More

    ತಿಹಾರ್ ಜೈಲಿಗೆ ಕೇಜ್ರಿವಾಲ್.. ಹೊರಗೆ ಎಎಪಿ ಪ್ರತಿಭಟನೆ

    ನವದೆಹಲಿ: ಅಬಕಾರಿ ನೀತಿ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ನ್ಯಾಯಾಲಯವು ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಜಾರಿ ನಿರ್ದೇಶನಾಲಯದ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಕೇಜ್ರೀವಾಲ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಅವರನ್ನು ತಿಹಾರ ಜೈಲಿಗೆ ಕಳೂಹಿಸಲಾಯಿತು.

    ಇದನ್ನೂ ಓದಿ: ಕಾಶಿಯ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳು ಪೂಜೆ ಮುಂದುವರಿಸಲು ಸುಪ್ರೀಂ ಕೋರ್ಟ್ ಅನುಮತಿ

    ಇಡಿ ಕೇಜ್ರಿವಾಲ್ ಅವರನ್ನು 15 ದಿನಗಳ ಕಾಲ ತನ್ನ ವಶಕ್ಕೆ ಕೇಳಿತ್ತು. ಅವರು “ಸಂಪೂರ್ಣವಾಗಿ ಅಸಹಕಾರ” ತೋರುತ್ತಿದ್ದಾರೆ ಎಂದು ಹೇಳಿತ್ತು. ನ್ಯಾಯಾಲಯಕ್ಕೆ ಪ್ರವೇಶಿಸುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಎಎಪಿ ನಾಯಕ, ಸಿಎಂ ಕೇಜ್ರೀವಾಲ್​ “ಪ್ರಧಾನಿ ಏನು ಮಾಡುತ್ತಿದ್ದರೂ (ತನ್ನ ಬಂಧನವನ್ನು ಉಲ್ಲೇಖಿಸಿ) ದೇಶಕ್ಕೆ ಒಳ್ಳೆಯದಲ್ಲ” ಎಂದು ಹೇಳಿದರು.

    ಎಎಪಿ ಸಚಿವರಾದ ಅತಿಶಿ, ಸೌರಭ್ ಭಾರದ್ವಾಜ್ ಮತ್ತು ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಮಾರ್ಚ್ 21 ರಂದು ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಮರುದಿನ, ವಿಶೇಷ ನ್ಯಾಯಾಧೀಶ ಬವೇಜಾ ಮಾರ್ಚ್ 28 ರವರೆಗೆ ಇಡಿ ವಶಕ್ಕೆ ನೀಡಿದ್ದರು. ಇದರ ನಂತರ, ನ್ಯಾಯಾಲಯವು ಏಪ್ರಿಲ್ 1 ರವರೆಗೆ ನಾಲ್ಕು ದಿನಗಳ ಕಾಲ ಅವರ ಕಸ್ಟಡಿ ವಿಚಾರಣೆಯನ್ನು ವಿಸ್ತರಿಸಲು ಕೋರಿದ್ದು ಇಡಿ ಮನವಿಯನ್ನು ಅಂಗೀಕರಿಸಿತ್ತು.

    ಪ್ರತಿಭಟನೆ: ತಮ್ಮ ನಾಯಕನನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಎಎಪಿ ಕಾರ್ಯಕರ್ತರು ತಿಹಾರ ಜೈಲಿನ ಎದುರು ಪ್ರತಿಭಟನೆ ನಡೆಸಿದರು.

    ವಿದ್ಯುತ್ ಬಳಕೆದಾರರಿಗೆ ಸಿಹಿ ಸುದ್ದಿ: ದರ ಇಳಿಕೆ- ಏ.1ರಿಂದಲೇ ಜಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts