

Suicide Case: ಎರಡು ವರ್ಷಗಳ ಹಿಂದೆ ಮದುವೆಯಾಗಿ ಪತಿಯ ಮನೆಗೆ ಹೋದ ಯುವತಿ, ಇಂದು ಅದೇ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಇದೀಗ ಕುಟುಂಬಸ್ಥರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಸಾವಿಗೀಡಾದ ಯುವತಿಯನ್ನು ವಿಷ್ಣುಜಾ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಪ್ರಬಿನ್ ಆಡಿದ ಕಟು ಮಾತುಗಳಿಂದ ವಿಷ್ಣುಜಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪಗಳು ಕುಟುಂಬಸ್ಥರಿಂದ ಕೇಳಿಬಂದಿವೆ. ಸದ್ಯ ಇದೇ ಈಗ ಪೊಲೀಸರಿಗೆ ತಲೆನೋವಾಗಿ ಕಾರಣವಾಗಿದೆ.
ನೀನು ತೆಳ್ಳಗಿಲ್ಲ, ಸುಂದರವಾಗಿಲ್ಲ ಮತ್ತು ಉದ್ಯೋಗದಲ್ಲಿಲ್ಲ ಎಂಬ ಕಾರಣಕ್ಕಾಗಿ ಆಕೆಯನ್ನು ಪತಿ ನಿರ್ಲಕ್ಷಿಸಿದ್ದ. ಆಗಾಗ್ಗೆ ಇದೇ ವಿಷಯಕ್ಕೆ ವಿಷ್ಣುಜಾ ಜತೆಗೆ ಜಗಳವಾಡುತ್ತಿದ್ದ ಎಂದು ಸಂಬಂಧಿಕರು ಪತಿ ಪ್ರಬಿನ್ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ಗಂಡನ ಕಟು, ಚುಚ್ಚು ಮಾತಿನ ಬಗ್ಗೆ ಯುವತಿ ತನ್ನ ಕುಟುಂಬಕ್ಕೆ ಹೇಳಿಕೊಂಡಿರುವುದಾಗಿಯೂ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸ್ವತಃ ವಿಷ್ಣುಜಾಳೇ ಇದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗದೆ ತನ್ನ ಪತಿಯೊಂದಿಗೆ ರಾಜಿ ಮಾಡಿಕೊಳ್ಳಲು ಮುಂದಾದರು. ಆದರೆ, ಆತ ಮಾತ್ರ ದಯಪಾಲಿಸಿಲ್ಲ ಎಂದು ಮೃತ ಯುವತಿಯ ಸೋದರ ಮಾವ ಶ್ರೀಕಾಂತ್ ದೂರಿದ್ದಾರೆ.
"ವಿಷ್ಣುಜಾ ಸಾಯುವಂತ ವ್ಯಕ್ತಿಯಲ್ಲ. ಆಕೆ ಮನನೊಂದಿದ್ದಳು ನಿಜ. ಆದ್ರೆ, ಸಾವಿಗೆ ಶರಣಾಗುವ ಮನಸ್ಥಿತಿಯವಳಲ್ಲ. ಜೀವನವನ್ನು ಕೊನೆಗೊಳಿಸಲು ಅವಳಿಗೆ ಕಾಡಿದ ಸಮಸ್ಯೆಯೇನು?" ಎಂಬುದನ್ನು ಪೊಲೀಸರು ತನಿಖೆಯಿಂದ ಕಂಡುಹಿಡಿಯಬೇಕು. ಕೆಲಸ ಇಲ್ಲ ಎಂಬ ಕಾರಣಕ್ಕೆ ಅವಳಿಗೆ ಅವಮಾನ ಹೆಚ್ಚಾಗಿತ್ತು ಎಂದು ಶ್ರೀಕಾಂತ್ ಹೇಳಿದ್ದಾರೆ. ವಿಷ್ಣುಜಾ ಬ್ಯಾಂಕಿಂಗ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು, ಅವಳು ಹಾಸ್ಟೆಲ್‌ನಲ್ಲಿದ್ದಾಗ ಅಧ್ಯಯನ ಮಾಡುತ್ತಿದ್ದಳು. ಆದರೆ, ಇದನ್ನೆಲ್ಲ ಮೀರಿ ಆಕೆ ಅವನನ್ನೇ ಮದುವೆಯಾಗಲು ಮುಂದಾದಳು. ಆದರೆ, ಮದುವೆ ಆದ ನಂತರ ಈತ ಅವಳು ತೆಳ್ಳಗಿದ್ದಾಳೆ ಎಂದು ಟೀಕಿಸುತ್ತಲೇ ಇದ್ದ ಎಂಬ ಆರೋಪಗಳು ಕುಟುಂಬದವರಿಂದ ಕೇಳಿಬಂದಿವೆ.
