ಶೋಯಿಬ್​ ಮಲಿಕ್​ ಜತೆ ಡಿವೋರ್ಸ್ ಆದ​ ಬೆನ್ನಲ್ಲೇ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟ ಸಾನಿಯಾ ಮಿರ್ಜಾ!

Sania Mirza

ನವದೆಹಲಿ: ಭಾರತೀಯ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ತನ್ನ ಆಟದಿಂದ ಮಾತ್ರವಲ್ಲ ಸೌಂದರ್ಯದಿಂದಲೂ ಪ್ರೇಕ್ಷಕರ ಮನ ಸೆಳೆದಿರುವ ಸಾನಿಯಾ, ಪ್ರಸ್ತುತ ತಮ್ಮ ವೈಯಕ್ತಿಕ ಜೀವನದಲ್ಲಿ ಏರಿಳಿತಗಳನ್ನು ಎದುರಿಸುತ್ತಿದ್ದಾರೆ. ಪಾಕಿಸ್ತಾನದ ಕ್ರಿಕೆಟಿಗ ಶೋಯಿಬ್ ಮಲಿಕ್‌ನಿಂದ ವಿಚ್ಛೇದನ ಪಡೆದಿದ್ದು, ದುಬೈನಲ್ಲಿ ತಮ್ಮ ಮಗನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಇದರ ನಡುವೆ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನಲ್ಲಿ ಭಾಗವಹಿಸಿದ್ದ ಸಾನಿಯಾ ಕುತೂಹಲಕಾರಿ ಕಾಮೆಂಟ್ ಮಾಡಿದ್ದು, ಇದೀಗ ಆ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಸಾನಿಯಾ ಏನು ಹೇಳಿದರು ಎಂಬುದನ್ನು ತಿಳಿಯುವ ಮುನ್ನ ಬಾಲಿವುಡ್​ ಬಾದ್​ಷಾ ಶಾರುಖ್ ಖಾನ್​ ಅವರ ಹಿಂದಿನ ಮಾತನ್ನು ಒಮ್ಮೆ ನೆನಪು ಮಾಡಿಕೊಳ್ಳಬೇಕಿದೆ. ಅದೇನೆಂದರೆ, ಶಾರುಖ್ ಈ ಹಿಂದೆ ಎನ್​ಡಿಟಿವಿ ಜತೆ ಮಾತನಾಡುವಾಗ, ಸಾನಿಯಾ ಮಿರ್ಜಾ ಅವರ ಬಯೋಪಿಕ್ ಅದ್ಭುತವಾಗಿರುತ್ತದೆ. ಬೇಕಾದರೆ ಈ ಚಿತ್ರವನ್ನೂ ನಾನೇ ನಿರ್ಮಿಸುತ್ತೇನೆ. ಇದಲ್ಲದೇ ಸಾನಿಯಾ ಒಪ್ಪಿದರೆ ನಾನೂ ಕೂಡ ಅವರಿಗೆ ಜೋಡಿಯಾಗಿ ನಟಿಸುತ್ತೇನೆ ಎಂದಿದ್ದರು.

ಶಾರುಖ್​ ಹೇಳಿದ ಈ ಮಾತನ್ನು ಸಾನಿಯಾಗೆ ಕಪಿಲ್​ ಶರ್ಮ ಶೋನಲ್ಲಿ ನೆನಪಿಸಲಾಯಿತು. ಬಳಿಕ ಮಾತನಾಡಿದ ಸಾನಿಯಾ, ಮೊದಲು ನನ್ನ ಪ್ರೀತಿಯನ್ನು ಹುಡುಕಬೇಕು ಎಂದು ಕುತೂಹಲಕಾರಿ ಉತ್ತರ ನೀಡಿದ್ದಾರೆ. ಈ ಕಾಮೆಂಟ್‌ಗಳು ವೈರಲ್ ಆಗುತ್ತಿದ್ದಂತೆಯೇ ಸಾನಿಯಾ ತಮ್ಮ ಜೀವನದಲ್ಲಿ ಎರಡನೇ ಪ್ರೀತಿಗೆ ಆಹ್ವಾನ ನೀಡಲು ಸಿದ್ಧರಾಗಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ತನ್ನನ್ನು ಪ್ರೀತಿಸುವ ವ್ಯಕ್ತಿಯನ್ನು ಹುಡುಕಬೇಕು ಎಂಬ ಅರ್ಥವನ್ನು ಸಾನಿಯಾ ಮಾತು ಸೂಚಿಸುತ್ತದೆ ಎಂದು ಅಭಿಮಾನಿಗಳು ಕಾಮೆಂಟ್​ ಮಾಡುತ್ತಿದ್ದಾರೆ. ಇದು ನಿಜವೇ ಆಗಿದ್ದರೆ ನಾವು ಸಂತಸ ಪಡುತ್ತೇವೆ ಎನ್ನುತ್ತಾರೆ ಫ್ಯಾನ್ಸ್​. ಇನ್ನು ಕೆಲವರು ಪ್ರತಿ ಮಹಿಳೆಗೂ ತನಗೆ ಇಷ್ಟ ಬಂದಂತೆ ಬದುಕುವ ಹಕ್ಕು ಇದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

