More

    VIDEO| ಕ್ಷಣಾರ್ಧದಲ್ಲೇ ಬಾಲಕನನ್ನು ರಕ್ಷಿಸಿದ ಅಂಪೈರ್​; ವ್ಯಾಪಕ ಮೆಚ್ಚುಗೆ

    ಪ್ಲೋರಿಡ: ಅಂಪೈರ್​ ಒಬ್ಬರ ತ್ವರಿತ ಆಲೋಚನೆಯ ಫಲವಾಗಿ ಹುಡುಗನೊಬ್ಬನನ್ನು ರಕ್ಷಣೆ ಮಾಡಿರುವ ಘಟನೆ ಫ್ಲೋರಿಡಾದ ಜಾಕ್ಸನ್‌ವಿಲ್ಲೆಯ ಫೋರ್ಟ್ ಏರಿಯಾದಲ್ಲಿ ನಡೆದಿದೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಂಪೈರ್​ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?

    ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಹುಡುಗನೊಬ್ಬ ಬೇಸ್​ಬಾಲ್​ ಗ್ರೌಂಡ್​ನಲ್ಲಿ ನಿಂತಿರುವುದು ಕಂಡು ಬಂದಿದೆ. ಈ ವೇಳೆ ದಿಢೀರ್​ ಎಂದು ಗಾಳಿ ಎಳುತ್ತದೆ ಮತ್ತು ರಭಸಕ್ಕೆ ಬಾಲಕ ಏನು ಕಾಣದೆ ಅಲ್ಲೇ ನಿಲ್ಲುತ್ತಾನೆ.

    ಇನ್ನು ಕೆಲಕಾಲ ಅಲ್ಲೇ ನಿಂತಿದ್ದರೆ ಅವರನ ಪ್ರಾಣಕ್ಕೆ ಕುತ್ತಾಗಬಹುದಿತ್ತು ಎಂದು ಹೇಳಲಾಗಿದೆ. ಇದೇ ವೇಳೆ ಪಕ್ಕದಲ್ಲಿದ್ದ ಅಂಪೈರ್​ ಬಾಲಕನನ್ನು ತಬ್ಬಿ ಹಿಡಿದು ನಿಂತಿರುವುದು ಕಂಡಯ ಬರುತ್ತದೆ.

    ಈ ಕುರಿತು ಮಾತನಾಡಿದ ಬಾಲಕ ಗಾಳಿ ಬಂದ ಸಮಯದಲ್ಲಿ ನಾನು ಹೆಚ್ಚು ಉಸಿರಾಡಲು ಸಾಧ್ಯವಾಗಲಿಲ್ಲ. ನಾನು ಹೆಚ್ಚು ಹೊತ್ತು ಇದ್ದೆ ಎಂದು ಭಾಸವಾಯಿತು. ಆದರೆ, ಕೆಲ ಕ್ಷಣಗಳಲ್ಲಿ ನನ್ನನ್ನು ಅಂಪೈರ್​ ಕಾಪಾಡಿದ್ದರು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts