More

    18 ತಿಂಗಳಲ್ಲಿ 8 ಮಗುವಿಗೆ ಜನ್ಮ ನೀಡಿದ ಅಜ್ಜಿ!

    ಬಿಹಾರ: 65 ವರ್ಷದ ಹಿರಿಯ ಮಹಿಳೆಯೊಬ್ಬರು ಕಳೆದ 18 ತಿಂಗಳಲ್ಲಿ 8 ಮಗುವಿಗೆ ಜನ್ಮ ನೀಡಿದ್ದಾರೆಂದರೆ ಯಾರಾದರೂ ನಂಬುತ್ತಾರಾ? ಖಂಡಿತ ಸಾಧ್ಯವಿಲ್ಲ. ಆದರೆ, ಬಿಹಾರದಲ್ಲಿ ಲೀಲಾ ದೇವಿ (65) ಎಂಬಾಕೆ ಇದನ್ನು ಸಾಧ್ಯವಾಗಿಸಿದ್ದಾರೆ ಎಂದು ಹೇಳುತ್ತಿದೆ ಸರ್ಕಾರಿ ದಾಖಲೆಗಳು.

    ಹೌದು, ಇದು ಸರ್ಕಾರಿ ದಾಖಲೆಯ ಎಡವಟ್ಟಲ್ಲದೆ ಮತ್ತೇನು ಅಲ್ಲ. ಅಸಲಿ ವಿಚಾರಕ್ಕೆ ಬರುವುದಾದರೆ ಬಿಹಾರದ ಮುಜಾರ್ಪುರ್​ ಜಿಲ್ಲೆಯ ಛೋಟಿ ಕೊಥಿಯಾ ಗ್ರಾಮದ ನಿವಾಸಿ ಲೀಲಾ ದೇವಿ ತನ್ನ ನಾಲ್ಕನೇ ಹಾಗೂ ಕೊನೆಯ ಮಗನಿಗೆ ಕಳೆದ 21 ವರ್ಷದ ಹಿಂದೆಯೇ ಜನ್ಮ ನೀಡಿದ್ದಾರೆ. ಆದರೆ, ಇದೀಗ ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್​ ಅಡಿಯಲ್ಲಿ ಬರುವ ರಾಷ್ಟ್ರೀಯ ಹೆರಿಗೆ ಪ್ರಯೋಜನ ಯೋಜನೆಗಳ (ಎನ್​ಎಂಬಿಎಸ್​) ಫಲಾನುಭವಿಗಳಲ್ಲಿ ಒಬ್ಬರಾಗಿರುವುದು ಅಚ್ಚರಿಯ ವಿಷಯವಾಗಿದೆ.

    ಇದನ್ನೂ ಓದಿ: ಎಲ್ಲಿದೆ ನಿತ್ಯಾನಂದನ ಕೈಲಾಸ? ನಡೆಯುತ್ತಿರೋದ್ಹೇಗೆ? ಹಾಂಗ್​ಕಾಂಗ್​, ಅಮೆರಿಕ, ಬ್ರಿಟನ್​ನಲ್ಲಿವೆ ಹತ್ತಾರು ಕಂಪನಿ…!

