

ಅಮಿತಾಭ್ ಬಚ್ಚನ್ ಅವರ ಧ್ವನಿ ಇದುವರೆಗೂ ಚಿತ್ರಗಳು ಮತ್ತು ಜಾಹೀರಾತುಗಳಲ್ಲಿ ಮಾತ್ರ ಕೇಳಿ ಬರುತಿತ್ತು. ಈಗ ಇದೇ ಮೊದಲ ಬಾರಿಗೆ ಅವರ ಧ್ವನಿಯು ಅಮೇಜಾನ್ನ ಡಿಜಿಟಲ್ ಅಸಿಸ್ಟೆಂಟ್ ಎಂದೇ ಜನಪ್ರಿಯವಾಗಿರುವ ಅಲೆಕ್ಸಾದಲ್ಲಿ ಕೇಳಿ ಬರಲಿದೆ. ಈ ಮೂಲಕ ಅಲೆಕ್ಸಾಗೆ ಧ್ವನಿ ನೀಡುತ್ತಿರುವ ಭಾರತದ ಮೊದಲ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಅಲೆಕ್ಸಾ ಪಾತ್ರವಾಗಲಿದೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿಗೆ ‘ಮಾದಕ’ ನಟಿ ರಾಗಿಣಿ ಶಿಫ್ಟ್
ಈ ಕುರಿತು ಅಮಿತಾಭ್ ಬಚ್ಚನ್ ಮತ್ತು ಅಲೆಕ್ಸಾ ಮಧ್ಯೆ ಬಹುಕೋಟಿ ಮೊತ್ತದ ಒಪ್ಪಂದವಾಗಿದ್ದು, 2021ರಲ್ಲಿ ಅಮಿತಾಭ್ ಬಚ್ಚನ್ ಅವರ ಧ್ವನಿಯನ್ನು ಅಧಿಕೃತವಾಗಿ ಕೇಳಬಹುದಾಗಿದೆ.
ಅಮಿತಾಭ್ ಬಚ್ಚನ್ ಅವರ ಧ್ವನಿಯಲ್ಲಿ ಜೋಕ್ಗಳು, ಶಾಯರಿ, ಹವಾಮಾನ ಸೂಚನೆಗಳು, ಸ್ಫೂರ್ತಿದಾಯಕ ಸಂದೇಶಗಳು ಮುಂತಾದ ಹಲವು ವಿಷಯಗಳನ್ನು ಕೇಳಬಹುದಾಗಿದೆ. ಹಾಗಂದೆ ಇದು ಉಚಿತವಲ್ಲ. ಇದಕ್ಕಾಗಿ ಹಣ ಪಾವತಿ ಮಾಡಬೇಕಿದೆ.
ಈ ಕುರಿತು ಮಾತನಾಡಿರುವ ಅವರು, 'ಸಿನಿಮಾ ಇರಲಿ, ಟಿವಿ ಕಾರ್ಯಕ್ರಮಗಳು, ಪಾಡ್ಕಾಸ್ಟ್ಗಳು, ಈಗ ಇದು ... ಹೀಗೆ ಹೊಸತನಕ್ಕೆ ಅಳವಡಿಸಿಕೊಳ್ಳುವುದಕ್ಕೆ ನನಗೆ ಹಲವು ಅವಕಾಶಗಳು ಸಿಕ್ಕಿವೆ. ಅಮೇಜಾನ್ ಮತ್ತು ಅಲೆಕ್ಸಾ ಮೂಲಕ ಹೊಸ ವೇದಿಕೆ ಸಿಕ್ಕಂತಾಗಿದೆ. ಧ್ವನಿ ತಂತ್ರಜ್ಱನದ ಮೂಲಕ ಅಭಿಮಾನಿಗಳ ಜತೆಗೆ ಇನ್ನಷ್ಟು ಸಂಪರ್ಕ ಸಾಧಿಸಲು ಸಾಧ್ಯವಾಗಿದೆ' ಎಂದು ಅಮಿತಾಭ್ ಹೇಳಿಕೊಂಡಿದ್ದಾರೆ.