ಛೇ..ಛೇ.. ಇಂದೆಂಥ ಅಸಹ್ಯ? ಕಲಾಪದಲ್ಲೇ ಕೂತು ಅಶ್ಲೀಲ ವಿಡಿಯೋ ನೋಡಿದ ಕಾಂಗ್ರೆಸ್​ ಎಂಎಲ್​ಸಿ

Prakash Rathod
Published on

ಬೆಂಗಳೂರು: ಈ ಹಿಂದೆ ಸದಸನಲ್ಲಿ ಕೂತು ಬಿಜೆಪಿಯ ಮೂವರು ಶಾಸಕರು ಬ್ಲೂ ಫಿಲಂ ವೀಕ್ಷಣೆ ಮಾಡಿ ಇಡೀ ದೇಶಾದ್ಯಂತ ಕರ್ನಾಟಕದ ಮಾನ ಮರ್ಯಾದೆಯನ್ನ ತೆಗೆದಿದ್ದರು. ಇದು ರಾಜ್ಯದ ಪಾಲಿಗೆ ಕಪ್ಪು ಚುಕ್ಕೆಯಾಗೇ ಉಳಿಕೊಂಡಿದೆ. ಇದೀಗ ಮತ್ತೊಬ್ಬ ಜನಪ್ರತಿನಿಧಿ ಕಲಾಪದಲ್ಲಿ ಕುಳಿತು ಅಶ್ಲೀಲ ವಿಡಿಐಒ ನೋಡುವ ಮೂಲಕ ಸದನದ ಮಾನ ಹರಾಜು ಹಾಕಿದ ಘಟನೆ ಶುಕ್ರವಾರ ಸಂಭವಿಸಿದೆ.

ಇಂದು ವಿಧಾನಪರಿಷತ್​ ಕಲಾಪ ನಡೆಯುತ್ತಿತ್ತು. ಕಾಂಗ್ರೆಸ್​ ಎಂಎಲ್​ಸಿ ಪ್ರಕಾಶ್ ರಾಥೋಡ್ ಅವರು ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ದೃಶ್ಯ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಡೀ ರಾಜ್ಯವನ್ನು ಪ್ರತಿನಿಧಿಸುವ ಶಾಸಕರುಗಳು ಕೂರುವ ಪ್ರಜಾ ದೇಗುಲದಲ್ಲಿ ಇಂತಹ ಅಸಹ್ಯ ವರ್ತನೆ ತೋರಿದ ಎಂಎಲ್​ಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ನೈತಿಕತೆಯ ಪ್ರಶ್ನೆಗೆ ಸ್ವತಃ ಆ ಎಂಎಲ್​ಸಿ ಜತೆಗೆ ಕಾಂಗ್ರೆಸ್​ ಪಕ್ಷದ ಮುಖಂಡರೂ ಸ್ಪಷ್ಟನೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಇದನ್ನೂ ಓದಿರಿ ಕಲಾಪದಲ್ಲಿ ಮೊಬೈಲ್ ನೋಡುತ್ತಿದ್ದ ಕಾಂಗ್ರೆಸ್​ ಸದಸ್ಯ! ಡಿಲೀಟ್​ ಮಾಡಿದ ಫೋಟೋ-ವಿಡಿಯೋ ಅಶ್ಲೀಲವೇ?

ಈ ಘಟನೆ ಕುರಿತು ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಮಾತನಾಡಿದ ಪ್ರಕಾಶ್ ರಾಠೋಡ್, ನಾನು ಶೇ.100ಕ್ಕೆ 101ರಷ್ಟು ಹೇಳುವೆ, ಅಶ್ಲೀಲ ವಿಡಿಯೋ ನೋಡಿಲ್ಲ. ನೂರಾರು ಗ್ರೂಪ್​ಗಳಲ್ಲಿ ಇದ್ದೇನೆ. ಸಾವಿರಾರು ವಿಡಿಯೋ ಇವೆ. ಸ್ಟೋರೇಜ್ ಫುಲ್ ಆಗಿತ್ತು. ಅದನ್ನ ಡಿಲೀಟ್ ಮಾಡ್ತಿದ್ದೆ. ಅದು ಅಶ್ಲೀಲ ವಿಡಿಯೋನಾ? ಅನ್ನೋದೂ ನನಗೆ ಗೊತ್ತಿಲ್ಲ.. ಎಂದರು.

ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಡಬೇಕಿತ್ತು. ಕ್ಲಾರಿಫಿಕೇಷನ್ ಮೇಲೆ ಉತ್ತರ ಕೊಡುವಾಗ ಮಾಹಿತಿ ನೋಡುತ್ತಿದ್ದೆ. ಆಗ ಮೊಬೈಲ್ ಓಪನ್ ಆಗಿದೆ. ನನ್ನ ಮೊಬೈಲ್​ ಸ್ಟೋರೇಜ್​ ಫುಲ್​ ಆಗಿತ್ತು. ಹಾಗಾಗಿ ನಾನು ಯಾವುದನ್ನೂ ನೋಡದೆ ಬಂದಿರುವ ಮೆಸೇಜ್​ ಮತ್ತು ವಿಡಿಯೋ ಡಿಲೀಟ್ ಮಾಡ್ತಿದ್ದೆ. ನನಗೆ ಯಾರೂ ಅಶ್ಲೀಲ ವಿಡಿಯೋ ಕಳಿಸಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ಈ ಘಟನೆ ಕುರಿತು ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಬಿಜೆಪಿ ಮುಖಂಡ ಗೋ.ಮಧುಸೂದನ್​, ಎಲ್ಲಿಯ ತನಕ ಜನ ಬುದ್ಧಿ ಕಲಿಸಲ್ಲವೋ? ಅಲ್ಲಿಯವರೆಗೂ ಇಂತಹ ಜನಪ್ರತಿನಿಧಿಗಳಿಗೆ ಬುದ್ಧಿ ಬರಲ್ಲ. ಆಯಾ ಊರಿನ ಜನರೇ ನೀಚನಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net