ಚೀನಾದಲ್ಲಿನ ಶೇ.20 ಉತ್ಪಾದನಾ ಸಾಮರ್ಥ್ಯ ಭಾರತಕ್ಕೆ ಸ್ಥಳಾಂತರಿಸುತ್ತಾ ಆ್ಯಪಲ್​?

apple
Published on

ನವದೆಹಲಿ: ಕರೊನಾ ಸೋಂಕಿನ ಜಾಗತಿಕ ಕೇಂದ್ರ ಬಿಂದು ಎನಿಸಿಕೊಂಡಿರುವ ಚೀನಾದಿಂದ ಇದೀಗ ಹಲವು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಬೇರೆ ದೇಶಗಳಿಗೆ ಸ್ಥಳಾಂತರಗೊಳಿಸಲು ಚಿಂತನೆ ನಡೆಸಿವೆ. ಅವುಗಳ ಪ್ರಕಾರ ಸ್ಥಳಾಂತರಕ್ಕೆ ಭಾರತ ಅತ್ಯಂತ ಪ್ರಶಸ್ತ ಸ್ಥಳ ಎನಿಸಿದೆ.

ತಂತ್ರಜ್ಞಾನ ಕ್ಷೇತ್ರದ ಬಹುದೊಡ್ಡ ಕಂಪನಿಗಳಲ್ಲಿ ಒಂದಾಗಿರುವ ಆ್ಯಪಲ್​ ಚೀನಾದಲ್ಲಿರುವ ಉತ್ಪಾದನಾ ಘಟಕದ 5ನೇ ಒಂದು ಭಾಗದ ಉತ್ಪಾದನೆಯನ್ನು ಭಾರತಕ್ಕೆ ಸ್ಥಳಾಂತರಿಸಲು ಚಿಂತನೆ ಆರಂಭಿಸಿದೆ. ತನ್ಮೂಲಕ ಅದು ಮುಂದಿನ ಐದು ವರ್ಷಗಳಲ್ಲಿ ತನ್ನ ರಫ್ತು ಆದಾಯವನ್ನು 3,02,610 ಕೋಟಿ ರೂ.ಗೆ ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ.

ಕೆಲವು ಮೂಲಗಳ ಪ್ರಕಾರ ಆ್ಯಪಲ್​ ಸಂಸ್ಥೆಯ ಹಿರಿಯ ಅಧಿಕಾರಿಗಳು ಈ ಕುರಿತು ಈಗಾಗಲೆ ಭಾರತ ಸರ್ಕಾರದ ಉನ್ನತಾಧಿಕಾರಿಗಳ ಜತೆ ಚರ್ಚಿಸಿದ್ದಾರೆ.

ಪ್ರತಿಷ್ಠಿತ ಐ-ಫೋನ್​ಗಳನ್ನು ತಯಾರಿಸುವ ಕಂಪನಿಯು ಸ್ಥಳೀಯವಾಗಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ತನ್ನ ರಫ್ತು ಆದಾಯವನ್ನು 3,02,610 ಕೋಟಿ ರೂ.ಗೆ ಹೆಚ್ಚಿಸಿಕೊಳ್ಳಲು ಅದು ಉದ್ದೇಶಿಸಿರುವುದಾಗಿ ಭಾರತಕ್ಕೆ ಆ್ಯಪಲ್​ ಸ್ಥಳಾಂತರಗೊಳ್ಳುವ ವಿಷಯದ ಬಗ್ಗೆ ಮಾಹಿತಿ ಹೊಂದಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net