ಗಂಡನನ್ನು ಕೊಂದು ಆತನ ಮರ್ಮಾಂಗ ಫ್ರೈ ಮಾಡಿದ ಹೆಂಡತಿ! ಮಹಿಳೆಯ ಹುಚ್ಚಾಟ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ

wife
Published on

ಬ್ರೆಸಿಲಿಯಾ: ವಿಚಿತ್ರ ಮನುಷ್ಯರಿರ್ತಾರೆ ಎನ್ನೋದು ಸತ್ಯ. ಆದರೆ ತನ್ನ ಗಂಡನನ್ನೇ ಕೊಲೆ ಮಾಡಿ, ಆತನ ಮರ್ಮಾಂಗಕ್ಕೆ ಎಣ್ಣೆ ಹಾಕಿ ಫ್ರೈ ಮಾಡುವವರೂ ಇರುತ್ತಾರೆ ಎಂದರೆ ನಂಬುತ್ತೀರಾ?

ಹೌದು! ಇಂತದ್ದೊಂದು ಘಟನೆ ನಿಜವಾಗಿಯೂ ನಡೆದಿದೆ. ಬ್ರೆಜಿಲ್​ನ ಸಾವೊ ಗೊನ್ಕಾಲೊ ನಗರದ ಈ ರೀತಿಯ ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ. ಕ್ರಿಸ್ಟಿನಾ ರೊಡ್ರಿಗಸ್ ಮಸಾಡೊ ಹೆಸರಿನ ಮಹಿಳೆಗೆ ಆ್ಯಂಡ್ರೆ ಹೆಸರಿನ ವ್ಯಕ್ತಿಯೊಂದಿಗೆ ಮದುವೆಯಾಗಿದೆ. ದಂಪತಿಗೆ ಎಂಟು ವರ್ಷದ ಮಗ ಹಾಗೂ ಐದು ವರ್ಷದ ಮಗಳಿದ್ದಾಳೆ. ಆದರೆ ದಂಪತಿ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಇದ್ದಿದ್ದರಿಂದಾಗಿ ಮದುವೆಯಾಗಿ ಹತ್ತು ವರ್ಷಗಳಲ್ಲಿ ಅವರು ಬೇರೆಯಾಗಿದ್ದರಂತೆ. ಅದಾದ ಮೇಲೆ ಎರಡು ವರ್ಷ ಬೇರೆ ಬೇರೆಯಿದ್ದು ಮತ್ತೆ ಒಂದಾಗಿದ್ದರು.

ದಂಪತಿ ಒಂದಾಗಿದ್ದರೂ ಅವರಿಬ್ಬರ ನಡುವೆ ಸದಾ ಒಂದಿಲ್ಲೊಂದು ಜಗಳ ಆಗುತ್ತಲೇ ಇರುತ್ತಿತ್ತಂತೆ. ಅದೇ ರೀತಿ ಒತ್ತೀಚೆಗೆ ಜಗಳವಾಗಿದ್ದು, ಕ್ರಿಸ್ಟಿನಾ ಮುಂಜಾನೆ 4 ಗಂಟೆಯ ಹೊತ್ತಿಗೆ ಆ್ಯಂಡ್ರೆಯ ಕೊಲೆ ಮಾಡಿದ್ದಾಳೆ. ಆತನ ಮರ್ಮಾಂಗವನ್ನು ಕತ್ತರಿಸಿ, ಅದಕ್ಕೆ ಒಂದಿಷ್ಟು ಎಣ್ಣೆ ಹಾಕಿ ಫ್ರೈ ಮಾಡಿದ್ದಾಳೆ.

ಆ್ಯಂಡ್ರೆ ವಿಚಾರ ತಿಳಿದ ಪೊಲೀಸರು ಮನೆಗೆ ಹೋಗಿ ನೋಡಿದಾಗ ವಿಚಾರ ಬೆಳಕಿಗೆ ಬಂದಿದೆ. ಕ್ರಿಸ್ಟಿನಾಳಿಗೆ ಆ್ಯಂಡ್ರೆ ಹಿಂಸೆ ಕೊಡುತ್ತಿದ್ದ. ವಿಚ್ಚೇಧನ ಪಡೆಯವುದಕ್ಕೂ ಬಿಟ್ಟಿರಲಿಲ್ಲ. ಬೇರೆಯವರೊಂದಿಗೆ ನೀನು ಸುಖವಾಗಿ ಇರಲಾರದಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ. ಹಾಗಾಗಿ ಆಕೆ ತನ್ನ ಪ್ರಾಣರಕ್ಷಣೆಗಾಗಿ ಈ ಕೊಲೆ ಮಾಡಿದ್ದಾಳೆ ಎಂದು ಕ್ರಿಸ್ಟಿನಾ ಪರ ವಕೀಲರು ತಿಳಿಸಿದ್ದಾರೆ. ಸದ್ಯ ಈ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net