

ಸ್ಯಾನ್ಫ್ರಾನ್ಸಿಸ್ಕೋ: ಅಮೆರಿಕಾದ ಸ್ಯಾನ್ಫ್ರಾನ್ಸಿಸ್ಕೋದಲ್ಲಿರುವ ಕನ್ನಡ ನಾಟಕ ಪ್ರಿಯರಿಗೆ ಸಿಹಿ ಸುದ್ದಿಯೊಂದು ಲಭಿಸಿದ್ದು, ಅಮೆರಿಕ ದೇಶದ 'ರಂಗಾಮೇರಿಕಾ' ತಂಡಕ್ಕೆ ಇದೀಗ ಹತ್ತು ವರ್ಷದ ಸಂಭ್ರಮ.
ಈ 10ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ 'ಸೂಪರ್ ಸಂಸಾರ' ಹಾಸ್ಯ ನಾಟಕ ಪ್ರದರ್ಶನ ಏರ್ಪಡಿಸಲಾಗಿದ್ದು, ಸಂತೋಷ್ ಪವಾರ್ ಬರವಣಿಗೆ ಮಾಡಿದ್ದು, ಯಶವಂತ್ ಸರ್ದೇಶಪಾಂಡೆ ಅನುವಾದಿಸಿದ್ದಾರೆ. ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯಶವಂತ್ ನಿರ್ದೇಶನದ ಸೂಪರ್ ಸಂಸಾರ ನಾಟಕ ಪ್ರದರ್ಶನಕ್ಕೆ ದಿನಾಂಕ ಕೂಡ ನಿಗದಿಯಾಗಿದೆ.
ಇದೇ ಏಪ್ರಿಲ್ 7 ರಂದು ಮಧ್ಯಾಹ್ನ 3:30ಕ್ಕೆ 'ಸೂಪರ್ ಸಂಸಾರ' ಹಾಸ್ಯ ನಾಟಕ ಪ್ರದರ್ಶನವಾಗಲಿದ್ದು, ಕುಪರ್ಟಿನೋದಲ್ಲಿರುವ ಡಿ ಎಂಜಾ ಕಾಲೇಜಿನ ವಿಜುವಲ್ ಅಂಡ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ನಲ್ಲಿ ನಾಟಕ ನಡೆಯಲಿದೆ.