ಚೆನ್ನೈ: ಕಾಲಿವುಡ್ ಅಂಗಳದಲ್ಲಿ 2018ರಲ್ಲಿ ತೆರೆಕಂಡ “96” ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದು ಎಲ್ಲರಿಗೂ ತಿಳಿದೇ ಇದೆ. ಇದೇ ಸಿನಿಮಾ ಕನ್ನಡದಲ್ಲಿ 99 ಹೆಸರಿನಲ್ಲಿ ಮೂಡಿಬಂತು. ಆದರೆ, ತಮಿಳಿನಲ್ಲಿ ಸಿಕ್ಕಷ್ಟು ಯಶಸ್ಸು ಕನ್ನಡದಲ್ಲಿ ಸಿಗಲಿಲ್ಲ. ಕಾಲಿವುಡ್ನಲ್ಲಿ ಬಹುಭಾಷಾ ನಟಿ ತ್ರಿಷಾ ಮತ್ತು ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಹೈಸ್ಕೂಲ್‌ನಲ್ಲಿರುವಾಗ ತಾನು ಪ್ರೀತಿಸುವ ಹುಡುಗಿಗೆ ತನ್ನ ಪ್ರೀತಿಯನ್ನು ಹೇಳಲಾಗದೆ, ಎದೆಯಲ್ಲೇ ಇಟ್ಟುಕೊಂಡುಬಿಡುವ ಹುಡುಗ, ಅದನ್ನು ಹೇಳುವ ಕ್ಷಣಕ್ಕಾಗಿ ಕಾಯುವ ಹುಡುಗಿ, ಆದರೆ ಬದುಕು ತಿರುವು ಪಡೆದುಕೊಂಡ ನಂತರ ಇಬ್ಬರು ಮತ್ತೆ ಭೇಟಿಯಾಗುತ್ತಾರೆ, ಅದು ಕೂಡ 20 ವರ್ಷಗಳ ಬಳಿಕ. ಶಾಲಾ ಗೆಳೆಯರೆಲ್ಲರೂ ರೀಯೂನಿಯನ್ ಆಗಲು ಬಯಸಿದಾಗ ಪ್ರೇಮಿಗಳು ಎದುರಾಗುತ್ತಾರೆ. ಶಾಲಾ ದಿನಗಳು ಮರುಕಳಿಸುತ್ತವೆ. ಈ ವೇಳೆ ಹುಡುಗ ಇನ್ನೂ ಹಳೆಯ ಪ್ರೀತಿಯಲ್ಲೇ ಇರುತ್ತಾನೆ. ಆದರೆ, ಹುಡುಗಿಗೆ ಆಗಲೇ ಮದುವೆ ಆಗಿರುತ್ತದೆ. ಮತ್ತೆ ಒಂದಾದಾಗ ಏನಾಗುತ್ತದೆ ಎಂಬುದೇ 96 ಸಿನಿಮಾದ ಕತೆ.
ಭಾವನೆಗಳೇ ಹಾಸಿ ಹೊಕ್ಕಿರುವ ಈ ಸಿನಿಮಾದಲ್ಲಿ ಹಾಡುಗಳು ಸಹ ಪ್ರೇಕ್ಷಕರನ್ನು ಮನರಂಜಿಸುತ್ತದೆ. ಈ ಸಿನಿಮಾ ಕುರಿತು ಆಗಾಗ ಒಂದೊಂದೆ ಇಂಟೆರೆಸ್ಟಿಂಗ್ ಮಾಹಿತಿ ಹೊರಬೀಳುತ್ತಲೇ ಇರುತ್ತದೆ. ಇದೀಗ ಮತ್ತೊಂದು ಕುತೂಹಲಕಾರಿ ಸಂಗತಿ ಎಲ್ಲೆಡೆ ವೈರಲ್ ಆಗುತ್ತಿದೆ. ಅದೇನೆಂದರೆ, ಈ ಸಿನಿಮಾದಲ್ಲಿ ಲಿಪ್ಲಾಕ್ ಸೀನ್ ಇರಬೇಕಿತ್ತಂತೆ. ಆದರೆ, ಅದನ್ನು ತಿರಸ್ಕರಿಸಲಾಯಿತಂತೆ.
96 ಸಿನಿಮಾವು ಆಸಕ್ತಿದಾಯಕ ಕಥಾವಸ್ತುವನ್ನು ಹೊಂದಿದ್ದು, ಈ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ನಾಯಕ ಮತ್ತು ನಾಯಕಿ ದೂರ ದೂರ ಆಗುತ್ತಾರೆ. ಆ ಕ್ಷಣದಲ್ಲಿ ಇಬ್ಬರ ನಡುವೆ ಲಿಪ್ ಲಾಕ್ ದೃಶ್ಯ ಇರಬೇಕಿತ್ತಂತೆ. ಆರಂಭದಲ್ಲಿ ನಿರ್ದೇಶಕರು ಕೂಡ ಸ್ಕ್ರಿಪ್ಟ್ನಲ್ಲಿ ಇದನ್ನು ಸೇರಿಸಿದ್ದರು. ಇದಕ್ಕೆ ನಟಿ ತ್ರಿಷಾ ಕೂಡ ಒಪ್ಪಿಗೆ ನೀಡಿದ್ದರು. ಆದರೆ, ಆ ದೃಶ್ಯದಲ್ಲಿ ನಟಿಸಲು ವಿಜಯ್ ಸೇತುಪತಿ ನಿರಾಕರಿಸಿದರು ಎಂದು ತಿಳಿದುಬಂದಿದೆ.
