

ನವದೆಹಲಿ: ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಆಕೆಯ ಪುತ್ರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ದೆಹಲಿಯಿಂದ ಗೋವಾಕ್ಕೆ ತೆರಳಿದ್ದಾರೆ. ಕೆಲ ದಿನಗಳ ಕಾಲ ಅವರಿಬ್ಬರು ಗೋವಾದಲ್ಲಿಯೇ ಇರಲಿದ್ದಾರೆ ಎನ್ನಲಾಗಿದೆ.
ಸೋನಿಯಾ ಗಾಂಧಿ ಅವರು ಕೆಲ ತಿಂಗಳಿನಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಶ್ವಾಸಕೋಶದಲ್ಲಿ ಇನ್ಫೆಕ್ಷನ್ ಆಗಿರುವುದಾಗಿ ತಿಳಿಸಲಾಗಿದೆ. ಅವರಿರುವ ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ದಿನೇದಿನೆ ಹೆಚ್ಚುತ್ತಿದೆ. ಹೀಗಿರುವಾಗ ಅವರು ಅಲ್ಲೇ ಉಳಿದರೆ, ಆರೋಗ್ಯ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಅದೇ ಹಿನ್ನೆಲೆಯಲ್ಲಿ ಅವರು ದೆಹಲಿಯಿಂದ ಗೋವಾಕ್ಕೆ ತೆರಳಿದ್ದಾರೆ. ಗೋವಾದ ಸೌತ್ ಗೋವಾ ರೆಸಾರ್ಟ್ನಲ್ಲಿ ವಾಸ ಹೂಡಿದ್ದಾರೆ. ವಾಯು ಮಾಲಿನ್ಯ ಪ್ರಮಾಣ ತಗ್ಗುವವರೆಗೂ ಅವರು ದೆಹಲಿಗೆ ಮರಳುವುದಿಲ್ಲ ಎಂದು ಕೆಲ ಮೂಲಗಳು ತಿಳಿಸಿವೆ. (ಏಜೆನ್ಸೀಸ್)