ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆ ಜೂನ್ 1ರಿಂದ; ಯಾವ ರಾಜ್ಯದಲ್ಲಿ?

tamilnadu
Published on

ಚೆನ್ನೈ: ಬರುವ ಜೂನ್ ಒಂದರಿಂದ 12ರವರೆಗೆ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯನ್ನು ನಡೆಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ.

ಮಾರ್ಚ್ 27ರಿಂದ ನಡೆಯಬೇಕಾಗಿದ್ದ ಪರೀಕ್ಷೆಯನ್ನು ಕರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.
ಪರೀಕ್ಷೆಗಳು ಮಧ್ಯಾಹ್ನದ ಹೊತ್ತು ನಡೆಯಲಿವೆ. ಪರೀಕ್ಷಾ ಹಾಲ್‌ನಲ್ಲಿ ಮತ್ತು ಹೊರಗೆ ಪರಸ್ಪರ ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಮಾಸ್ಕ್ ಹಾಕಿಕೊಳ್ಳುವುದು ಕೂಡ ಅನಿವಾರ್ಯ.

ಜತೆಗೆ ಮಾರ್ಚ್ 24ರಂದು ಮುಂದೂಡಲ್ಪಟ್ಟಿದ್ದ 12ನೇ ತರಗತಿಯ ಕೊನೆಯ ಪತ್ರಿಕೆಯ ಪರೀಕ್ಷೆಯನ್ನು ಜೂನ್ 4ರಂದು ನಡೆಯಲಿದೆ.
ಮುಂದಿನ ಶೈಕ್ಷಣಿಕ ವರ್ಷದ ಸಾಮಾನ್ಯ ಕಾರ್ಯಚಟುವಟಿಕೆಗಳು ಕರೊನಾ ವೈರಸ್ ಹಾವಳಿ ತಹಬಂದಿಗೆ ಬಂದ ನಂತರವೇ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಕೆ.ಎ. ಸೆಂಗೊಟ್ಟಾಯನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net