    ಅಂದಹಾಗೆ ಎನ್‌ಎಂಬಿಎಸ್ ಶಿಶುಗಳ ಸಾಂಸ್ಥಿಕ ಹೆರಿಗೆಯನ್ನು ಹೆಚ್ಚಿಸುವ ಯೋಜನೆಯಾಗಿದೆ. ಈ ಯೋಜನೆಯಡಿ ತಾಯಿಗೆ 1,400 ರೂ. ನೆರವು ನೀಡಲಾಗುತ್ತದೆ. ಅಲ್ಲದೆ, ಆಶಾ ಕಾರ್ಯಕರ್ತೆಯರಿಗೂ 600 ರೂ. ಕೊಡಲಾಗುತ್ತದೆ. ಇನ್ನ ತನ್ನ ಬಗ್ಗೆ ಕೇಳಿಬರುತ್ತಿರುವ ವಿಷಯ ಕೇಳಿ ಅಜ್ಜಿಯೇ ಚಕಿತಗೊಂಡರು. ಅವರ ಪತಿ ರೈತನಾಗಿದ್ದು, ಹಿಂದೂಸ್ಥಾನ್​ ಟೈಮ್ಸ್​ ವೆಬ್​ಸೈಟ್​ಗೆ ಸಿಕ್ಕಿರುವ ದಾಖಲೆಯ ಪ್ರಕಾರ ಅಜ್ಜಿ ಕಳೆದ 18 ತಿಂಗಳಲ್ಲಿ 8 ಮಗುವಿಗೆ ಜನ್ಮ ನೀಡಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಲೀಲಾ ಅಜ್ಜಿ, ನಾನು ಮೊದಲ ಗಂಡು ಮಗುವಿಗೆ 21 ವರ್ಷಗಳ ಹಿಂದೆಯೇ ಜನ್ಮ ನೀಡಿದ್ದೇನೆ. ಆದರೆ, ಎನ್​ಎಂಬಿಎಸ್​ ಫಲಾನುಭವಿಗಳಲ್ಲಿ ನನ್ನನ್ನು ಸೇರಿಸಿದ್ದಾರೆ ಎಂದು ತಿಳಿಯಿತು. ಬಳಿಕ ನನ್ನ ಖಾತೆಯಿರುವ ಕಸ್ಟಮರ್​ ಸರ್ವೀಸ್​ ಕೇಂದ್ರ (ಸಿಎಸ್​ಪಿ)ಕ್ಕೆ ತೆರಳಿ ಕಂಪ್ಯೂಟರ್​ ಆಪರೇಟರ್​ನನ್ನು ಕೇಳಿದೆ. ಬಳಿಕ ಆತ ದೂರು ನೀಡಬೇಡಿ ಎಂದು ಮನವಿ ಮಾಡಿಕೊಂಡು, ನಿಮ್ಮ ಹೆಸರಿನಲ್ಲಿ ಹಣ ಬಂದ ಬಳಿಕ ಅದನ್ನು ತೆಗೆದು ನಿಮಗೆ ಕೊಡುತ್ತೇವೆ ಎಂದನು ಎಂದಿದ್ದಾರೆ.

    ಈ ಯೋಜನೆಗಳ ಫಲಾನುಭವಿಗಳ ಪಟ್ಟಿಯಲ್ಲಿ ಕೇವಲ ಲೀಲಾ ಅಜ್ಜಿ ಮಾತ್ರವಿಲ್ಲ. ಅದೇ ಜಿಲ್ಲೆಯಲ್ಲಿ ವಯಸ್ಸಾದ ಸುಮಾರು 50 ಹಿರಿಯ ಮಹಿಳೆಯರ ಹೆಸರಿನಲ್ಲಿ ಹಣವನ್ನು ತೆಗೆದುಕೊಳ್ಳಲಾಗಿದೆ ಎಂದು ಅಂಕಿ-ಅಂಶಗಳು ಹೇಳಿವೆ. ಇದೀಗ ಇದೇ ಪ್ರಕರಣ ಮುಜಾರ್ಪುರ್​ ಜಿಲ್ಲೆಯಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

    ಇದನ್ನೂ ಓದಿ: ಸುಶಾಂತ್​ ಸಾವಿಗೂ ಮುಂಚೆ ರಿಯಾ-ಮಹೇಶ್​ ಭಟ್​ ನಡುವೆ ನಡೆದ ವಾಟ್ಸ್​ಆ್ಯಪ್​ ಚಾಟ್​ ಬಹಿರಂಗ!

    ಇನ್ನು ಈ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಚಂದ್ರಶೇಖರ್​ ಸಿಂಗ್​ ಗುರುವಾರ ತನಿಖೆಗೆ ಆದೇಶಿಸಿದ್ದಾರೆ. ಸಾಕಷ್ಟು ಅವ್ಯವಹಾರ ಕಂಡುಬಂದ ಹಿನ್ನೆಲೆಯಲ್ಲಿ ಇದೊಂದು ಗಂಭೀರ ಪ್ರಕರಣ ಎಂದಿರುವ ಜಿಲ್ಲಾ ಮೆಡಿಕಲ್​ ಆಫೀಸರ್​ ಡಾ. ಶೈಲೇಶ್​ ಪ್ರಸಾದ್​ ಸಿಂಗ್​ ತನಿಖಾ ಸಮಿತಿ ರಚಿಸಲು ಸಭೆಯಲ್ಲಿ ಚರ್ಚಿಸಲಾಗಿದೆ. ಇದರ ಹಿಂದೆ ಯಾರ ಕೈವಾಡ ಇದೆ ಎಂಬುದು ಶೀಘ್ರದಲ್ಲಿ ಬಯಲಾಗಲಿದೆ ಎಂದಿದ್ದಾರೆ. (ಏಜೆನ್ಸೀಸ್​)

    ಶವಗಾರದಲ್ಲಿ ಸುಶಾಂತ್​ ಮೃತದೇಹ ನೋಡಿ ಗೆಳತಿ ರಿಯಾ ಆಡಿದ ಕೊನೆಯ ಮಾತಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts