ವಿಶೇಷ ದಾಖಲೆ ನಿರ್ಮಿಸಿದ ನಟ ಪವನ್ ಕಲ್ಯಾಣ್; ಸಂತಸ ವ್ಯಕ್ತಪಡಿಸಿದ ಫ್ಯಾನ್ಸ್!

pawan kalyan
Published on

ಆಂಧ್ರಪ್ರದೇಶ: ಜುಲೈ 4, 2023 ರಂದು ಅಧಿಕೃತವಾಗಿ ಇನ್‌ಸ್ಟಾಗ್ರಾಮ್‌ಗೆ ಕಾಲಿಟ್ಟ ಟಾಲಿವುಡ್​​ನ ಪವರ್​ ಸ್ಟಾರ್​​ ನಟ ಪವನ್​ ಕಲ್ಯಾಣ್​, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ.

ರಾಜಕಾರಣಿ, ನಟ ಪವನ್​ ಕಲ್ಯಾಣ್ ತಮ್ಮ ಅಭಿಮಾನಿಗಳಿಗೆ ಕೊಟ್ಟ ಮಾತಿನಂತೆ ಇದೀಗ ಇನ್‌ಸ್ಟಾಗ್ರಾಮ್‌ಗೆ ಪಾದಾರ್ಪಣೆ ಮಾಡಿದ್ದಾರೆ. ತಮ್ಮ ಟ್ವಿಟರ್​ ಖಾತೆಯಲ್ಲಿ ಹಾಕಿದ್ದ ಪ್ರೊಫೈಲ್​​ ಫೋಟೋವನ್ನೇ ಇನ್‌ಸ್ಟಾಗ್ರಾಮ್‌ ಖಾತೆಗೂ ಹಾಕಿದ್ದು, ಇಲ್ಲಿಯವರೆಗೂ ಒಂದು ಫೋಟೋ, ಬರಹ ಅಥವಾ ಲೇಖನ ಏನ್ನನ್ನೂ ಪೋಸ್ಟ್​ ಮಾಡಿಲ್ಲ. ಹೀಗಿದ್ದರೂ ಸಹ ಕೇವಲ 2 ದಿನದಲ್ಲಿ 2 ಮಿಲಿಯನ್ ಫಾಲೋವರ್ಸ್​​ಗಳನ್ನು ಪಡೆದುಕೊಳ್ಳುವ ಮುಖೇನ ಸೆಲೆಬ್ರೆಟಿ ಸ್ಟಾರ್​ಗಳ ಪೈಕಿ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ.

ಸಾಮಾನ್ಯವಾಗಿ ನಿರಂತರ ಪೋಸ್ಟ್​​ ಅಥವಾ ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರೆ ಫಾಲೋವರ್ಸ್​​ಗಳ ಸಂಖ್ಯೆ ಹೆಚ್ಚಾಗುತ್ತದೆ ಎಂಬುದು ಸಾಮಾಜಿಕ ಜಾಲತಾಣದ ಲೆಕ್ಕಾಚಾರ! ಅದರಲ್ಲೂ ಸೆಲೆಬ್ರಿಟಿಗಳಿಗೆ ಅನುಯಾಯಿಗಳನ್ನು ಪಡೆಯುವುದು ಕಷ್ಟಸಾಧ್ಯ ಏನಲ್ಲಾ. ಆದ್ರೆ, ಪವನ್ ಕಲ್ಯಾಣ್ ಇದುವರೆಗೂ ಒಂದು ಪೋಸ್ಟ್​​ ಕೂಡ ಹಾಕದೆ 2 ಮಿಲಿಯನ್​​ ಫಾಲೋವರ್ಸ್ ಪಡೆದಿರುವುದು ವಿಶೇಷ ಸಂಗತಿಯಾಗಿದೆ.

ನಟ ಪವನ್ ಕಲ್ಯಾಣ್ ಅವರು ಇನ್‌ಸ್ಟಾಗ್ರಾಮ್​​ನಲ್ಲಿ 2 ಮಿಲಿಯನ್​​ ಫಾಲೋವರ್ಸ್​​ ಪಡೆದಿರುವುದು ಇದೀಗ ಅವರ ಅಭಿಮಾನಿಗಳಿಗೆ ಭಾರಿ ಸಂತಸ ನೀಡಿದ್ದು, ಪವನ್ ಕಲ್ಯಾಣ್ ಅವರ ಮೊದಲ ಪೋಸ್ಟ್‌ ಯಾವ ವಿಷಯದ ಬಗ್ಗೆ ಇರಲಿದೆ ಎಂಬ ಕುತೂಹಲಗಳು ಹೆಚ್ಚಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net