More

    ಗೋವಾದಲ್ಲಿ ನಯನತಾರಾ? ಏನ್​ ಸಮಾಚಾರ?

    ಪಣಜಿ: ಸದಾ ಒಂದಿಲ್ಲೊಂದು ಚಿತ್ರ ಅಥವಾ ವಿವಾದಗಳಲ್ಲಿ ಬ್ಯುಸಿಯಾಗಿರುವ ನಟಿ ಎಂದರೆ ಅದು ನಯನತಾರಾ. ಆದರೆ, ಕಳೆದ ಆರು ತಿಂಗಳುಗಳಿಂದ ಲಾಕ್​ಡೌನ್​ನಿಂದಾಗಿ ನಯನತಾರಾ ಯಾವ ಚಿತ್ರದಲ್ಲೂ ನಟಿಸಲು ಸಾಧ್ಯವಾಗಲಿಲ್ಲ, ಹಾಗೆಯೇ ಯಾವುದೇ ವಿವಾದದಲ್ಲೂ ಆಕೆಯ ಹೆಸರು ಕೇಳಿಬರಲಿಲ್ಲ.

    ಇದನ್ನೂ ಓದಿ: ಅಮೇಜಾನ್​ ಅಲೆಕ್ಸಾಗೆ ಅಮಿತಾಭ್​ ಬಚ್ಚನ್​ ಧ್ವನಿ

    ಈಗ್ಯಾಕೆ ನಯನತಾರಾ ವಿಷಯವೆಂದರೆ, ಲಾಕ್​ಡೌನ್​ನಿಂದ ಮನೆಯಲ್ಲೇ ಲಾಕ್​ ಆಗಿದ್ದ ನಯನತಾರಾ, ಈಗ ತಮ್ಮ ಬಾಯ್​ಫ್ರೆಂಡ್​ ವಿಘ್ನೇಶ್​ ಶಿವನ್​ ಜತೆಗೆ ಸದ್ದಿಲ್ಲದೆ ಗೋವಾಗೆ ಹೋಗಿದ್ದಾರೆ. ಕ್ಯಾಂಡೋಲಿಮ್​ ಬೀಚ್​ನ ಬಳಿ ಇರುವ ರೆಸಾರ್ಟ್​ವೊಂದರಲ್ಲಿ ನಯನತಾರಾ ಪೂಲ್​ ಹತ್ತಿರ ನಡೆದು ಬರುತ್ತಿರುವ ದೃಶ್ಯವನ್ನು ವಿಘ್ನೇಶ್​ ಶಿವನ್​ ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ ಮೂಲಕ ಶೇರ್​ ಮಾಡಿಕೊಂಡಿದ್ದಾರೆ.

    ಈ ಕುರಿತು ಬರೆದುಕೊಂಡಿರುವ ಅವರು, ‘ಹಲವು ದಿನಗಳ ಹಾಲಿಡೇ ಮೂಡ್​ನ ನಂತರ ಇದೀಗ ವೆಕೇಶನ್​ ಮೂಡ್​’ ಎಂದು ವಿಘ್ನೇಶ್​ ಬರೆಯುವುದರ ಜತೆಗೆ ನಯನತಾರಾ ಅವರ ಫೋಟೋ ಹಂಚಿಕೊಂಡಿದ್ದಾರೆ.

    ಕೆಲವು ದಿನಗಳ ಹಿಂದೆ ವಿಘ್ನೇಶ್​ ಮತ್ತು ನಯನತಾರಾ ಜತೆಯಾಗಿ ಓನಂ ಹಬ್ಬವನ್ನು ಆಚರಿಸಿದ್ದರು. ಆ ನಂತರ ಇಬ್ಬರ ಸುದ್ದಿಯೇ ಇರಲಿಲ್ಲ. ಹೀಗಿರುವಾಗಲೇ ಈ ಫೋಟೋ ಹಾಕುವ ಮೂಲಕ, ತಾವು ಗೋವಾದಲ್ಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ ಶಿವನ್​.

    ಇದನ್ನೂ ಓದಿ: ಕಚೇರಿ ಬಳಿಕ ಕಂಗನಾ ಮನೆ ಕೆಡವಲು ಮುಂಬೈ ಪಾಲಿಕೆ ನಿರ್ಧಾರ!

    ಅಂದಹಾಗೆ, ನಯನತಾರಾ ಮತ್ತು ವಿಘ್ನೇಶ್​ ಶಿವನ್​ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಬಹುಶಃ ಮುಂದಿನ ವರ್ಷ ಮದುವೆಯಾಗುವ ಸಾಧ್ಯತೆ ಇದೆ.

    ರಾಗಿಣಿಯನ್ನು ತಬ್ಬಿಕೊಂಡು ಬೀಳ್ಕೊಟ್ಟ ಸಂಜನಾ: ಸಾಂತ್ವನ ಕೇಂದ್ರದಲ್ಲಿ ಗದ್ಗದಿತರಾದ ನಟಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts