More

    ಕೋವಿಡ್​ನಿಂದ ಮೃತಪಟ್ಟ ಪೌರ ಕಾರ್ಮಿಕನ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ…!

    ನವದೆಹಲಿ: ಹುತಾತ್ಮ ಯೋಧರು ಹಾಗೂ ಪೊಲೀಸರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿರುವ ​ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಪೌರಕಾರ್ಮಿಕನ ಕುಟುಂಬಕ್ಕೂ ಒಂದು ಕೋಟಿ ರೂ. ಪರಿಹಾರ ನೀಡಿದ್ದಾರೆ.

    ಕೋವಿಡ್​ ಹಿನ್ನೆಲೆಯಲ್ಲಿ ಕರ್ತವ್ಯನಿರತನಾಗಿದ್ದ ಪೌರ ಕಾರ್ಮಿಕ ರಾಜು ಎಂಬುವರು ಕರೊನಾದಿಂದಾಗಿ ಮೃತಪಟ್ಟಿದ್ದರು. ಅವರ ಕುಟುಬಕ್ಕೆ ಕೇಜ್ರಿವಾಲ್​ ಶುಕ್ರವಾರ ಒಂದು ಕೋಟಿ ರೂ.ಗಳ ಪರಿಹಾರ ಚೆಕ್​ ವಿತರಿಸಿದರು.

    ಇದನ್ನೂ ಓದಿ; ಕೆಲಸ ಕಳೆದುಕೊಂಡಿದ್ದೀರಾ…? ಸರ್ಕಾರವೇ ಕೊಡುತ್ತೆ ಮೂರು ತಿಂಗಳ ಸಂಬಳ; ಅರ್ಹತೆಗಳೇನು? 

    ಜನರ ಸೇವೆಯಲ್ಲಿದ್ದಾಗಲೇ ರಾಜು ಮೃತಪಟ್ಟಿದ್ದಾರೆ. ಇಂಥ ಎಲ್ಲ ಕೋವಿಡ್​ ವಾರಿಯರ್​ಗಳ ಸೇವೆ ಹೆಮ್ಮೆಯಿದೆ ಎಂದು ಕೇಜ್ರಿವಾಲ್​ ಸುದ್ದಿಗಾರರೊಮದಿಗೆ ಮಾತನಾಡುತ್ತ ಹೇಳಿದರು.

    ಬುಧವಾರವಷ್ಟೇ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದ ಅಗ್ನಿಶಾಮಕ ಇಲಾಖೆ ಅಮಿತ್​ ಬಾಲ್ಯಾನ್​ ಎಂಬುವರ ಕುಟುಂಬಕ್ಕೂ ಕೇಜ್ರಿವಾಲ್​ ಒಂದು ಕೋಟಿ ರೂ. ಪರಿಹಾರ ನೀಡಿದ್ದರು.

    ಎಲ್ಲಿದೆ ನಿತ್ಯಾನಂದನ ಕೈಲಾಸ? ನಡೆಯುತ್ತಿರೋದ್ಹೇಗೆ? ಹಾಂಗ್​ಕಾಂಗ್​, ಅಮೆರಿಕ, ಬ್ರಿಟನ್​ನಲ್ಲಿವೆ ಹತ್ತಾರು ಕಂಪನಿ…!

    ಎಲ್ಲಿದೆ ನಿತ್ಯಾನಂದನ ಕೈಲಾಸ? ನಡೆಯುತ್ತಿರೋದ್ಹೇಗೆ? ಹಾಂಗ್​ಕಾಂಗ್​, ಅಮೆರಿಕ, ಬ್ರಿಟನ್​ನಲ್ಲಿವೆ ಹತ್ತಾರು ಕಂಪನಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts