

ಶ್ರೀಶೈಲಂ ಜಲವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ.
ಗುರುವಾರ ರಾತ್ರಿಯೇ ಬೆಂಕಿ ಹೊತ್ತಿಕೊಂಡಿದ್ದರೂ ಶುಕ್ರವಾರ ಬೆಳಗ್ಗೆವರೆಗೆ ಅಲ್ಲಿದ್ದವರ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಕಾರಣ ದಟ್ಟವಾದ ಹೊಗೆ ಆವರಿಸಿತ್ತು ಎಂದು ಪೊಲೀಸರೇ ಹೇಳಿದ್ದಾರೆ.
ಇದೀಗ ಶ್ರೀಶೈಲಂ ಹೈಡಲ್ ಬೆಂಕಿ ದುರಂತದ ತನಿಖೆಯನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸಿಐಡಿಗೆ ವಹಿಸಿದ್ದಾರೆ. ಜಲವಿದ್ಯುತ್ ಸ್ಥಾವರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದನ್ನು ತನಿಖೆ ಮಾಡಲು ತಿಳಿಸಿದ್ದಾರೆ. ಇದನ್ನೂ ಓದಿ: 18 ತಿಂಗಳಲ್ಲಿ 8 ಮಗುವಿಗೆ ಜನ್ಮ ನೀಡಿದ ಅಜ್ಜಿ: ಹುಬ್ಬೇರಿಸೋ ಮುನ್ನ ಒಮ್ಮೆ ಓದಿ ಬಿಡಿ!
ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಗೋವಿಂದ್ ಸಿಂಗ್ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಬೆಂಕಿ ದುರಂತದ ಸಮಗ್ರ ತನಿಖೆ ಮಾಡಿ, ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಗೋವಿಂದ್ ಸಿಂಗ್ ಅವರಿಗೆ ತಿಳಿಸಿದ್ದಾರೆ. ಇನ್ನು ಶ್ರೀಶೈಲಂ ಅಗ್ನಿದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸೇರಿ ಹಲವರು ಆತಂಕ ವ್ಯಕ್ತಪಡಿಸಿದ್ದು, ಮೃತರಿಗೆ ಸಂತಾಪ ಸೂಚಿಸಿದ್ದಾರೆ.(ಏಜೆನ್ಸೀಸ್)