ರಾಜಸ್ಥಾನದಿಂದ ಬೆಂಗಳೂರಿಗೆ ಕೊರಿಯ‌ರ್​ ಮುಖಾಂತರ ಮಾದಕ ವಸ್ತು ಸಾಗಾಟ; 60 ಲಕ್ಷ ರೂ. ಮೌಲ್ಯದ ವಸ್ತು ವಶಕ್ಕೆ

bng police
Published on

ಬೆಂಗಳೂರು: ನಗರದ ದಕ್ಷಿಣ ವಿಭಾಗದ ಬಿ.ವಿ.ಪುರಂ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಚರಣೆ ನಡೆಸಿದ್ದು, ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ಬಂಧಿಸಿ 60 ಲಕ್ಷ ರೂ. ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.

 ರಾಜಸ್ಥಾನದಿಂದ ಕೊರಿಯ‌ರ್​ ಮುಖಾಂತರ ಮಾದಕ ವಸ್ತುವಾದ ಓಪಿಎಂ ಪಟ್ಟಿಯನ್ನು ಕಡಿಮೆ ಬೆಲೆಗೆ ತರಿಸಿಕೊಂಡು ಅದನ್ನು ಮನೆಯಲ್ಲಿ ಮಿಕ್ಸ್‌‌ ಡ್ರೈಂಡರ್ ಮೂಲಕ ಪುಡಿಮಾಡಿ ರಾತ್ರಿ ಪೂರಾ ನೀರಿನಲ್ಲಿ ನೆನೆಸಿಟ್ಟು ನಂತರ ಅದರ ನೀರನ್ನು ಪಾರ್ಟಿ ಮತ್ತು ಇತರೆ ಮೋಜು-ಮಸ್ತಿಯ ಕೂಟಗಳಲ್ಲಿ ಬರುವ 'ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್‌ವೇರ್ ಇಂಜಿನಿಯರುಗಳಿಗೆ ನೀಡುತ್ತಿರುತ್ತಾರೆ. ಈ ಪುಡಿಯನ್ನು ಸಹ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಈ ಗ್ಯಾಂಗ್​ನ್ನು ಪತ್ತೆ ಹಚ್ಚಿದ ಪೊಲೀಸರು, ರಾಜಸ್ಥಾನ ಮೂಲದ ಒಬ್ಬ ವ್ಯಕ್ತಿಯನ್ನು ಬಂಧಿಸಿ ಆತನು ಮಾರಾಟ ಮಾಡಲು ಇಟ್ಟುಕೊಂಡಿದ್ದ 55 ಕೆ.ಜಿ ಮಾದಕ ವಸ್ತುವನ್ನು ಮತ್ತು ಸಾಗಾಣಿಕೆಗೆ ಬಳಸುತ್ತಿದ್ದ ಒಂದು ಲಗೇಜ್ ಆಟೋವನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್‌ ಆಯುಕ್ತರಾದ ಶ್ರೀ.ಕೃಷ್ಣಕಾಂತ ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ, ವಿ.ವಿ.ಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ನಾಗರಾಜ.ಜಿ ರವರ ಉಸ್ತುವಾರಿಯಲ್ಲಿ, ವಿ.ವಿ.ಪುರಂ ಪೊಲೀಸ್ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್ ಶ್ರೀ ಮಿರ್ಜಾ ಆಲಿ ರಜಾ ರವರ ನೇತೃತ್ವದಲ್ಲಿ ಪಿ.ಎಸ್.ಐಗಳಾದ ಶ್ರೀ.ಸಿ.ರಾಜೇಂದ್ರ ಪ್ರಸಾದ, ಶ್ರೀಮತಿ, ಅಕ್ಷತಾ, ಶ್ರೀ.ಮಂಜುನಾಥ ಶ್ರೀ.ಮಾರುತಿ ಜಿ. ಮತ್ತು ಶ್ರೀ.ರಾಮಚಂದ್ರರವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net