ಪರ್ಧೆ?

WhatsApp-Image-2024-03-18-at-12.09.03-PM
Published on

ತೆಲಂಗಾಣ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾ ಆಯೋಗ ಕೂಡ ಎಷ್ಟು ಹಂತಗಳಲ್ಲಿ ಎಲೆಕ್ಷನ್ ನಡೆಯಲಿದೆ ಎಂಬುದರ ಪಟ್ಟಿಯನ್ನು ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿತು. ಈ ಬೆನ್ನಲ್ಲೇ ತೆಲಂಗಾಣ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ತಮಿಳಿಸೈ ಸೌಂದರರಾಜನ್, ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಗಳಿಗೆ ಅಧಿಕೃತ ರಾಜೀನಾಮೆ ನೀಡಿದ್ದಾರೆ.

ಮೂಲಗಳ ಪ್ರಕಾರ ತಮಿಳುನಾಡಿನ ಮಾಜಿ ಬಿಜೆಪಿ ಅಧ್ಯಕ್ಷರು ರಾಜ್ಯದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇಂದು ದೆಹಲಿಯಲ್ಲಿ ರಾಜೀನಾಮೆ ಸಲ್ಲಿಸಿದರ ತಮಿಳಿಸೈ, ಬೆಳಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರವನ್ನು ರವಾನಿಸಿದರು.

ತೆಲಂಗಾಣ ರಾಜಭವನದ ಪ್ರಕಟಣೆಯಲ್ಲಿ, "ತೆಲಂಗಾಣದ ಗೌರವಾನ್ವಿತ ರಾಜ್ಯಪಾಲರು ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಡಾ. ಶ್ರೀಮತಿ ತಮಿಳಿಸೈ ಸೌಂದರರಾಜನ್ ಅವರು ತಕ್ಷಣವೇ ಜಾರಿಗೆ ಬರುವಂತೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ರಾಜೀನಾಮೆಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಲಾಗಿದೆ ಎಂದು ಉಲ್ಲೇಖಿಸಿದೆ.

ಇನ್ನು ಮೂಲಗಳ ಪ್ರಕಾರ, ಈ ಬಾರಿಯ ಲೋಕಸಭೆ ಚುನಾವಣೆಗೆ ಬಿಜೆಪಿಯ ಮೂರನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೌಂದರರಾಜನ್ ಹೆಸರು ಕೇಳಿಬರುವ ಸಾಧ್ಯತೆಯಿದೆ ಎಂದು ಹೇಳಲಾಗಿದ್ದು, ಅಧಿಕೃತ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ. ಉತ್ತರ ತಮಿಳುನಾಡು, ಪುದುಚೇರಿ ಅಥವಾ ಚೆನ್ನೈ ದಕ್ಷಿಣ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದ್ದು, ಇತ್ತೀಚೆಗೆ ತಮಿಳುನಾಡಿನ ಡಿಎಂಕೆ ಸರ್ಕಾರದ ವಿರುದ್ಧದ ಟೀಕೆಗಳ ನಡುವೆಯೇ ಸೌಂದರರಾಜನ್ ರಾಜೀನಾಮೆ ನೀಡಿರುವುದು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net