ರಾಜಕೀಯ ಸೇರಿ ವಿವಿಧ ಕ್ಷೇತ್ರಗಳ ನೂರಾರು ಜನರಿಗೆ ಜಯದೇವ ಮಾರ್ಗದರ್ಶಕರಾಗಿದ್ದರು. ಸಂಸ್ಥೆಯ ಅಧಿಕಾರ ಹಿಡಿಯುವ ಹಂಬಲ ತೋರದೆ, ನಾಯಕತ್ವದ ಗುಣವಿರುವ ವ್ಯಕ್ತಿಗಳನ್ನು ರೂಪಿಸುವುದು ಅವರ ಪ್ರಮುಖ ಗುರಿಯಾಗಿತ್ತು. ಅವರ ಬದುಕು ಕೇವಲ ಒಂದು ಘಟನೆಯ ನೆನಪಾಗಿ ಉಳಿಯದೆ, ಮುಂದಿನ ಪೀಳಿಗೆಗೆ ಆದರ್ಶ ಮಾರ್ಗದರ್ಶಿಯಾಗಿದೆ ಎಂದು ಶ್ಲಾಘಿಸಿದರು.ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ಎಂ.ಪಿ. ಕುಮಾರ್, ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಲೇಖಕ ಬೇಳೂರು ಸುದರ್ಶನ ಉಪಸ್ಥಿತರಿದ್ದರು.