

ತಿರುವರೂರು: ಇಂದು ಅಮೆರಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು. ಇಡೀ ಜಗತ್ತು ಮತ ಎಣಿಕೆ ದಿನಕ್ಕಾಗಿ ಕಾಯುತ್ತಿದೆ.
ಹೀಗಿರುವಾಗ ಅಮೆರಿಕ ಉಪಾಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರೀಸ್ ಗೆಲುವಿಗಾಗಿ ತಮಿಳುನಾಡಿನ ತಿರುವರೂರು ಜಿಲ್ಲೆಯ ಪೈಂಗನಾಡು ಗ್ರಾಮದ ಧರ್ಮಸ್ಥ ದೇವಾಲಯದಲ್ಲಿ ಇಂದು ಬೆಳಗ್ಗೆ ವಿಶೇಷ ಪೂಜೆ, ಅಭಿಷೇಕ ನಡೆಸಲಾಯಿತು.
ಹ್ಯಾರಿಸ್ ಮೂಲತಃ ಭಾರತದವರು. ಅವರ ಅಜ್ಜ ಪಿ.ವಿ.ಗೋಪಾಲನ್ ತಮಿಳುನಾಡಿನ ಪೈಂಗನಾಡು ಗ್ರಾಮದವರು. ಇದೇ ಕಾರಣಕ್ಕೆ ಕಮಲಾ ಹ್ಯಾರಿಸ್ ಗೆಲುವಿಗಾಗಿ ಇಲ್ಲಿನ ಜನರು ದೇವರಿಗೆ ಪೂಜೆ ಮಾಡುತ್ತಿದ್ದಾರೆ.
ಪೈಂಗನಾಡು ಗ್ರಾಮ ಮೊದಲು ಅಷ್ಟೊಂದು ಖ್ಯಾತಿಗಳಿಸಿರಲಿಲ್ಲ. ಆದರೆ ಅಮೆರಿಕ ಉಪಾಧ್ಯಕ್ಷೀಯ ಚುನಾವಣೆಗೆ ಕಮಲಾ ಹ್ಯಾರಿಸ್ ನಾಮನಿರ್ದೇಶನಗೊಂಡ ಬಳಿಕ ಈ ಗ್ರಾಮ ಅತ್ಯಂತ ಪ್ರಸಿದ್ಧಿಯಾಗಿದೆ. ಇದನ್ನೂ ಒದಿ: Web Exclusive | ಅರಣ್ಯ ರಕ್ಷಣೆಗೆ ಶಕ್ತಿ ತುಂಬಿದ ನೇಮಕಾತಿ…
ಕಮಲಾ ಹ್ಯಾರಿಸ್ ಅವರ ಪೂರ್ವಜರು ಈ ಗ್ರಾಮವನ್ನು ತೊರೆದಿದ್ದರೂ ಇಲ್ಲಿನ ದೇವಸ್ಥಾನದೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ. ದೇಗುಲ ನವೀಕರಣಕ್ಕಾಗಿ ಕಮಲಾ ಅವರ ಅಜ್ಜ, ಕುಟುಂಬದ ಇತರ ಸದಸ್ಯರು ದೇಣಿಗೆಗಳನ್ನೂ ನೀಡಿದ್ದಾರೆ.
ಕಮಲಾ ಹ್ಯಾರಿಸ್ ಅವರು, ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಮೊದಲ ಭಾರತೀಯ ಮೂಲದ ಮಹಿಳೆಯಾಗಿದ್ದಾರೆ. (ಏಜೆನ್ಸೀಸ್)