

ಹಿನ್ನಡೆ-ವಿವಾದ
ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ವಿುಸುವ 5.70 ಬಿಲಿಯನ್ ಡಾಲರ್ ಅನುದಾನಕ್ಕೆ ಸಂಸತ್ ಒಪ್ಪಿಗೆ ನೀಡದ ಕಾರಣ ದೇಶವನ್ನು 35 ದಿನ ಸ್ತಬ್ಧಗೊಳಿಸಿ ವಿಶೇಷ ಅಧಿಕಾರದ ಮೂಲಕ ಯೋಜನೆಗೆ ಆದೇಶ.
ಜೋ ಬಿಡೆನ್ ಮತ್ತು ಅವರ ಪುತ್ರ ಹಂಟನ್ ಬಿಡೆನ್ ಉಕ್ರೇನ್ನಲ್ಲಿ ಹೊಂದಿರುವ ಉದ್ಯಮಗಳ ಮೇಲೆ ತನಿಖೆಗೆ ಆದೇಶಿಸುವಂತೆ ಉಕ್ರೇನ್ ಅಧ್ಯಕ್ಷರ ಮೇಲೆ ಒತ್ತಡ ಹೇರುವ ಮೂಲಕ ಅಧಿಕಾರ ದುರ್ಬಳಕೆ ಆರೋಪದ ಮೇಲೆ ವಾಗ್ದಂಡನೆ ಗೊತ್ತುವಳಿ ಮಂಡಿಸಲಾಗಿತ್ತು.
ಸಂಸತ್ನ ಕೆಳಮನೆಯಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕಿತ್ತು. ಆದರೆ ಮೇಲ್ಮನೆ ಸೆನೆಟ್ನಲ್ಲಿ ಟ್ರಂಪ್ ಆರೋಪ ಮುಕ್ತರಾದರು.
ವಿಶ್ವಸಂಸ್ಥೆಯ ಹವಾಮಾನ ಕಾರ್ಯಕ್ರಮ ಸಂಬಂಧಿತ ಎಲ್ಲ ಅನುದಾನ ರದ್ದು, 2017ರ ಜೂನ್ನಲ್ಲಿ ಪ್ಯಾರಿಸ್ ಒಪ್ಪಂದದಿಂದ ಹೊರಕ್ಕೆ
ಕರೊನಾ ಸೋಂಕಿನ ಬಗ್ಗೆ ಮೊದಲೇ ಎಚ್ಚರಿಕೆ ನೀಡಲಿಲ್ಲ. ಇದರ ದುಷ್ಪರಿಣಾಮ, ವ್ಯಾಪಕತೆ ಬಗ್ಗೆ ಮಾಹಿತಿ ಮುಚ್ಚಿಟ್ಟಿತು ಎಂದು ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಕಿಡಿ. ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಕೈಗೊಂಬೆಯಾಗಿದೆ ಎಂದು ಆರೋಪಿಸಿ ಅನುದಾನಕ್ಕೆ ತಡೆ.
ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾ ಜತೆಗೆ ವ್ಯವಹಾರ ಇರಿಸಿಕೊಂಡ ದೇಶಗಳ ಮೇಲೂ ನಿರ್ಬಂಧದ ಕಾನೂನು.
ಟ್ರಂಪ್ ಆಡಳಿತದಲ್ಲಿ ಆರ್ಥಿಕತೆ ಕುಸಿತ, ನಿರುದ್ಯೋಗದ ಪ್ರಮಾಣ ಹೆಚ್ಚಳ
ಅಮೆರಿಕನ್ನರಿಗೆ ಆದ್ಯತೆ ನೀಡಲು ಎಚ್ -1 ಬಿ ವೀಸಾಕ್ಕೆ ನಿರ್ಬಂಧ ಮತ್ತು ಹೊಸ ವೀಸಾ ನೀತಿ ಘೋಷಣೆ.
ಮೈಕ್ ಪೆನ್ಸ್
(ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ)
ಜನನ: 1959ರ ಜೂನ್ 7, ಇಂಡಿಯಾನಾದ ಕೊಲಂಬಸ್ ನಗರ
ತಂದೆ-ತಾಯಿ: ಎಡ್ವರ್ಡ್ ಜೋಸೆಫ್ ಪೆನ್ಸ್ ಜೂನಿಯರ್, ಆನ್ ಜೇನ್
ಒಡಹುಟ್ಟಿದವರು- ಐದು ಮಂದಿ. ಸೋದರ ಜಾರ್ಜ್ ಪೆನ್ಸ್ ಸಂಸದ.
