ಕಬ್ಬು ತಿನ್ನುವ ಆಸೆಯಲ್ಲಿ ಹೋದ ಬಾಲಕ ಅನುಮಾನಸ್ಪದ ಸಾವು!

sugarcane-with-driperline
Published on

ಚಾಮರಾಜನಗರ: ಗೆಳೆಯರೊಂದಿಗೆ ಆಟವಾಡಿ ಕಬ್ಬು ತಿನ್ನಲು ಹೋಗಿದ್ದ 8 ವರ್ಷದ ಬಾಲಕ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿಯಲ್ಲಿ ಸಂಭವಿಸಿದೆ.

ಗ್ರಾಮದ ಮಹದೇವಶೆಟ್ಟಿ ಎಂಬುವರ ಪುತ್ರ ವಿಜಯ ಶಿವಕುಮಾರ್ ಶೆಟ್ಟಿ(8) ಮೃತ ದುರ್ದೈವಿ. ನಿನ್ನೆ (ಗುರುವಾರ) ಇಬ್ಬರು ಗೆಳೆಯರೊಂದಿಗೆ ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದ ವಿಜಯ ಶಿವಕುಮಾರ್ ಶೆಟ್ಟಿ, ಸ್ನೇಹಿತರೊಟ್ಟಿಗೆ ಕಬ್ಬು ತಿಂದಿದ್ದ. ಇನ್ನು ಸ್ವಲ್ಪ ಕಬ್ಬು ಬೇಕು, ಇದು ಸಾಕಾಗಲಿಲ್ಲ ಎಂದವ ಗೆಳೆಯರನ್ನ ಬಿಟ್ಟು ಮತ್ತೆ ಕಬ್ಬು ತರಲು ಹೋಗಿದ್ದ. ಇದನ್ನೂ ಓದಿರಿ ಛೇ..ಛೇ.. ಇಂದೆಂಥ ಅಸಹ್ಯ? ಕಲಾಪದಲ್ಲೇ ಕೂತು ಅಶ್ಲೀಲ ವಿಡಿಯೋ ನೋಡಿದ ಕಾಂಗ್ರೆಸ್​ ಎಂಎಲ್​ಸಿ

ಸಂಜೆಯಾದರೂ ವಿಜಯ ಶಿವಕುಮಾರ್ ಶೆಟ್ಟಿ ಮನೆಗೆ ವಾಪಸ್​ ಬಂದಿರಲಿಲ್ಲ. ಆತಂಕಗೊಂಡ ಪೋಷಕರು ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದರು. ಇಂದು(ಶುಕ್ರವಾರ) ಗ್ರಾಮದ ಕೆರೆ ಸಮೀಪ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.

ಮೂಗು, ಕಿವಿಯಿಂದ ರಕ್ತ ಬಂದಿರುವ ಕಲೆ ಮೃತದೇಹದ ಮೇಲಿದೆ. ಬೆನ್ನು ಭಾಗಕ್ಕೆ ಪೆಟ್ಟಾಗಿದೆ. ಕಬ್ಬು ತರಲೆಂದು ಹೋಗುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಆತ ಮೃತಪಟ್ಟಿರಬಹುದು, ಶವವನ್ನ ಕೆರೆ ಸಮೀಪ ದುಷ್ಕರ್ಮಿಗಳು ಎಸೆದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮಗ ಶವವಾಗಿ ಪತ್ತೆಯಾಗುತ್ತಿದ್ದಂತೆ ಪಾಲಕರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಭೇಟಿ ನೀಡಿದ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net