ಸಾಮಾನ್ಯವಾಗಿ ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಜೈಲು ನಿಯಮಾವಳಿ ಹಾಗೂ ನ್ಯಾಯಾಲಯದ ಮೂಲಕ ತಕ್ಷಣಕ್ಕೆ ಪೆರೋಲ್ ದೊರೆಯುವುದು ತೀರಾ ವಿರಳ. ಜೈಲು ನಿಯಮಾವಳಿಗಳ ಪ್ರಕಾರ, ಶಿಕ್ಷೆಗೆ ಗುರಿಯಾದ ಕೈದಿಯೊಬ್ಬರು ಪೆರೋಲ್‌ಗೆ ಅರ್ಹರಾಗಬೇಕಾದರೆ ಕನಿಷ್ಠ ಎರಡು ವರ್ಷಗಳ ಕಾಲ ಕಾರಾಗೃಹವಾಸ ಪೂರೈಸಿರಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಇನ್ನು ಶಿಕ್ಷೆಯ ಅವಧಿ ಪೂರ್ಣಗೊಳ್ಳದಿರುವುದು ಹಾಗೂ ಆರೋಪಗಳ ಗಂಭೀರತೆಯನ್ನು ಗಮನಿಸಿದರೆ, ನ್ಯಾಯಾಲಯದಿಂದ ಮಧ್ಯಂತರ ರಿಲೀಫ್ ಸಿಗುವ ಸಾಧ್ಯತೆಗಳು ಕ್ಷೀಣವಾಗಿವೆ. ಇದೇ ಕಾನೂನು ತೊಡಕುಗಳಿಂದಾಗಿ ಪ್ರಜ್ವಲ್ ಅವರಿಗೆ ಈ ಹಂತದಲ್ಲಿ ಪೆರೋಲ್ ಅರ್ಜಿ ಸಲ್ಲಿಸಲು ತಾಂತ್ರಿಕವಾಗಿ ಅವಕಾಶ ಸಿಕ್ಕಿಲ್ಲ ಎಂಬ ಮಾತು ಕೂಡ ಇದೆ.