ಬಾಹುಬಲಿ ಚಿತ್ರದ ಭಲ್ಲಾಳದೇವನ ವರಿಸುತ್ತಾಳಂತೆ ಈ ಚೆಲುವೆ!

rana daggubati
Published on

ಚೆನ್ನೈ: ಬಾಹುಬಲಿ ಚಿತ್ರಕ್ಕೆ ಜೀವ ತುಂಬಿದ ಮತ್ತೊಬ್ಬ ನಟ ರಾಣಾ ಡಗ್ಗುಬಾಟಿ. ಭಲ್ಲಾಳದೇವನಾಗಿ ಅವರ ನಟನೆ ಅಮೋಘ. ಇಂಥ ನಟ ಚೆಲುವೆಯೊಬ್ಬಳ ಪ್ರೇಮಪಾಶಕ್ಕೆ ಸಿಲುಕಿದ್ದರು. ಇತ್ತೀಚೆಗೆ ಇವರು ಆಕೆಗೆ ಪ್ರೊಪೋಸ್​ ಮಾಡಿದ್ದರು. ಅದಕ್ಕೆ ಆ ಚೆಲುವೆ ಯೆಸ್​ ಎಂದಿದ್ದಾಳಂತೆ.

ರಾಣಾ ಅವರೇ ಈ ವಿಷಯವನ್ನು ಟ್ವೀಟ್​ ಮಾಡಿದ್ದು, ತಾವಿಬ್ಬರು ಒಟ್ಟಾಗಿ ನಗುತ್ತಿರುವ ಚಿತ್ರದೊಂದಿಗೆ ಆಕೆ ಯೆಸ್​ ಎಂದಳು ಎಂದು ಬರೆದಿದ್ದಾರೆ.

ಇದನ್ನೂ ಓದಿ: ಶಿವರಾಜ್​ಕುಮಾರ್​, ಉಪೇಂದ್ರ ಸಂಭ್ರಮಕ್ಕೆ ಇನ್ನೊಂದು ವಾರವಷ್ಟೇ ಬಾಕಿ!!

ರಾಣಾ ಅವರ ಮದುವೆಯಾಗಲು ಒಪ್ಪಿರುವ ಚೆಲುವೆ ಹೆಸರು ಮಿಹೇಕಾ ಬಜಾಜ್​. ಇವರು ಡ್ಯೂ ಡ್ರಾಪ್​ ಡಿಸೈನ್​ ಸ್ಟುಡಿಯೋ ಎಂಬ ಈವೆಂಟ್​ ಮ್ಯಾನೇಜ್​ಮೆಂಟ್​ ಕಂಪನಿಯನ್ನು ನಡೆಸುತ್ತಿದ್ದಾರೆ. ಇಷ್ಟು ಬಿಟ್ಟರೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಇವರಿಬ್ಬರ ಪಾಲಕರು ಶೀಘ್ರದಲ್ಲೇ ಮದುವೆ ಮಾತುಕತೆ ಮುಗಿಸಿ, ದಿನಾಂಕ ನಿಷ್ಕರ್ಷಿಸುತ್ತಾರೆ ಎಂದು ಹೇಳಲಾಗಿದೆ.

ತಮ್ಮ ಮನದನ್ನೆ ಮದುವೆಗೆ ಯೆಸ್​ ಎಂದ ಸಂದೇಶವನ್ನು ರಾಣಾ ಟ್ವೀಟ್​ ಮಾಡುತ್ತಿದ್ದಂತೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಶ್ರುತಿ ಹಸನ್​, ಸಮಂತಾ ಅಕ್ಕಿನೇನಿ ಮತ್ತು ಹನ್ಸಿಕಾ ಎನ್​ಟಿಆರ್​ ಕಥಾನಾಯಕಡು ಚಿತ್ರದ ಹೀರೋವನ್ನು ಅಭಿನಂದಿಸಿದ ಮೊದಲಿಗರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net