https://www.youtube.com/watch?v=8zWTjimCEKs&t=10s

ಅಂದಹಾಗೆ ಸಾನಿಯಾ ಮಿರ್ಜಾ ಜತೆಗಿನ ವಿವಾಹ ವಿಚ್ಛೇದನದ ವಂದತಿಗಳಿಗೆ ತೆರೆ ಎಳೆದಿದ್ದೇ ಕ್ರಿಕೆಟಿಗ ಶೋಯಿಬ್​ ಮಲಿಕ್. ಪಾಕ್​ನ ಕಿರುತೆರೆ ನಟಿ ಸನಾ ಜಾವೇದ್​ ಅವರೊಂದಿಗೆ ಎರಡನೇ ವಿವಾಹವಾಗಿರುವ ಕ್ಷಣಗಳನ್ನು ಶೋಯಿಬ್​ ಮಲಿಕ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಾನಿಯಾ ಮಿರ್ಜಾ ಜತೆಗಿನ 14 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ.

2010ರಲ್ಲಿ ಸಾನಿಯಾ ಮಿರ್ಜಾ ಅವರನ್ನು ವಿವಾಹವಾಗಿದ್ದ ಶೋಯಿಬ್​ ಮಲಿಕ್​ ದಂಪತಿಗೆ 2018ರಲ್ಲಿ ಗಂಡು ಜನಿಸಿತ್ತು. 2022ರಿಂದಲೂ ಇವರಿಬ್ಬರೂ ಪ್ರತ್ಯೇಕವಾಗಿ ದುಬೈನಲ್ಲಿ ವಾಸಿಸುತ್ತಿದ್ದರು. ಅಂದಿನಿಂದ ಇವರಿಬ್ಬರ ನಡುವೆ ವಿಚ್ಛೇದನ ಆಗಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಜತೆಗೆ ಇವರಿಬ್ಬರೂ ಕಳೆದ ಎರಡು ವರ್ಷಗಳಲ್ಲಿ ವಿರಳವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಯಾವಾಗ ಮಲಿಕ್​, ಸನಾ ಜತೆಗಿನ ಫೋಟೋಗಳನ್ನು ಹಂಚಿಕೊಂಡರೋ ಆಗ ಡಿವೋರ್ಸ್​ ಖಚಿತವಾಯಿತು. (ಏಜೆನ್ಸೀಸ್​)

ಎಷ್ಟು ಹೇಳಿದ್ರು ನನ್ನ ಮಾತೇ ಕೇಳ್ತಿಲ್ಲ… ಬೇರೇನೂ ಮಾಡಲು ಸಾಧ್ಯವಿಲ್ಲ ಎಂದು ಭಾವುಕರಾದ ರೋಹಿತ್​ ಶರ್ಮ!

ನಿಜವಾಯ್ತು ರಾಜಗುರು ಭವಿಷ್ಯ: ವಿಜಯವಾಣಿಗೆ ನೀಡಿದ ವರ್ಷಭವಿಷ್ಯದಲ್ಲಿ ಉಲ್ಲೇಖ

Share This Article

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಪ್ರತಿದಿನ ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತೀರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…