ಪತ್ನಿ: ಕರೆನ್ ಬ್ಯಾಟನ್
ಮಕ್ಕಳು: ಷಾರ್ಲೆಟ್ ಪೆನ್ಸ್ ಬಾಂಡ್, ಆಂಡ್ರೆ ಪೆನ್ಸ್ (ಹೆಣ್ಣು ಮಕ್ಕಳು), ಮೈಕಲ್ ಪೆನ್ಸ್ (ಮಗ)
ಶಿಕ್ಷಣ- ವೃತ್ತಿ:ಬಿಎ ಮತ್ತು ಜ್ಯೂರಿಸ್ ಡಾಕ್ಟರ್ (ಕಾನೂನು) ಪದವಿ. ವಕೀಲ,ರಾಜಕಾರಣ, ಉದ್ಘೋಷಕ.
ಪ್ರಮುಖ ಆಸ್ತಿ: 20 ಸಾವಿರ ಕೋಟಿ ರೂಪಾಯಿ ಒಟ್ಟು ಆಸ್ತಿ ಮೌಲ್ಯ.
ಖ್ಯಾತಿ-ವಿಖ್ಯಾತಿ: ಹಾಲಿ ಉಪಾಧ್ಯಕ್ಷ, ಇಂಡಿಯಾನಾದ ಗವರ್ನರ್ (2013-2017), 2001ರಿಂದ 2013ರವರೆಗೆ ಹೌಸ್ ಆಫ್ ರೆಪ್ರಸೆಂಟಟೀವ್ಸ್ ಸದಸ್ಯ. 1983ರವರೆಗೆ ಡೆಮಾಕ್ರಟಿಕ್ ಪಕ್ಷದ ಸದಸ್ಯ.
ಹವ್ಯಾಸ:ಪ್ರಾಣಿಗಳನ್ನು ಸಾಕುವುದು, ಕುದುರೆ ಸವಾರಿ, ಸೈಕ್ಲಿಂಗ್, ಬೈಕ್ ರೈಡಿಂಗ್.
ಆರೋಪ: ಕರೊನಾ ಸೋಂಕಿನ ಶ್ವೇತಭವನ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿದ್ದೂ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲ.
ಬಿಡೆನ್
ಜನನ:1942ರ ನವೆಂಬರ್ 20, ಪೆನ್ಸಿಲ್ವೇನಿಯಾದ ಸ್ಕ್ರಾಂಟನ್
ತಂದೆ-ತಾಯಿ: ಜೋಸೆಫ್ ಆರ್. ಬಿಡೆನ್ ಸೀನಿಯರ್ ಮತ್ತು ಕ್ಯಾಥರೀನ್ ಯುಜೆನಿಯಾ ಫೆನ್ನೆಗನ್.
ಒಡಹುಟ್ಟಿದವರು- ಇಬ್ಬರು ಸೋದರರು, ಓರ್ವ ಸೋದರಿ
ಮಡದಿಯರು: ನೀಲಿಯಾ ಹಂಟರ್ ಮತ್ತು ಜಿಲ್ ಜೇಕಬ್ಸ್
ಮಕ್ಕಳು: ಬ್ಯೂ ಬಿಡೆನ್ , ಹಂಟರ್ ಬಿಡೆನ್ (ಗಂಡು ಮಕ್ಕಳು). ನವೋಮಿ ಕ್ರಿಸ್ಟಿನಾ ಬಿಡೆನ್, ಆಶ್ಲೆ ಬಿಡೆನ್ (ಹೆಣ್ಣು ಮಕ್ಕಳು)
ಶಿಕ್ಷಣ- ವೃತ್ತಿ: ಬಿಎ, ಜ್ಯೂರಿಸ್ ಡಾಕ್ಟರ್ (ಕಾನೂನು)
ಪದವಿ. ವಕೀಲ, ರಾಜಕಾರಣಿ, ಲೇಖಕ.
ಏಳು-ಬೀಳು: ಮೊದಲ ಪತ್ನಿ ನೀಲಿಯಾ ಮತ್ತು ಒಂದು ವರ್ಷದ ಪುತ್ರಿ ನವೋಮಿ 1972ರ ಡಿಸೆಂಬರ್ನಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವು. 1977ರಲ್ಲಿ ಜಿಲ್ ಜೇಕಬ್ಸ್ ಜತೆ ವಿವಾಹ. ಡಿಲವೇರ್ನ ಅಟಾರ್ನಿ ಜನರಲ್ ಆಗಿದ್ದ ಪುತ್ರ ಬ್ಯೂ ಬಿಡೆನ್ ಮಿದುಳು ಕ್ಯಾನ್ಸರ್ನಿಂದ 2015ರಲ್ಲಿ ನಿಧನ.