ಲಿಪ್ಲಾಕ್ ನಿರಾಕರಿಸಲು ಕಾರಣ ಸಹ ನೀಡಿರುವ ವಿಜಯ್ ಸೇತುಪತಿ, ಇಂತಹ ಕತೆಗಳಲ್ಲಿ ಮತ್ತು ಇಂತಹ ಸನ್ನಿವೇಶಗಳಲ್ಲಿ ಈ ಲಿಪ್ಲಾಕ್ ದೃಶ್ಯಗಳು ಇರಬಾರದು. ಇದು ಇತರರಿಗೆ ತಪ್ಪು ಸಂದೇಶವನ್ನು ನೀಡುತ್ತದೆ ಎಂದು ಹೇಳಿ ವಿಜಯ್ ಸೇತುಪತಿ ಲಿಪ್ಲಾಕ್ ನಿರಾಕರಿಸಿದ್ದರು ಎಂದು ವರದಿಗಳಾಗಿವೆ.
ವಿಜಯ್ ಸೇತುಪತಿ ಅವರ ಗುಣಾನೇ ಆಗೇ ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಆಗಿರುವ ವಿಜಯ್ ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದಲೇ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಮಾಜದ ಬಗೆಗಿನ ಅವರ ಚಿಂತನೆ ಹಾಗೂ ಸಮಾಜಮುಖಿ ಕೆಲಸಗಳಿಂದಲೂ ಸೇತುಪತಿ ಮಾದರಿಯಾಗಿದ್ದಾರೆ. ಒಬ್ಬ ನಟನಾಗಿ ಯಾವುದೇ ಪಾತ್ರವನ್ನು ಕೊಟ್ಟರು ನಿಭಾಯಿಸುವ ಸೇತುಪತಿ ತಮ್ಮ ಪಾತ್ರದ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುಬೇಕೆಂಬುದೇ ಅವರ ಉದ್ದೇಶವಾಗಿರುತ್ತದೆ.
ಕೃತಿ ಶೆಟ್ಟಿ ತೆಲುಗಿನ ಉಪ್ಪೇನಾ ಚಿತ್ರದ ಮೂಲಕ ಟಾಲಿವುಡ್ಗೆ ಪದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಅವರು ನಾಯಕಿ ಕೃತಿ ಶೆಟ್ಟಿ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಕೃತಿಯ ನಟನೆಯನ್ನು ನೋಡಿ ಸೇತುಪತಿ ಮನಸಾರೆ ಹೊಗಳಿದ್ದರು. ಅಲ್ಲದೆ, ಕೃತಿಯೊಂದಿಗೆ ನಾಯಕನಾಗಿ ತಮಿಳು ಚಿತ್ರವೊಂದರಲ್ಲಿ ನಟಿಸಲು ವಿಜಯ್ ನಿರಾಕರಿಸಿದ್ದರು. ಅದಕ್ಕೆ ಕಾರಣ ನೀಡಿದ್ದ ವಿಜಯ್, ನಾನು ಉಪ್ಪೇನಾ ಚಿತ್ರದಲ್ಲಿ ಕೃತಿಗೆ ತಂದೆಯಾಗಿ ಅಭಿನಯಿಸಿದ್ದೇನೆ. ನನ್ನ ಮಗಳೆಂದು ಭಾವಿಸಿದ ಮೇಲೆ ಅವಳೊಂದಿಗೆ ನಾನ್ಹೇಗೆ ರೊಮ್ಯಾನ್ಸ್ ಮಾಡಲು ಸಾಧ್ಯ ಎಂದಿದ್ದರು. ನನ್ನ ಮಗನಿಗೆ ಸುಮಾರು 15 ವರ್ಷ. ಆತ ಕೃತಿಗಿಂತ ಸ್ವಲ ಚಿಕ್ಕವನು. ಕೃತಿಯನ್ನು ಕೂಡ ನಾನು ಮಗಳಂತೆ ಭಾವಿಸುತ್ತೇನೆ. ಆದ್ರೆ ತೆರೆಯ ಮೇಲೆ ನಾನು ಹೇಗೆ ಅವಳೊಂದಿಗೆ ರೊಮ್ಯಾನ್ಸ್ ಮಾಡಲು ಸಾಧ್ಯ ಎನ್ನುವ ಮೂಲಕ ಆ ಸಿನಿಮಾವನ್ನೇ ವಿಜಯ್ ಸೇತುಪತಿ ತಿರಸ್ಕರಿಸಿದ್ದರು. (ಏಜೆನ್ಸೀಸ್)
ಶೋಯಿಬ್ ಮಲಿಕ್ ಜತೆ ಡಿವೋರ್ಸ್ ಆದ ಬೆನ್ನಲ್ಲೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಾನಿಯಾ ಮಿರ್ಜಾ!
ಎಷ್ಟು ಹೇಳಿದ್ರು ನನ್ನ ಮಾತೇ ಕೇಳ್ತಿಲ್ಲ… ಬೇರೇನೂ ಮಾಡಲು ಸಾಧ್ಯವಿಲ್ಲ ಎಂದು ಭಾವುಕರಾದ ರೋಹಿತ್ ಶರ್ಮ!