ದರ್ಶನ್ ಪರ ವಕೀಲರು ವಾದ ಮಾಡಿದ್ದು ಹೀಗೆ
ನವೆಂಬರ್ 2025ರಲ್ಲಿ ಸಲ್ಲಿಸಿದ ಚಾರ್ಜ್ ಶೀಟ್ ಪ್ರಕಾರ, 272 ಸಾಕ್ಷಿಗಳಿದ್ದು ಇಲ್ಲಿಯವರೆಗೂ 7 ತಿಂಗಳಿನಿಂದ ಕೇವಲ 10 ಸಾಕ್ಷಿಗಳ ವಿಚಾರಣೆ ವಿಚಾರಣೆಯಾಗಿದೆ. 150 ಸಾಕ್ಷಿಗಳ ವಿಚಾರಣೆ ಬಾಕಿಯಿದೆ. ಪ್ರಮುಖ ಸಾಕ್ಷಿಗಳ ವಿಚಾರಣೆಯು ಮಾಡುತ್ತಿಲ್ಲ ಎಂದು ಮುಕುಲ್ ರೋಹಟಗಿ ವಾದಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದಾರ್ಥ್ ಲೂತ್ರ, ಸಾಕ್ಷ್ಯಗಳಿಗೆ ಏನು ಮಾಡಿದ್ದಾರೆಂದು ಬಾಯ್ಬಿಟ್ಟರೆ, ಜಾಮೀನು ರದ್ದಾಗುತ್ತದೆ ಎಂದರು. ಮುಂದಿನ ವರ್ಷದೊಳಗೆ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳಿಸೋದಾಗಿ ನ್ಯಾಯಾಧೀಶರಿಗೆ ಹೇಳಿದರು.
ಇಬ್ಬರ ವಾದ ಆಲಿಸಿದ ಕೋರ್ಟ್ ಒಂದು ವರ್ಷದೊಳಗೆ 60 ಪ್ರಮುಖ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳಿಸಬೇಕು. ಆ ಬಳಿಕ ವಿಚಾರಣಾ ನ್ಯಾಯಾಲಯದಲ್ಲೇ ಆರೋಪಿ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಜೈಲು ನಿಯಮ ಪ್ರಕಾರ ಉಳಿದೆಲ್ಲಾ ಕೈದಿಗಳಿಗೆ ಸಿಗುವಂತೆ ಸವಲತ್ತು ಕೊಡಬೇಕು ಎಂದು ಸುಪ್ರೀಂಕೋರ್ಟ್ ನ್ಯಾ. ಪರ್ದೀವಾಲಾ ನಿರ್ದೇಶಿಸಿದರು.