ತ್ಯಾಜ್ಯ ಮುಕ್ತ,ಗೃಹ ಪರಿಸರಕ್ಕೆ ಗೋ ಗ್ರೀನ್ ಬಾಕ್ಸ್-Go Green Box

ಗೋ ಗ್ರೀನ್ ಬಾಕ್ಸ್’
ಗೋ ಗ್ರೀನ್ ಬಾಕ್ಸ್’
Published on
ಬೆಂಗಳೂರು: ಮಾಲಿನ್ಯ ಮತ್ತು ಕಾರ್ಬನ್ ಹೊರಸೂಸುವಿಕೆ ತಡೆಗೆ ‘ಗೋ ಗ್ರೀನ್ ಬಾಕ್ಸ್’ ಸಂಸ್ಥೆ, ತ್ಯಾಜ್ಯ ಮುಕ್ತ, ಸುಸ್ಥಿರ ಕಚೇರಿ ಮತ್ತು ಗೃಹ ಪರಿಸರ ನಿರ್ಮಿಸಲು ಮುಂದಾಗಿದೆ.
ಚನ್ನಮ್ಮಕೆರೆ ಅಚ್ಚುಕಟ್ಟ ಬಡಾವಣೆಯಲ್ಲಿ ಕಚೇರಿ ಸ್ಥಾಪಿಸಿರುವ ಗೋ ಗ್ರೀನ್ ಬಾಕ್ಸ್, ಕಾರ್ಬನ್ ಹೆಜ್ಜೆಗುರುತು ಕಡಿಮೆ ಮಾಡಲು ಬಯಸುವ ಗ್ರಾಹಕರಿಗೆ ಮರುಬಳಕೆ ಮೂಲಕ ಅತ್ಯುತ್ತಮ ಪರಿಸರಸ್ನೇಹಿ ಉತ್ಪನ್ನ ಪರಿಚಯಿಸಿದೆ. ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್ ನೂತನ ಕಚೇರಿಯನ್ನು ಉದ್ಘಾಟಿಸಿದರು.
ಕಚೇರಿಗಳಿಂದ ಕಾಗದದ ತ್ಯಾಜ್ಯ ಸಂಗ್ರಹಿಸಿ, ಅದನ್ನು ಮರುಬಳಕೆ ಮಾಡುವ ಮೂಲಕ ಸಂಪೂರ್ಣ ಕಾಗದ ರಹಿತ ಮುಕ್ತ ಕೆಲಸದ ಸ್ಥಳ ನಿರ್ಮಿಸಲು ಸಂಸ್ಥೆ ಸಹಾಯ ಮಾಡಲಿದೆ. ಸುಸ್ಥಿರ ಆಯ್ಕೆಗಳ ಮೂಲಕ ಕಾರ್ಬನ್ ಹೊರಸೂಸುವಿಕೆಯನ್ನು ತಗ್ಗಿಸುವ ಮಾತ್ರವಲ್ಲದೆ ನೈಸರ್ಗಿಕ ಸಂಪನ್ಮೂಲ ಉಳಿಸುತ್ತಿದೆ.
ಗ್ರಾಹಕರಿಗೆ ಸಂಸ್ಥೆಯು ‘ಗೋ ಗ್ರೀನ್ ಬಾಕ್ಸ್’ ಒದಗಿಸಲಿದೆ. ಅದರಲ್ಲಿ ಕಾಗದ ಮತ್ತು ಇ-ತ್ಯಾಜ್ಯ ಸಂಗ್ರಹಿಸಿ ತದನಂತರ ಅದನ್ನು ಗೋದಾಮಿನಲ್ಲಿ ವಿಂಗಡಿಸಿ ಮರುಬಳಕೆ ಕೇಂದ್ರಗಳಿಗೆ ತಲುಪಿಸುವ ವ್ಯವಸ್ಥಿತ ಕಾರ್ಯವೈಖರಿ ಹೊಂದಿದೆ. ಒಂದು ಮರ ಕಡಿಯದೆ, ರಾಸಾಯನಿಕ ಮುಕ್ತವಾಗಿ ತಯಾರಿಸಿದ 70, 75 ಮತ್ತು 80 ಜಿಎಸ್‌ಎಂ ಸಾಮರ್ಥ್ಯದ ಎ4 ಪೇಪರ್‌ಗಳನ್ನು ಪರಿಚಯಿಸಿದೆ. ಇವು ಲೇಸರ್, ಇಂಕ್‌ಜೆಟ್ ಪ್ರಿಂಟರ್ ಹಾಗೂ ಫೋಟೋಕಾಪಿಗೆ ಪೂರಕವಾಗಿವೆ. ತ್ಯಾಜ್ಯವನ್ನು ಉಪಯುಕ್ತ ವಸ್ತುವನ್ನಾಗಿ ಪರಿವರ್ತಿಸುತ್ತಿದೆ.
