ಹಿರಿಯ ಪತ್ರಕರ್ತ 'ಬಾನಾಸು'ಗೆ ಒಲಿದು ಬಂತು ಅತ್ಯುತ್ತಮ ಚಿತ್ರ ವಿಮರ್ಶಕ ಪ್ರಶಸ್ತಿ

Untitled design (63)
Published on

ನವದೆಹಲಿ: ಇಂದು (ಆಗಸ್ಟ್ 24) ಸಂಜೆ 5 ಗಂಟೆಗೆ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023ರ ವಿಜೇತರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ದೇಶದಾದ್ಯಂತ ಚಿತ್ರರಂಗದ ಅತ್ಯುತ್ತಮ ಪ್ರತಿಭೆಗಳನ್ನು ಗೌರವಿಸಲು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ವಾರ್ಷಿಕವಾಗಿ ಘೋಷಿಸಲಾಗುತ್ತದೆ. ಅದರಂತೆಯೇ ಈ ಬಾರಿಯೂ ಕೂಡ ಪ್ರಶಸ್ತಿ ಗೆದ್ದವರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಅನೇಕ ಪ್ರಶಸ್ತಿಗಳ ಪೈಕಿ ಸಿನಿಮಾ ಪತ್ರಕರ್ತರಿಗೆ ಎಂದೇ ನೀಡುವ 'ಅತ್ಯುತ್ತಮ ಸಿನಿಮಾ ವಿಮರ್ಶಕ' ಪ್ರಶಸ್ತಿ ಈ ಬಾರಿ ಕನ್ನಡದ ಸಿನಿಮಾ ಪತ್ರಕರ್ತರನ್ನು ಅರಸಿ ಬಂದಿದೆ. ಸ್ಯಾಂಡಲ್​ವುಡ್​ಗೆ ಬಾ.ನಾ. ಸುಬ್ರಹ್ಮಣ್ಯ ಎಂದೇ ಚಿರಪರಿಚಿತರಾಗಿರುವ ಕನ್ನಡ ಹಿರಿಯ ಸಿನಿಮಾ ರಿಪೋರ್ಟರ್​​ ಸುಬ್ರಹ್ಮಣ್ಯ ಬಾಡೂರು ಅವರಿಗೆ ಈ ವಿಶೇಷ ಪ್ರಶಸ್ತಿ ಲಭಿಸಿದೆ.

 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023ರ ವಿಜೇತರ ಪಟ್ಟಿ ಈ ಕೆಳಕಂಡಂತಿದೆ ಅನುಸರಿಸಿ:

ಅತ್ಯುತ್ತಮ ಕನ್ನಡ ಸಿನಿಮಾ: 777 ಚಾರ್ಲಿ

ಅತ್ಯುತ್ತಮ ಹಿಂದಿ ಚಿತ್ರ: ಸರ್ದಾರ್ ಉಧಮ್

ಅತ್ಯುತ್ತಮ ಗುಜರಾತಿ ಚಲನಚಿತ್ರ: ಚೆಲೋ ಶೋ (ದಿ ಲಾಸ್ಟ್ ಶೋ)

ಅತ್ಯುತ್ತಮ ಮರಾಠಿ ಸಿನಿಮಾ: ಎಕ್ದಾ ಕೇ ಜಲಾ

ಅತ್ಯುತ್ತಮ ಮಲಯಾಳಂ ಚಿತ್ರ: ಮನೆ

ವಿಶೇಷ ತೀರ್ಪುಗಾರರ ಪ್ರಶಸ್ತಿಗಳು: ಶೇರ್​ಶಾ

ಅತ್ಯುತ್ತಮ ಸಂಗೀತ ನಿರ್ದೇಶಕ: ಪುಷ್ಪಾ 1 ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್, ಆರ್‌ಆರ್‌ಆರ್‌ ಚಿತ್ರಕ್ಕೆ ಎಂ.ಎಂ. ಕೀರವಾಣಿ

ಅತ್ಯುತ್ತಮ ಸಂಕಲನ: ಸಂಜಯ್ ಲೀಲಾ ಬನ್ಸಾಲಿ (ಗಂಗೂಬಾಯಿ ಕಥಿಯಾವಾಡಿ)

ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ (ದಿ ಕಾಶ್ಮೀರ್ ಫೈಲ್ಸ್‌)

ಅತ್ಯುತ್ತಮ ಪೋಷಕ ನಟ: ಪಂಕಜ್ ತ್ರಿಪಾಠಿ(ಮಿಮಿ)

ಅತ್ಯುತ್ತಮ ನಟಿ: ಆಲಿಯಾ ಭಟ್ (ಗಂಗೂಬಾಯಿ ಕಥಿಯಾವಾಡಿ), ಕೃತಿ ಸನೋನ್ (ಮಿಮಿ)

ಅತ್ಯುತ್ತಮ ನಟ: ಅಲ್ಲು ಅರ್ಜುನ್ (ಪುಷ್ಪಾ 1)

ಸಂಪೂರ್ಣ ಮನರಂಜನೆಯನ್ನು ಒದಗಿಸಿದ ಅತ್ಯುತ್ತಮ ಜನಪ್ರಿಯ ಚಲನಚಿತ್ರ: ಆರ್​ಆರ್​ಆರ್​

ಅತ್ಯುತ್ತಮ ಚಲನಚಿತ್ರ: ರಾಕೆಟ್ರಿ: ದಿ ನಂಬಿ ಎಫೆಕ್ಟ್ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net