ಪಾರ್ಟಿ ಮಾಡಲು ಬೋಟ್‌ನಲ್ಲಿ 100 ಕಿ.ಮೀ. ಹೋಗುತ್ತಿದ್ದ ಸಾರಾ ಅಲಿ ಖಾನ್, ಸುಶಾಂತ್!

Sara sushant
Published on

ಮುಂಬೈ: ಸುಶಾಂತ್ ಸಾವಿನಲ್ಲಿ ಡ್ರಗ್ಸ್ ಪಾತ್ರದ ಕುರಿತು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ದಳಕ್ಕೆ (ಎನ್‌ಸಿಬಿ) ಮತ್ತೊಂದು ಮಹತ್ವದ ಮಾಹಿತಿ ಸಿಕ್ಕಿದ್ದು, ರಿಯಾ ಚಕ್ರವರ್ತಿ, ಸುಶಾಂತ್ ಸಿಂಗ್, ಸಾರಾ ಅಲಿ ಖಾನ್ ಸೇರಿದಂತೆ ಅನೇಕರು ಆಪತಿ ಹೆಸರಿನ ಫಾರ್ಮ್‌ಹೌಸ್‌ನಲ್ಲಿ ಪಾರ್ಟಿ ಮಾಡುತ್ತಿದ್ದರು ತಿಳಿದುಬಂದಿದೆ.

ಮುಂಬೈನಿಂದ 100 ಕಿ.ಮೀ. ದೂರದಲ್ಲಿ ಲೋನಾವಾಲಾ ಬಳಿ ಇರುವ ಆಪತಿ ಫಾರ್ಮ್‌ಹೌಸ್‌ನಲ್ಲಿ ಬಾಲಿವುಡ್ ನಟ- ನಟಿಯರು ಆಗಾಗ ಪಾರ್ಟಿ ಮಾಡುತ್ತಿದ್ದರು. ಈ ಫಾರ್ಮ್‌ಹೌಸ್‌ಗೆ ಬೋಟ್‌ನಲ್ಲಿ ತೆರಳಬೇಕಿದ್ದು, ಬೋಟ್ ನಿರ್ವಾಹಕರು ಬಾಲಿವುಡ್ ಸೆಲೆಬ್ರಿಟಿಗಳು ಅಲ್ಲಿಗೆ ಬರುತ್ತಿದ್ದ ವಿಷಯವನ್ನು ಬಾಯಿ ಬಿಟ್ಟಿದ್ದಾರೆ. ಇದನ್ನೂ ಓದಿ: ಮುಂಬೈ ಬಿಟ್ಟು ತವರೂರಿಗೆ ವಾಪಸ್ಸಾದ ಕಂಗನಾ!

ನಟ ಸುಶಾಂತ್ ಸಿಂಗ್, ನಟಿ ಸಾರಾ ಅಲಿಖಾನ್‌ರೊಂದಿಗೆ ಅನೇಕ ಬಾರಿ ಅಲ್ಲಿಗೆ ತೆರಳಿದ್ದರು. 2019ರ ಫೆಬ್ರವರಿ ನಂತರ ಸುಶಾಂತ್‌ರೊಂದಿಗೆ ರಿಯಾ ಚಕ್ರವರ್ತಿ, ಶೋವಿಕ್ ಚಕ್ರವರ್ತಿ ಮತ್ತು ಸ್ಯಾಮ್ಯುಯೆಲ್ ಮಿರಂಡಾ ಬರುತ್ತಿದ್ದರು ಎಂದು ಬೋಟ್ ನಿರ್ವಾಹಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net