

ಉತ್ತರಕನ್ನಡ: ಶಿರಸಿ ತಾಲೂಕಿನ ಬೆಣ್ಣೆಹೊಳೆ ಫಾಲ್ಸ್ ಬಳಿ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರ ಶವ ಪತ್ತೆಯಾದ ಮರುದಿನವೇ ಪ್ರಿಯಕರನ ತಂದೆಯೂ ಸಾವಿನ ಮನೆಯ ಕದ ತಟ್ಟಿದ್ದಾರೆ.
ಬೊಮ್ಮನಕೊಡ್ಲುವಿನ ವಿಕ್ರಮ ಮಾವಿನಕುರ್ವೆ(28) ಹಾಗೂ ತೆರಕನಹಳ್ಳಿಯ ಮೇಘನಾ ನಾಯ್ಕ(27) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ವಿಕ್ರಮ ಮಾವಿನಕುರ್ವೆ ಜ.20ರಂದು ಮನೆಯಿಂದ ನಾಪತ್ತೆಯಾಗಿದ್ದ. ಇವರಿಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ನಿನ್ನೆ (ಸೋಮವಾರ) ಪತ್ತೆಯಾಗಿತ್ತು. ನಾಲ್ಕೈದು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಘಟನಾ ಸ್ಥಳಕ್ಕೆ ಪೊಲೀಸರೊಂದಿಗೆ ತೆರಳಿದ್ದ ವಿಕ್ರಮನ ತಂದೆ ಗಣೇಶ ಶಂಕರ ಮಾವಿನಕುರ್ವೆ ಅವರು ಇದು ತನ್ನ ಮಗನ ಶವ ಎಂದು ಗುರುತಿಸಿದ್ದರು. ಇದನ್ನೂ ಓದಿರಿ ಹೆತ್ತಮಕ್ಕಳನ್ನೇ ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ
ವಿಕ್ರಮ ಮತ್ತು ಮೇಘನಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಮದುವೆಗೆ ಮನೆಯಲ್ಲಿ ಒಪ್ಪಿಗೆ ಸಿಕ್ಕಿರಲಿಲ್ಲ. ಇದೇ ಕಾರಣಕ್ಕೆ ನೊಂದ ಪ್ರೇಮಿಗಳು, ಸಾವಲ್ಲಿ ಒಂದಾಗುವ ನಿರ್ಧಾರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮಗನ ದುರಂತ ಸಾವಿನಿಂದ ಕಂಗಾಲಾಗಿದ್ದ, ತಂದೆ ಗಣೇಶ ಶಂಕರ ಮಾವಿನಕುರ್ವೆ(58) ತುಂಬಾ ನೊಂದುಕೊಂಡಿದ್ದರು. ಮಗ ಮತ್ತು ಆತನ ಪ್ರಿಯತಮೆ ಹೆಣವಾಗಿ ಪತ್ತೆಯಾದ ಮರುದಿನವೇ ಅಂದರೆ ಮಂಗಳವಾರ ಬೆಳಗ್ಗೆ ಮನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.