ಎಲ್ಲಾ ಮಹಿಳೆಯರಂತೆ ತಾನು ಸುಂದರವಾಗಿ ಕಾಣಲು ಸಾಧ್ಯವಾಗದ ಹಿನ್ನೆಲೆ ವಿಷ್ಣುಜಾ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಂಬಲಾಗಿದೆ. ಪತಿಯ ಹಿಂಸೆಯ ಬಗ್ಗೆ ವಿಷ್ಣುಜಾ ತನ್ನ ಸ್ನೇಹಿತರಿಗೆ ಹಾಗೂ ಕುಟುಂಬಸ್ಥರಿಗೆ ದೂರಿದ್ದಳು ಎಂದು ಯುವತಿಯ ಸೋದರ ಮಾವ ಶ್ರೀಕಾಂತ್ ಆರೋಪಿಸಿದ್ದಾರೆ. ಮೇ 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಷ್ಣುಜಾ ಈಗ ಆತ್ಮಹತ್ಯೆಗೆ ಶರಣಾಗುವ ಮೂಲಕ ದುರಂತ ಅಂತ್ಯ ಕಂಡಿದ್ದಾಳೆ.
ಸಾವನ್ನಪ್ಪಿದ ದಿನದಂದು ಇಬ್ಬರ ನಡುವೆ ಏನೋ ಗಂಭೀರ ಸಮಸ್ಯೆ ನಡೆದಿದೆ ಎಂದು ಸಂಬಂಧಿಕರು ಶಂಕಿಸಿದ್ದಾರೆ. ಯುವತಿಯ ಸಾವಿನ ಸುದ್ದಿಯನ್ನು ಮೊದಲು ಕೇರಳದ ಅರೀಕೋಡ್‌ನ ಪೂವತ್ತಿಕ್ಕಲ್‌ನಲ್ಲಿರುವ ವಿಷ್ಣುಜಾ ಅವರ ಸಹೋದರಿಯ ಮನೆಗೆ ಕರೆ ಮಾಡಿ ತಿಳಿಸಲಾಯಿತು. ರೂಮ್ ಬಾಗಿಲು ತೆರೆದಿಲ್ಲ ಎಂದು ನೆರೆಹೊರೆಯವರು ತಿಳಿಸಿದಾಗ, ಬಾಗಿಲನ್ನು ಬಲವಂತವಾಗಿ ಓಪನ್ ಮಾಡಲಾಯಿತು. ಅಲ್ಲಿ ವಿಷ್ಣುಜಾ ಮೃತಪಟ್ಟಿರುವುದು ಕಂಡುಬಂದಿದೆ. ಪತಿ ಪ್ರಬಿನ್ ಅವರ ಕುಟುಂಬಕ್ಕೆ ಈ ದೌರ್ಜನ್ಯದ ಬಗ್ಗೆ ತಿಳಿದಿತ್ತು ಎಂದು ಯುವತಿ ಸಂಬಂಧಿಕರು ಆರೋಪಿಸಿದ್ದಾರೆ.
"ಪ್ರಬಿನ್ ಆಸ್ಪತ್ರೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ವ್ಯಕ್ತಿಯಾಗಿ ಕಂಡಿದ್ದೇ ಆದರೂ ಆತ ಮನೆಯೊಳಗೆ ಒಂದು ಪಾತ್ರ ಮತ್ತು ಹೊರಗೆ ಇನ್ನೊಂದೇ ಪಾತ್ರ ನಿಭಾಯಿಸುತ್ತಿದ್ದನು" ಎಂದು ಶ್ರೀಕಾಂತ್ ಆರೋಪಿಸಿದ್ದಾರೆ. ಪೊಲೀಸ್ ವರದಿ ಬಂದ ತಕ್ಷಣವೇ ಪ್ರಬಿನ್ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ,(ಏಜೆನ್ಸೀಸ್).