ಪ್ರಮುಖ ಆಸ್ತಿ:ಒಟ್ಟಾರೆ ಆಸ್ತಿ ಮೌಲ್ಯ 67 ಕೋಟಿ ರೂಪಾಯಿ. ರಿಯಲ್ ಎಸ್ಟೇಟ್ನಲ್ಲಿ ಬಹುಪಾಲು ಹೂಡಿಕೆ.
ಹೆಗ್ಗಳಿಕೆ: ಬರಾಕ್ ಒಬಾಮ ಅಧ್ಯಕ್ಷರಾಗಿದ್ದಾಗ 47ನೇ (2009-2017) ಉಪಾಧ್ಯಕ್ಷ. ಡೆಲವೇರ್ನಿಂದ 1972ರಲ್ಲಿ ಮೊದಲ ಬಾರಿಗೆ ಸೆನೆಟ್ಗೆ ಗೆಲುವು. ಅತ್ಯಂತ ಕಿರಿಯ ವಯಸ್ಸಿನ ಸಂಸದ ಎಂಬ ಹೆಗ್ಗಳಿಕೆ.
ಹವ್ಯಾಸ: ಫುಟ್ಬಾಲ್, ಮೋಟಾರ್ ಸೈಕಲ್ ಜಂಪಿಂಗ್, ಸ್ಕೀಯಿಂಗ್. 14 ಪುಸ್ತಕಗಳ ಕರ್ತೃ.
ದೌರ್ಬಲ್ಯ: ಬಿಲ್ ಕ್ಲಿಂಟನ್, ಬರಾಕ್ ಒಬಾಮ, ಡೊನಾಲ್ಡ್ ಟ್ರಂಪ್ರಂತೆ ವರ್ಚಸ್ವಿಯಲ್ಲವೆಂಬ ಟೀಕೆ, ಬಾಲ್ಯದಿಂದಲೂ ತೊದಲುವಿಕೆ ಸಮಸ್ಯೆ, ಭಾಷಣದ ಚತುರಗಾರಿಕೆ ಇಲ್ಲವೆಂಬ ಆರೋಪ ಟ್ರಂಪ್ರಂತೆ ಆಕ್ರಮಣಶೀಲತೆ ಇಲ್ಲ
ಶಕ್ತಿ : ವೃತ್ತಿಪರ ರಾಜಕಾರಣಿ, ವಿವಾದದಿಂದ ಬಹುತೇಕ ದೂರ, ಶ್ರೀಸಾಮಾನ್ಯರಿಗೂ ಸುಲಭವಾಗಿ ಸಿಗುವ ವ್ಯಕ್ತಿ, ದೇಶದ ಏಕತೆ, ಅಲ್ಪಸಂಖ್ಯಾತರ ಪರ ದನಿ, ಜನಾಂಗೀಯ ಹಿಂಸೆಯ ಕಟುವಿರೋಧಿ, ಚುನಾವಣಾ ನಿಧಿ ಸಂಗ್ರಹದಲ್ಲಿ ನಿಪುಣಗಾರಿಕೆ
ಬಿಡೆನ್ ಸಾಧನೆ:1970ರಲ್ಲಿ ನ್ಯೂ ಕ್ಯಾಸಲ್ ಕೌಂಟಿ ಕೌನ್ಸಿಲರ್. ಸೆನೆಟ್ನ ವಿದೇಶಿ ಬಾಂಧವ್ಯ ಸಮಿತಿ, ನ್ಯಾಯಾಂಗ ಸಮಿತಿಯ ಅಧ್ಯಕ್ಷ. ಆರು ಅವಧಿಗೆ ಸೆನೆಟರ್. ಆರು ದಶಕಗಳ ರಾಜಕೀಯ ಅನುಭವ. 2017ರಲ್ಲಿ ಅಧ್ಯಕ್ಷೀಯ ಫ್ರೀಡಂ ವಿಥ್ ಡಿಸ್ಟಿಂಕ್ಷನ್ ಪದಕದ ಗೌರವ. ಸೆನೆಟ್ನ ವಿದೇಶಿ ಬಾಂಧವ್ಯ ಸಮಿತಿ, ನ್ಯಾಯಾಂಗ ಸಮಿತಿಯ ಅಧ್ಯಕ್ಷ. 1970ರಲ್ಲಿ ನ್ಯೂ ಕ್ಯಾಸಲ್ ಕೌಂಟಿ ಕೌನ್ಸಿಲರ್. 2017ರಲ್ಲಿ ಅಧ್ಯಕ್ಷೀಯ ಫ್ರೀಡಂ ವಿಥ್ ಡಿಸ್ಟಿಂಕ್ಷನ್ ಪದಕದ ಗೌರವ.