ಟನ್ ಮರುಬಳಕೆ ಕಾಗದಿಂದ 19 ಮರ ಉಳಿಸಬಹುದು
ಕಾಗದದಿಂದ ಮಾಡಿದ ಪರಿಸರಸ್ನೇಹಿ ಪೆನ್‌ಗಳನ್ನು ಸಂಸ್ಥೆ ಪರಿಚಯಿಸಿದೆ. ಇವುಗಳ ಇಂಕ್ ಮುಗಿದ ನಂತರ ಮಣ್ಣಿನಲ್ಲಿ ನೆಟ್ಟರೆ ಗಿಡವಾಗಿ ಬೆಳೆಯುವಂತೆ ಬೀಜ ಅಳವಡಿಸಲಾಗಿದೆ. ಮರುಬಳಕೆ ಕಾಗದದಿಂದ ತಯಾರಿಸಿದ ಪೆನ್ಸಿಲ್ ಉಪಯೋಗಿಸಬಹುದು. ಪಾಕೆಟ್ ಪ್ಲಾನರ್‌ಗಳು ಲಭ್ಯವಿದ್ದು, ಇವುಗಳಲ್ಲಿ ಪ್ಲಾಸ್ಟಿಕ್ ಬದಲಿಗೆ ಮರುಬಳಕೆ ಲೋಹದಿಂದ ಮಾಡಿದ ಗಟ್ಟಿಮುಟ್ಟಾದ ಸ್ಪೈರಲ್ ಬೈಂಡಿಂಗ್ ಅಳವಡಿಸಲಾಗಿದೆ. ಒಂದು ಟನ್ ಮರುಬಳಕೆ ಕಾಗದ ಬಳಸಿದರೆ ಅಂದಾಜು 17 ರಿಂದ 19 ಮರ, 31,780 ಲೀಟರ್ ನೀರು ಮತ್ತು 4,030 ಕೆಜಿ ಕಾರ್ಬನ್ ಹೊರಸೂಸುವಿಕೆ ತಡೆಯಬಹುದು ಎಂದು ಸಂಸ್ಥೆ ಹೇಳುತ್ತದೆ. ಪ್ಲಾಸ್ಟಿಕ್ ಮುಕ್ತ ಪ್ಯಾಕೇಜಿಂಗ್‌ಗಾಗಿ 1, 2 ಮತ್ತು 3 ಇಂಚು ಗಾತ್ರದ ಬಯೋಡಿಗ್ರೇಡಬಲ್, ಕಂಪೋಸ್ಟಬಲ್ ಪೇಪರ್ ಟೇಪ್ ಹಾಗೂ ಪರಿಸರಸ್ನೇಹಿ ಲಕೋಟೆಗಳನ್ನು ಸಿದ್ಧಪಡಿಸಲಾಗಿದೆ. ಅತ್ಯಂತ ವೇಗವಾಗಿ ಬೆಳೆಯುವ ಬಿದಿರಿನಿಂದ ತಯಾರಿಸಿದ ಹ್ಯಾಂಡ್ ರೋಲ್ ಟವೆಲ್, ಜಂಬೊ ರೋಲ್ ಟಿಶ್ಯೂ ಒದಗಿಸುತ್ತಿದೆ. ಇವುಗಳು ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿ ಹೊಂದಿವೆ.
ಸರ್ಕಾರವು ಶಾಲೆ-ಕಾಲೇಜಿಗಳಲ್ಲಿ ಕಾಗದ ಮರುಬಳಕೆಗೆ ನಿಯಮ ತರಬೇಕಿದೆ. ಮರು ಬಳಕೆಯ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ. ಇಂತಹ ಮರುಬಳಕೆ ಮಾಡುವಂತ ಸಂಸ್ಥೆಗಳು ಹೆಚ್ಚು ಬರುವಂತಾಗಬೇಕು.
ಡಾ. ತೇಜಸ್ವಿನಿ ಅನಂತಕುಮಾರ್, ಅದಮ್ಯ ಚೇತನ ಮುಖ್ಯಸ್ಥೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net