More

  ಅಕ್ರಮವಾಗಿ ಯಾರು ಮಾರಾಟ ಮಾಡುತ್ತಾರೆ ?

  ಕವಿತಾಳ: ಆನಂದಗಲ್‌ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಮಹಿಳೆಯರು ಶನಿವಾರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಸೋಮವಾರ ಗ್ರಾಮಕ್ಕೆ ಭೇಟಿ ನೀಡಿದ್ದರು.

  ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ಹೆಸರು ಹೇಳಿ ಎಂದು ಗ್ರಾಮಸ್ಥರನ್ನು ಅಬಕಾರಿ ಅಧಿಕಾರಿಗಳು ಕೋರಿದರು. ಅದಕ್ಕೆ ಗ್ರಾಮಸ್ಥರು ನಾವು ಊರಿನವರ ಹೆಸರು ಹೇಳಲು ಸಾಧ್ಯವಿಲ್ಲ. ನೀವು ಮದ್ಯ ಅಕ್ರಮ ಮಾರಾಟ ಮಾಡುವವರಿಂದ ಹಣ ಪಡೆಯುತ್ತೀರಿ. ಇದರಿಂದಾಗಿ ಅಕ್ರಮವಾಗಿ ಮದ್ಯ ಮಾರಾಟ ತಡೆಯಲು ಹೇಗೆ ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡರು. ರಾಯಚೂರು ಅಬಕಾರಿ ಉಪ ಆಯುಕ್ತರ ಕಚೇರಿ ನಿರೀಕ್ಷಕಿ ಶೈನಾಜ್ ಬೇಗಂ ಮಾತನಾಡಿ, ಗ್ರಾಮದಲ್ಲಿ ಇನ್ನು ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡಿದರೆ ನಮಗೆ ನೇರವಾಗಿ ತಿಳಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

  ಗ್ರಾಮದ ಹೋಟೆಲ್ ಹಾಗೂ ವಿವಿಧ ಅಂಗಡಿಗಳನ್ನು ಅಬಕಾರಿ ಸಿಬ್ಬಂದಿ ಪರಿಶೀಲಿಸಿದರು. ಮದ್ಯ ಮಾರಾಟ ಮಾಡುವವರು ಅಂಗಡಿಗಳನ್ನು ಮುಚ್ಚಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts