ಎರಡು ತಿಂಗಳ ಬಳಿಕೆ ಮತ್ತೆ ತಾಜ್​ ಮಹಲ್ ಓಪನ್; ದಿನಕ್ಕೆ 650 ಪ್ರವಾಸಿಗರಿಗೆ ಮಾತ್ರ ಅವಕಾಶ

taj
Published on

ಲಖನೌ: ಕರೊನಾ ಕಾರಣದಿಂದಾಗಿ ಎಲ್ಲ ಪ್ರವಾಸಿ ತಾಣಗಳು ಬಾಗಿಲು ಮುಚ್ಚಿವೆ. ಸುಮಾರು ಎರಡು ತಿಂಗಳ ಕಾಲ ಬಾಗಿಲು ಮುಚ್ಚಿದ್ದ ವಿಶ್ವ ಪ್ರಸಿದ್ಧ ತಾಜ್​ಮಹಲ್​ ಇಂದಿನಿಂದ ಪ್ರವಾಸಿಗರಿಗೆ ಮುಕ್ತವಾಗಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ತಾಜ್​ ಮಹಲ್​ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

ತಾಜ್​ಮಹಲ್, ​ಕೆಂಪುಕೋಟೆ, ಅಜಂತಾ ಗುಹೆ ಸೇರಿ ಕೇಂದ್ರ ಸರ್ಕಾರದಿಂದ ಸಂರಕ್ಷಿಸಲ್ಪಡುವ ಎಲ್ಲ ಸ್ಮಾರಕಗಳನ್ನು ಮುಚ್ಚುವಂತೆ ಏಪ್ರಿಲ್ 15ರಂದು ಕೇಂದ್ರ ಸರ್ಕಾರ ಆದೇಶಿಸಿತ್ತು. ಅಂದಿನಿಂದ ಇಂದಿನವರೆಗೆ ಸಂಪೂರ್ಣವಾಗಿ ಬಾಗಿಲು ಮುಚ್ಚಿದ್ದ ತಾಣಗಳು ಇಂದು ಮತ್ತೆ ಬಾಗಿಲು ತೆರೆದಿವೆ.

ತಾಜ್​ಮಹಲ್​ ನೋಡಲು ಬರುವ ಪ್ರವಾಸಿಗರಿಗೆ ಸಾಕಷ್ಟು ನಿಯಮಗಳನ್ನು ಹಾಕಲಾಗಿದೆ. ಪ್ರತಿದಿನ ಕೇವಲ 650 ಪ್ರವಾಸಿಗರಿಗೆ ಮಾತ್ರವೇ ಅವಕಾಶವಿರಲಿದೆ. ಆನ್​ಲೈನ್​ ಮೂಲಕ ಟಿಕೆಟ್​ ಮಾಡಿದವರಿಗೆ ಮಾತ್ರ ಅವಕಾಶ. ಮಾಸ್ಕ್​ ಕಡ್ಡಾಯವಾಗಿ ಹಾಕಿರಬೇಕು. ಸ್ಥಳಕ್ಕೆ ಹೋದ ನಂತರ ಅಲ್ಲಿ ಸಣ್ಣ ಸಣ್ಣ ಗುಂಪುಗಳಾಗಿ ಮಾತ್ರ ಬಿಡಲಾಗುವುದು. ಒಮ್ಮೆಗೆ ಐದು ಟಿಕೆಟ್​ಗಳನ್ನು ಮಾತ್ರ ಬುಕ್​ ಮಾಡಲು ಅವಕಾಶ. ತಾಜ್​ಮಹಲ್​ನ ಯಾವುದೇ ವಸ್ತುವನ್ನು ಮುಟ್ಟಲು ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net