ಇಡೀ ರಾಜ್ಯಕ್ಕೆ ಆವರಿಸಲಿರುವ ಮುಂಗಾರು: 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್- Southwest Monsoon Covers

ಅರ್ಧ ಕರುನಾಡಿಗೆ ಆವರಿಸಿರುವ ಮುಂಗಾರು
ಅರ್ಧ ಕರುನಾಡಿಗೆ ಆವರಿಸಿರುವ ಮುಂಗಾರು
Published on
ಬೆಂಗಳೂರು: ಅರ್ಧ ಕರುನಾಡಿಗೆ ಆವರಿಸಿರುವ ಮುಂಗಾರು, ಮುಂದಿನ 48 ಗಂಟೆಯಲ್ಲಿ ಇಡೀ ರಾಜ್ಯವನ್ನು ವ್ಯಾಪಿಸಲಿದೆ.
ಕೇರಳ, ತಮಿಳುನಾಡು, ಅರ್ಧ ಕರ್ನಾಟಕ ಮತ್ತು ಆಂಧ್ರಪ್ರದೇಶವನ್ನು ಆವರಿಸಿದ್ದು, ಮಹಾರಾಷ್ಟ್ರ, ಗೋವಾ, ಆಂಧ್ರ ಮತ್ತು ಕರ್ನಾಟಕದ ಕೆಲ ಭಾಗಗಳಲ್ಲಿ ಮಾನ್ಸೂನ್ ಮುನ್ನಡೆಯಲು ವಾತಾವರಣ ಪೂರಕವಾಗಿದೆ. ಮುಂದಿನ 7 ದಿನಗಳಲ್ಲಿ ಆ ಭಾಗಗಳಲ್ಲಿ 7ರಿಂದ 20 ಸೆಂಮೀವರೆಗೆ ಮಳೆಯಾಗುವ ಸಂಭವ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮಾಹಿತಿ ನೀಡಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂ 7ರಿಂದ ಜೂ 10ವರೆಗೆ ಹಾಗೂ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಮುಂದಿನ 24 ಗಂಟೆ ಜೋರು ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಕೊಟ್ಟಿದೆ. ಈ ಅವಧಿಯಲ್ಲಿ ಗಾಳಿ ವೇಗ ಹೆಚ್ಚಿರುವ ಕಾರಣ ಸಮುದ್ರ ಪ್ರದೇಶಗಳಿಗೆತೆರಳದಂತೆ ಮೀನುಗಾರರಿಗೆ ಸೂಚಿಸಲಾಗಿದೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿಯಲ್ಲಿ ಮುಂದಿನ 4 ದಿನ ಮತ್ತು ಕೊಪ್ಪಳದಲ್ಲಿ ಮುಂದಿನ 2 ದಿನ ಬಿರುಸಾಗಿ ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಇರಲಿದೆ. ಚಾಮರಾಜನಗರ, ದಾವಣಗೆರೆ ಮತ್ತು ಮಂಡ್ಯದಲ್ಲಿ ಜೂ 7ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ತುಮಕೂರು, ಕೋಲಾರ, ದಾವಣಗೆರೆ ಸೇರಿ ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net