ಪತ್ನಿ, ಅತ್ತೆ-ಮಾವನ ಕಿರುಕುಳ ತಾಳಲಾರದೇ ಪ್ರಾಣತ್ಯಾಗ ಮಾಡಿದ ಅಳಿಯ

police
ಸಾಂದರ್ಭಿಕ ಚಿತ್ರ
Published on

ಹೈದರಾಬಾದ್: ಪತ್ನಿ ಹಾಗೂ ಅತ್ತೆಯ ಕಿರುಕುಳ ತಾಳಲಾರದೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​​​ನಲ್ಲಿ ನಡೆದಿದೆ.

ಎಂ.ವೆಂಕಟ್ ರೆಡ್ಡಿ(38) ಮೃತ ವ್ಯಕ್ತಿಯಾಗಿದ್ದು, ನಗರದ ಕುಶೈಗುಡಾ ಪ್ರದೇಶದ ನಿವಾಸಿಯಾಗಿದ್ದಾನೆ. ತನ್ನ ಪತ್ನಿ ಮತ್ತು ಆಕೆಯ ಪೋಷಕರು ಆತನನ್ನು ನಿಂದಿಸಿದ ನಂತರ ಕೀಟನಾಶಕ ಸೇವಿಸಿದ್ದಾನೆ.

ವೆಂಕಟ್ ರೆಡ್ಡಿಯು ತನ್ನ ತಾಯಿ, ಪತ್ನಿ ಕಲ್ಯಾಣಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದನು. ಆದರೆ ಕಲ್ಯಾಣಿಗೆ ತನ್ನ ಅತ್ತೆಯ ಜತೆ ಇರಲು ಮನಸ್ಸಿರಲಿಲ್ಲ. ಈ ಕಾರಣದಿಂದಾಗಿ ಸಂಸಾರದಲ್ಲಿ ಆಗಾಗ ಕಲಹವಾಗುತ್ತಿತ್ತು, ಜತೆಗೆ ತನ್ನ ತಾಯಿಯನ್ನು ಬೇರೆ ಸ್ಥಳಕ್ಕೆ ಕಳುಹಿಸುವಂತೆ ಆಕೆ ಮತ್ತು ಆಕೆಯ ಪೋಷಕರು ವೆಂಕಟ್​ಗೆ ಒತ್ತಾಯಿಸುತ್ತಿದ್ದರು.

ಎರಡು ತಿಂಗಳ ಹಿಂದೆ, ಕಲ್ಯಾಣಿ ವಾರಂಗಲ್‌ನಲ್ಲಿರುವ ಪೋಷಕರ ಮನೆಗೆ ಹೋಗಿದ್ದಳು, ಜುಲೈ 2ರಂದು ಪೋಷಕರೊಂದಿಗೆ ವೆಂಕಟ್ ರೆಡ್ಡಿ ಮನೆಗೆ ಬಂದ ಪತ್ನಿ ಜಗಳವಾಡಿ ಆಸ್ತಿಯನ್ನು ಇಬ್ಬರು ಹೆಣ್ಣು ಮಕ್ಕಳ ಹೆಸರಿಗೆ ಬರೆದುಕೊಡುವಂತೆ ಹಾಗೂ ತಾಯಿಗೆ ಪ್ರತ್ಯೇಕವಾಗಿ ವಾಸಿಸಲು ಮನೆ ಮಾಡಿ ಕೊಡುವಂತೆ ಕೂಗಾಡಿದ್ದಾರೆ.

ಆಗ, ವೆಂಕಟ್​​ ಜೋರಾಗಿ ಮಾತನಾಡಬೇಡಿ ಎಂದು ಮನವಿ ಮಾಡಿದ್ದು, ಅವರು ಆತನ ಮಾತನ್ನು ನಿರ್ಲಕ್ಷಿಸಿದ್ದಾರೆ. ಕೊನೆಗೆ ಆತ ಈ ರೀತಿ ವರ್ತಿಸಿದರೆ ತಾನು ತನ್ನ ಜೀವನವನ್ನು ಕೊನೆಗೊಳಿಸುತ್ತೇನೆ ಎಂದಿದ್ದಾನೆ. ಆಗ ಅವರು ಆತನಿಗೆ ಲೇವಡಿ ಮಾಡಿದ್ದಾರೆ. ಅವಮಾನ ಅನುಭವಿಸಿದ ವೆಂಕಟ್ ಜೂನ್​ 2ರಂದು ಕ್ರಿಮಿನಾಶಕ ಸೇವಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಜೂನ್​ 5ರಂದು ಮೃತಪಟ್ಟಿದ್ದಾನೆ. ಸಂತ್ರಸ್ತೆಯ ಸಹೋದರಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net