ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ, ಬೆನ್ ಡಕೆಟ್ (141 ರನ್, 135 ಎಸೆತ, 18 ಬೌಂಡರಿ, 1 ಸಿಕ್ಸರ್) ಬಾರಿಸಿದ ಭರ್ಜರಿ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 387 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಇವರ ಜೊತೆಗೆ ಜೇಕಬ್ ಬೆಥೆಲ್ (91 ರನ್) ಕೂದಲೆಳೆಯ ಅಂತರದಲ್ಲಿ ಶತಕ ವಂಚಿತರಾದರೆ, ಜೋ ರೂಟ್ (74 ನಾಟೌಟ್) ಅರ್ಧಶತಕ ಸಿಡಿಸಿ ಮಿಂಚಿದರು. ಕೊನೆಯಲ್ಲಿ ಜೋಸ್ ಬಟ್ಲರ್ (41 ನಾಟೌಟ್, 13 ಎಸೆತ, 4 ಬೌಂಡರಿ, 3 ಸಿಕ್ಸರ್) ಬಿರುಗಾಳಿ ಬ್ಯಾಟಿಂಗ್ ನಡೆಸಿ ರನ್ ಮಳೆ ಹರಿಸಿದರು. ಭಾರತದ ಬೌಲರ್ಗಳ ಪೈಕಿ ಪ್ರಸಿದ್ಧ್ ಕೃಷ್ಣ ಎರಡು ವಿಕೆಟ್ ಹಾಗೂ ಪ್ರಿನ್ಸ್ ಯಾದವ್ ಒಂದು ವಿಕೆಟ್ ಪಡೆದರು.