ಸುಶಾಂತ್​ ಫಾರ್ಮ್​ಹೌಸ್​ನಲ್ಲಿ ಏನೆಲ್ಲಾ ಸಿಗ್ತು? ಇಲ್ಲಿದೆ ಡೀಟೇಲ್ಸ್​ ...

Farmhouse - Final
Published on

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಅಸಹಜ ಸಾವಿನ ಪ್ರಕರಣಕ್ಕೆ ಇನ್ನೊಂದು ಹೊಸ ತಿರುವು ಸಿಕ್ಕಿದೆ. ಸುಶಾಂತ್​ ಅವರಿಗೆ ಡ್ರಗ್ಸ್​ ಅಭ್ಯಾಸ ಇತ್ತು ಎಂಬ ವಿಷಯ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಇದೀಗ ಅವರ ಫಾರ್ನ್​ಹೌಸ್​ನಲ್ಲಿ ಹುಕ್ಕಾ, ಆಶ್​ಟ್ರೇ, ಮಾತ್ರೆಗಳು ಜಫ್ತಿಯಾಗಿದೆ.

ಸುಶಾಂತ್​ ಪ್ರಕರಣದಲ್ಲಿ ಇದೀಗ ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ ತನಿಖೆ ನಡೆಸುತ್ತಿರುವುದು ಗೊತ್ತೇ ಇದೆ. ಇತ್ತೀಚೆಗೆ ಎನ್​ಸಿಬಿಯವರು ಸುಶಾಮತ್​ ಅವರ ಪಾವನಾ ಲೇಕ್​ ಫಾರ್ಮ್​ಹೌಸ್​ಗೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಹುಕ್ಕಾ, ಆಶ್​ಟ್ರೇ, ಮಾತ್ರೆಗಳು ಸೇರಿದಂತೆ ಹಲವು ವಸ್ತುಗಳು ಸಿಕ್ಕಿವೆ.

ಪಾವನಾ ಲೇಕ್​ ಪಾರ್ಮ್​ಹೌಸ್​ನ್ನು ಸುಶಾಂತ್​ ಬಾಡಿಗೆಗೆ ಪಡೆದಿದ್ದರು. ಪ್ರತೀ ತಿಂಗಳು ಎರಡೂವರೆ ಲಕ್ಷ ಬಾಡಿಗೆ ಕಟ್ಟುತ್ತಿದ್ದರು. ಈ ಫಾರ್ಮ್​ಹೌಸ್​ನಲ್ಲಿ ಅವರು ಹಲವು ಪಾರ್ಟಿಗಳನ್ನು ಆಯೋಜಿಸುತ್ತಿದ್ದರಂತೆ. ಈ ಪಾರ್ಟಿಯಲ್ಲಿ ಸುಶಾಂತ್​ ಅಲ್ಲದೆ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೌವಿಕ್​ ಚಕ್ರವರ್ತಿ, ಮ್ಯಾನೇಜರ್​ ಸ್ಯಾಮ್ಯುಯಲ್​ ಮಿರಾಂಡಾ, ಫ್ಲಾಟ್​ಮೇಟ್​ ಸಿದ್ಧಾರ್ಥ್​ ಪಿಠಾಣಿ ಸೇರಿದಂತೆ ಹಲವರು ಭಾಗವಹಿಸುತ್ತಿದ್ದರಂತೆ.

ಇತ್ತೀಚೆಗೆ ಈ ವಿಷಯವನ್ನು ಸ್ವತಃ ರಿಯಾ ಬಾಯಿಬಿಟ್ಟಿದ್ದರು ಎಂದು ಹೇಳಲಾಗುತ್ತದೆ. ಫಾರ್ಮ್​ಹೌಸ್​ನಲ್ಲಿ ಡ್ರಗ್ಸ್​ ಪಾರ್ಟಿಗಳು ನಡೆಯುತ್ತಿದ್ದವು ಮತ್ತು ಈ ಪಾರ್ಟಿಗಳಲ್ಲಿ ಸಾರಾ ಅಲಿ ಖಾನ್​, ರಾಕುಲ್​ ಪ್ರೀತ್​ ಸಿಂಗ್​ ಸೇರಿದಂತೆ ಹಲವರು ಭಾಗವಹಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ ಎಂದು ಹೇಳಲಾಗಿದೆ.

ಹಾಗಾಗಿ ಎನ್​​ಸಿಬಿಯವರು ಲೋನಾವಾಲಾ ಬಳಿ ಇರುವ ಈ ಫಾರ್ಮ್​ಹೌಸ್​ನಲ್ಲಿ ರೇಡ್​ ಮಾಡಿದ್ದರು ಮತ್ತು ಈ ಸಂದರ್ಭದಲ್ಲಿ ಹುಕ್ಕಾ, ಆಶ್​ಟ್ರೇ, ಮಾತ್ರೆಗಳು ಸೇರಿದಂತೆ ಹಲವು ವಸ್ತುಗಳು ಜಫ್ತಿಯಾಗಿವೆಯಂತೆ. ಈ ಫಾರ್ಮ್​ಹೌಸ್​ನಲ್ಲಿ ಇನ್ನೂ ಏನೇನು ಸಿಕ್ಕಿವೆ ಎಂಬುದನ್ನು ಎನ್​ಸಿಬಿಯವರು ಇನ್ನಷ್ಟೇ ಅಧಿಕೃತವಾಗಿ ಘೋಷಿಸಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net