

ಜೆಡ್ಡಾ: ಸ್ವಸ್ತಿಕ ಚಿಹ್ನೆಯೂ ಭಾರತೀಯರ ಪಾಲಿಗೆ ಮಂಗಳಕರವಾಗಿದ್ದು ಹಿಂದೂ ಧರ್ಮದಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಹೊಸ ವಾಹನ ಹಾಗೂ ಗೃಹಪ್ರವೇಶದ ಸಮಯದಲ್ಲಿ ಮನೆಯ ದ್ವಾರದ ಮೇಲೆ ಮುದ್ರಿಸಲಾಗುತ್ತದೆ.
ಇದೀಗ ಇದೇ ಸ್ವಸ್ತಿಕ್ ಚಿಹ್ನೆಯೂ ಭಅರಥಿಯ ಮೂಲದವರಿಗೆ ಕಂಟಕವಾಗಿದ್ದು ಸಹಾಯಕ್ಕಾಗಿ ಕುಟುಂಬಸ್ಥರು ಅಂಗಲಾಚುತ್ತಿದ್ದಾರೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಗುಂಟೂರು ಮೂಲದ ಅರವಿಂದ್ ಇತ್ತೀಚಿಗೆ ಸೌದಿ ಅರೇಬಿಯಾದಲ್ಲಿರುವ ಪೂರ್ವ ಪ್ರಾಂತ್ಯಕ್ಕೆ ತಮ್ಮ ಫ್ಲ್ಯಾಟ್ಅನ್ನು ಬದಲಾಯಿಸಿದ್ದರು.
ತಮ್ಮ ಮನೆಯ ಬಾಗಿಲಿನ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಸಹ ಬರದು ತಮ್ಮ ಹೊಸ ಮೆನೆಗೆ ಅಡಿಯಿಟ್ಟು ಜೀವನವನ್ನ ಪ್ರಾರಂಭಿಸಿದ್ದರು.
ನೆರೆಯ ಮನೆಯಲ್ಲಿ ವಾಸವಿದ್ದ ಅರಬ್ ವ್ಯಕ್ತಿ ಇದನ್ನು ತಪ್ಪಾಗಿ ಗ್ರಹಿಸಿ ತಮ್ಮ ಮನೆಯ ಬಾಗಿಲಿನ ಮೇಲೆ ನಾಜಿ ಲಾಂಛನವನ್ನು ಬರೆದಿದ್ದಾರೆ ಎಂದು ಆರೋಪಿಸಿ ಗಲಾಟೆ ಮಾಡಿದ್ದಾನೆ.
ಆದರೆ, ವಾಸ್ತಾವಾಂಶದಲ್ಲಿ ನಾಜಿ ಲಾಂಛನವೂ ಸ್ವಸ್ತಿಕ್ ಚಿಹ್ನೆಗಿಂತ ಭಿನ್ನವಾಗಿದ್ದು ಇದರ ಬಗ್ಗೆ ಅರಬ್ ವ್ಯಕ್ತಿಗೆ ವ್ಯತ್ಯಾಸ ತಿಳಿದು ಬಂದಿಲ್ಲ. ಈ ಕುರಿತು ಮೊದಲು ಅರವಿಂದ್ ಹಾಗೂ ಕುಟುಂಬಸ್ಥರಿಗೆ ಲಾಂಛನವನ್ನು ಅಳಿಸುವಂತೆ ಮನವಿ ಮಾಡಿದ್ದಾರೆ.
ಇದನ್ನು ನಿರಾಕರಿಸಿದ್ದ ಅರವಿಂದ್ ಕುಟುಂಬಸ್ಥರು ಸಿದ್ಧಾಂತದ ಜೊತೆಗೆ ತಮಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕುಪಿತಗೊಂಡ ಅರಬ್ ವ್ಯಕ್ತಿ ಪೊಲೀಸರ ಗಮನಕ್ಕೆ ತಂದಿದ್ದು ಅವರು ಅರವಿಂದ್ನನ್ನು ಬಂಧಿಸಿದ್ಧಾರೆ.
ಇ ವಿಚಾರವಾಗಿ ಅರವಿಂದ್ ಕುಟುಂಬಸ್ಥರು ಪ್ರತಿಕ್ರಿಯಿಸಿದ್ದು ಯಾರಿಗೂ ನೋವು ಕೊಡುವ ಉದ್ದೇಶದಿಂದ ನಾವು ಚಿಹ್ನೆಯನ್ನುಇ ಬರೆದಿಲ್ಲ. ಅವರ ತಪ್ಪು ಗ್ರಹಿಕೆಯಿಂದ ಇಷ್ಟೆಲ್ಲಾ ಆಗಿದೆ. ದಯವಿಟ್ಟು ಅವರನ್ನು ಬಿಡಿಸಲು ಸಹಾಯ ಮಾಡಿ ಎಂದು ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿಗೆ ವಿನಂತಿಸಿದ್ದಾರೆ.