More

    ಕುಡುಕನಿಗೆ ಸಹಾಯ ಮಾಡಲು ಹೋಗಿ, ಆತನ ಜತೆ ಪ್ರಾಣ ಕಳೆದುಕೊಂಡ ಪೊಲೀಸ್​..!

    ದೇಹತ್: ಕುಡಿದು ಹೆದ್ದಾರಿ ಬದಿಯಲ್ಲಿ ಮಲಗಿದ್ದ ವ್ಯಕ್ತಿಗೆ ಸಹಾಯ ಮಾಡಲು ಹೋಗಿ ಪೊಲೀಸ್ ಕಾನ್​ಸ್ಟೆಬಲ್ ಜತೆಗೆ ಕುಡುಕನು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದ ಕಾನ್ಪುರ ಬಳಿಯ ದೇಹತ್ ಜಿಲ್ಲೆಯಲ್ಲಿ ನಡೆದಿದೆ.

    ಇದನ್ನೂ ಓದಿ: PUC ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕೂಟರ್ ನೀಡಲಿದೆ ಅಸ್ಸಾಂ ಸರ್ಕಾರ

    ವಿವೇಕ ಕುಮಾರ್​ ಹಾಗೂ ಕುಡುಕ ಇಬ್ಬರು ಘಟನೆಯಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದು, ಕುಡುಕನ ಗುರುತು ಪತ್ತೆಯಾಗಿಲ್ಲ. ಬುಧವಾರ ನಸುಕಿನ ವೇಳೆ ಅಕ್ಬರ್‌ಪುರ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಕಾನ್ಪುರ್ ದೇಹತ್) ರಾಜೇಶ್ ಕುಮಾರ್ ಪಾಂಡೆ, ಸಬ್ ಇನ್ಸ್‌ಪೆಕ್ಟರ್ ಮಥುರಾ ಪ್ರಸಾದ್, ಹೆಡ್ ಕಾನ್‌ಸ್ಟೆಬಲ್ ಅರವಿಂದ್ ಕುಮಾರ್ ಮತ್ತು ಕಾನ್‌ಸ್ಟೆಬಲ್‌ಗಳಾದ ಸೌರಭ್ ಕುಮಾರ್ ಮತ್ತು ವಿವೇಕ್ ಕುಮಾರ್ ಗಸ್ತಿನಲ್ಲಿದ್ದಾಗ ಮಾದಾಪುರ ಸೇತುವೆಯ ಹೆದ್ದಾರಿಯಲ್ಲಿ ಕುಡಿದ ವ್ಯಕ್ತಿ ಬಿದ್ದಿರುವುದನ್ನು ನೋಡಿದ್ದಾರೆ.

    ಕೂಡಲೇ ಆತನಿಗೆ ಸಹಾಯ ಮಾಡುವ ಉದ್ದೇಶದಿಂದ ಪೊಲೀಸರು ಸಹಾಯ ಮಾಡಲು ಯತ್ನಿಸಿದ್ದಾರೆ. ವೇಗವಾಗಿ ಬಂದ ಟೆಂಪೋ ರಾಜೇಶ್​​ಗೆ ಡಿಕ್ಕಿ ಹೊಡೆದಿದೆ. ಕೂಡಲೇ ಉಳಿದವರು ದಿಕ್ಕಪಾಲಾಗಿದ್ದಾರೆ.

    ಇದನ್ನೂ ಓದಿ: ಶೀಘ್ರದಲ್ಲೇ ದೇಶಾದ್ಯಂತ ಹೆದ್ದಾರಿ ಬದಿ ತಲೆ ಎತ್ತಲಿದೆ ಬಾಹುಬಲಿ ಬೇಲಿ..

    ಈ ವೇಳೆ ಕಾನ್‌ಸ್ಟೆಬಲ್ ವಿವೇಕ್​, ಕುಡುಕನನ್ನು ಗಾಡಿಯ ಒಳಗಡೆ ಎಳೆಯಲು ಪ್ರಯತ್ನಿಸಿದ್ದು, ಟೆಂಪೋ ಡಿಕ್ಕಿ ಹೊಡೆದು ಸೇತುವೆಯಿಂದ ಬಿದ್ದು ಕಾನ್​​ಸ್ಟೆಬಲ್​ ಮೃತಪಟ್ಟಿದ್ದಾನೆ. ಇತರ ಪೊಲೀಸರಿಗೆ ಕೈ, ಕಾಲು ಮತ್ತು ಸೊಂಟದ ಮೇಲೆ ಗಂಭೀರ ಗಾಯಗಳಾಗಿದ್ದು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾನ್‌ಸ್ಟೆಬಲ್‌ ಸಾವಿನ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಈ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts