

ನವದೆಹಲಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023ರ ವಿಜೇತರನ್ನು ಇಂದು (ಆಗಸ್ಟ್ 24) ಸಂಜೆ 5 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಾಯಿತು. ದೇಶದಾದ್ಯಂತ ಚಿತ್ರರಂಗದ ಅತ್ಯುತ್ತಮ ಪ್ರತಿಭೆಗಳನ್ನು ಗೌರವಿಸಲು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ವಾರ್ಷಿಕವಾಗಿ ಘೋಷಿಸಲಾಗುತ್ತದೆ. ಅದರಂತೆಯೇ ಈ ಬಾರಿಯೂ ಕೂಡ ಪ್ರಶಸ್ತಿ ಗೆದ್ದವರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರೋತ್ಸವಗಳ ನಿರ್ದೇಶನಾಲಯದ ಮಾಹಿತಿ ಪ್ರಕಾರ, "ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಅತ್ಯುತ್ತಮ, ತಾಂತ್ರಿಕ ಶ್ರೇಷ್ಠತೆ ಮತ್ತು ಸಾಮಾಜಿಕ ಪ್ರಸ್ತುತತೆಯ ಚಲನಚಿತ್ರಗಳ ನಿರ್ಮಾಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ" ಎಂದು ತಿಳಿಸಿದೆ. 69ನೇ ರಾಷ್ಟ್ರೀಯ ಪ್ರಶಸ್ತಿಗಳಿಗಾಗಿ, 2021 ರಲ್ಲಿ ಪ್ರಮಾಣೀಕರಿಸಿದ ಚಲನಚಿತ್ರಗಳಿಗೆ ಗೌರವವನ್ನು ನೀಡಲಾಗಿದ್ದು, ಯಾವ ಭಾಷೆಯ ಸಿನಿಮಾಗಳು ಪ್ರಶಸ್ತಿ ಪಡೆದುಕೊಂಡಿದೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಅನುಸರಿಸಿ.
ಅತ್ಯುತ್ತಮ ಕನ್ನಡ ಸಿನಿಮಾ: 777 ಚಾರ್ಲಿ
ಅತ್ಯುತ್ತಮ ಹಿಂದಿ ಚಿತ್ರ: ಸರ್ದಾರ್ ಉಧಮ್
ಅತ್ಯುತ್ತಮ ಗುಜರಾತಿ ಚಲನಚಿತ್ರ: ಚೆಲೋ ಶೋ (ದಿ ಲಾಸ್ಟ್ ಶೋ)
ಅತ್ಯುತ್ತಮ ಮರಾಠಿ ಸಿನಿಮಾ: ಎಕ್ದಾ ಕೇ ಜಲಾ
ಅತ್ಯುತ್ತಮ ಮಲಯಾಳಂ ಚಿತ್ರ: ಮನೆ
ವಿಶೇಷ ತೀರ್ಪುಗಾರರ ಪ್ರಶಸ್ತಿಗಳು: ಶೇರ್ಶಾ
ಅತ್ಯುತ್ತಮ ಸಂಗೀತ ನಿರ್ದೇಶಕ: ಪುಷ್ಪಾ 1 ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್, ಆರ್‌ಆರ್‌ಆರ್ ಚಿತ್ರಕ್ಕೆ ಎಂ.ಎಂ. ಕೀರವಾಣಿ
ಅತ್ಯುತ್ತಮ ಸಂಕಲನ: ಸಂಜಯ್ ಲೀಲಾ ಬನ್ಸಾಲಿ (ಗಂಗೂಬಾಯಿ ಕಥಿಯಾವಾಡಿ)
ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ (ದಿ ಕಾಶ್ಮೀರ್ ಫೈಲ್ಸ್)
ಅತ್ಯುತ್ತಮ ಪೋಷಕ ನಟ: ಪಂಕಜ್ ತ್ರಿಪಾಠಿ(ಮಿಮಿ)
ಅತ್ಯುತ್ತಮ ನಟಿ: ಆಲಿಯಾ ಭಟ್ (ಗಂಗೂಬಾಯಿ ಕಥಿಯಾವಾಡಿ), ಕೃತಿ ಸನೋನ್ (ಮಿಮಿ)
ಅತ್ಯುತ್ತಮ ನಟ: ಅಲ್ಲು ಅರ್ಜುನ್ (ಪುಷ್ಪಾ 1)
ಸಂಪೂರ್ಣ ಮನರಂಜನೆಯನ್ನು ಒದಗಿಸಿದ ಅತ್ಯುತ್ತಮ ಜನಪ್ರಿಯ ಚಲನಚಿತ್ರ: ಆರ್‌ಆರ್‌ಆರ್
ಅತ್ಯುತ್ತಮ ಚಲನಚಿತ್ರ: ರಾಕೆಟ್ರಿ: ದಿ ನಂಬಿ ಎಫೆಕ್ಟ್ (ಏಜೆನ್ಸೀಸ್)