ಹಿನ್ನಡೆ-ವಿವಾದ: 1987ರಲ್ಲೇ ಸಂಭಾವ್ಯ ಅಧ್ಯಕ್ಷೀಯ ಚುನಾವಣಾ ಸ್ಪಧೆಯಲ್ಲಿ ವಿಫಲ ಪ್ರಯತ್ನ. 2008ರಲ್ಲಿ ಸಂಭನೀಯ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಸ್ಪರ್ಧೆಯಲ್ಲಿ ಐಯೋವಾದ ಕಾಕಸ್ ಆಯ್ಕೆಯಲ್ಲಿ 5ನೇ ಸ್ಥಾನ. ಉಕ್ರೇನ್ನಲ್ಲಿ ಪುತ್ರ ಹಂಟರ್ ಹೊಂದಿರುವ ಉದ್ಯಮದಲ್ಲಿ ಅವ್ಯವಹಾರದ ಆರೋಪ. ಹಂಟರ್ ಮಾದಕ ದ್ರವ್ಯ ವ್ಯಸನಿ, ವ್ಯಭಿಚಾರಿ ಎಂಬ ಆಪಾದನೆ ಇದೆ.
ಕಮಲಾ ಹ್ಯಾರಿಸ್
(ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ)
ಜನನ: 1964ರ ಅ. 20, ಕ್ಯಾಲಿಫೋನಿರ್ಯಾದ ಓಕ್ಲ್ಯಾಂಡ್
ತಂದೆ-ತಾಯಿ:ಡೊನಾಲ್ಡ್ ಜೆ. ಹ್ಯಾರಿಸ್, ಶ್ಯಾಮಲಾ.
ಒಡಹುಟ್ಟಿದವರು: ಓರ್ವ ಸೋದರಿ
ಪತಿ:ಡೌಗ್ಲಾಸ್ ಎಮ್ಹಾಫ್
ಶಿಕ್ಷಣ- ವೃತ್ತಿ: ಬಿಎ ಮತ್ತು ಜ್ಯೂರಿಸ್ ಡಾಕ್ಟರ್ (ಕಾನೂನು) ಪದವಿ. ಅಟಾರ್ನಿ ಜನರಲ್, ರಾಜಕಾರಣಿ.
ಪ್ರಮುಖ ಆಸ್ತಿ: ಒಟ್ಟಾರೆ ಆಸ್ತಿ ಮೌಲ್ಯ 47 ಕೋಟಿ ರೂಪಾಯಿ.
ಖ್ಯಾತಿ-ವಿಖ್ಯಾತಿ: ಜಿಲ್ಲಾ ಡೆಪ್ಯೂಟಿ ಅಟಾರ್ನಿ, ಜಿಲ್ಲಾ ಅಟಾರ್ನಿ ಹುದ್ದೆಯಿಂದ ಕ್ಯಾಲಿಫೋನಿರ್ಯಾ ರಾಜ್ಯದ
ಅಟಾರ್ನಿ ಜನರಲ್ ಆಗಿ ಹಂತ ಹಂತವಾಗಿ ಬಡ್ತಿ. 2016ರಲ್ಲಿ ಸೆನೆಟ್ಗೆ ಮೊದಲ ಬಾರಿಗೆ ಆಯ್ಕೆ. ಸೆನೆಟ್ ಪ್ರವೇಶಿಸಿದ ಮೊದಲ ದಕ್ಷಿಣ ಏಷ್ಯಾದ ಮೂಲದವರೆಂಬ ಹೆಗ್ಗಳಿಕೆ. ಉಪಾಧ್ಯಕ್ಷ ಹುದ್ದೆಗೆ ಅಭ್ಯರ್ಥಿಯಾಗಿ ನಿಯೋಜನೆಯಾದ ಮೂರನೇ ಮಹಿಳೆ ಮತ್ತು ಏಷ್ಯಾ ಮೂಲದ ಮೊದಲ ವ್ಯಕ್ತಿ.
ಹವ್ಯಾಸ: ಜನಾಂಗೀಯ ತಾರತಮ್ಯದ ವಿರುದಟಛಿ ಹೋರಾಟ, ಲಿಂಗಸಮಾನತೆಗೆ ಹೋರಾಟ, ಕೌಟುಂಬಿಕ ಮೌಲ್ಯಕ್ಕೆ ಆದ್ಯತೆ, ಭಾರತದ ಆಹಾರ ವಿಶೇಷವಾಗಿ ಇಡ್ಲಿ ಇಷ್ಟ.